ನಟ ನಾನಿ ಸಿನಿಮಾ ಮಾಡೋದು ವೇಸ್ಟ್: ಅವರಿಗೆ ಆ ಕೆಲಸ ಬೆಟರ್, ನಟಿ ರೋಜಾ ಆ ಕ್ರೋ ಶ

0 3

ಆಂಧ್ರಪ್ರದೇಶದಲ್ಲಿ ಸಿಎಂ ಜಗನ್ ಸರ್ಕಾರ ಸಿನಿಮಾ ಟಿಕೆಟ್ ಗಳ ದರದಲ್ಲಿ ಭಾರೀ ಇಳಿಕೆ ಮಾಡಿರುವ ವಿಷಯ ಈಗಾಗಲೇ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ. ಹಲವು ಸಿನಿಮಾ ನಟರು ಸರ್ಕಾರದ ಈ ನಿರ್ಧಾರವನ್ನು ಟೀಕಿಸಿ ತಮ್ಮ ಅ ಸಮಾಧಾನವನ್ನು ಹೊರಹಾಕಿದ್ದಾರೆ. ಈ ವಿಚಾರವಾಗಿ ಇತ್ತೀಚಿಗಷ್ಟೇ ಬಿಡುಗಡೆ ಆದ ನಾನಿ ನಾಯಕನಾಗಿರು ಶ್ಯಾಮ ಸಿಂಗ್ ರಾಯ್ ಸಿನಿಮಾದ ಕಾರ್ಯಕ್ರಮವೊಂದರಲ್ಲಿ ನಟ ನಾನಿ ಸಹಾ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅವರು ಸರ್ಕಾರದ ಈ‌ ನಿರ್ಧಾರದ ಬಗ್ಗೆ ಮಾತನಾಡುತ್ತಾ ತಮ್ಮ ಸಿ ಟ್ಟ ನ್ನು ವ್ಯಕ್ತಪಡಿಸಿದ್ದರು.

ನಾನಿ ಅವರು ಮಾತನಾಡುತ್ತಾ, ಆಂಧ್ರಪ್ರದೇಶದಲ್ಲಿ ಸಿನಿಮಾ ಥಿಯೇಟರ್‌ ಗಳಿಗಿಂತಲೂ ಹೆಚ್ಚಿನ ಲಾಭವನ್ನು ದಿನಸಿ ಅಂಗಡಿಗಳು ಮಾಡುತ್ತಿದ್ದು, ಸಿನಿಮಾ ಟಿಕೆಟ್ ದರ ಇಳಿಸಿರುವುದು ಸರ್ಕಾರದ ಬುದ್ಧಿಹೀನ ನಿರ್ಧಾರವೆಂದು ನಾನಿ ಹೇಳುತ್ತಾ ಇದು ಸರ್ಕಾರವು ಪ್ರೇಕ್ಷಕರಿಗೆ ಮಾಡಿದಂತಹ ಅವಮಾನ ಎನ್ನುವ ಮಾತನ್ನು ಹೇಳಿದ್ದರು. ನಾನಿ ನೀಡಿದ ಹೇಳಿಕೆಗೆ ವೈ ಆರ್ ಎಸ್ ಕಾಂಗ್ರೆಸ್ ನ ಶಾಸಕಿ, ನಟಿ ರೋಜಾ ಅವರು ತೀವ್ರ ಆಕ್ಷೇಪವನ್ನು ಹೊರಹಾಕಿದ್ದಾರೆ.

ನಟಿ ರೋಜಾ ಮಾತನಾಡುತ್ತಾ ಚಿತ್ರಮಂದಿರದಲ್ಲಿ ಹೆಚ್ಚು ಲಾಭವಿಲ್ಲದೇ ಹೋದರೆ ನಟ ನಾನಿ ಸಿನಿಮಾಗಳಲ್ಲಿ ನಟಿಸುವುದನ್ನು ಬಿಟ್ಟು ದಿನಸಿ ಅಂಗಡಿಯನ್ನು ಇಟ್ಟುಕೊಳ್ಳಲಿ, ಅವರು ಸಿನಿಮಾ ಮಾಡೋದು ವೇಸ್ಟ್ ಎಂದು ಕಿಡಿ ಕಾರಿದ್ದಾರೆ ನಟಿ ರೋಜಾ. ಸರ್ಕಾರ ನೇಮಕ ಮಾಡಿರುವ ಸಮಿತಿ ಎಲ್ಲವನ್ನೂ ಪರಿಶೀಲನೆ ಮಾಡಿ ದರವನ್ನು ನಿಗಧಿ ಪಡಿಸಿದೆ. ಆದರೆ ನಾನಿ ಹಾಗೂ ಇನ್ನೂ ಕೆಲವರು ತಮ್ಮ ಸಿನಿಮಾಗಳು ಮತ್ತು ದೊಡ್ಡ ಬಜೆಟ್ ನ ಸಿನಿಮಾಗಳ ಬಗ್ಗೆ ಯೋಚಿಸುತ್ತಿದ್ದಾರೆಯೇ ಹೊರತು ಸಣ್ಣ ಸಿನಿಮಾಗಳನ್ನಲ್ಲ ಎಂದಿದ್ದಾರೆ.

Leave A Reply

Your email address will not be published.