ನಟ ನರೇಶ್ ಮತ್ತು ಪವಿತ್ರ ಲೋಕೇಶ್ ಮದುವೆ: ನಟನ ಬಗ್ಗೆ 3ನೇ ಪತ್ನಿಯಿಂದ ಶಾಕಿಂಗ್ ಹೇಳಿಕೆ!!

Entertainment Featured-Articles Movies News

ಕಳೆದೊಂದು ವಾರದಿಂದಲೂ ಸಹಾ ಟಾಲಿವುಡ್ ಮಾತ್ರವೇ ಅಲ್ಲದೇ ಕನ್ನಡ ಚಿತ್ರರಂಗದಲ್ಲೂ ಸಹಾ ಒಂದು ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಇದಕ್ಕೆ ಕಾರಣ ಈ ವಿಚಾರದಲ್ಲಿ ಸುದ್ದಿಯಾಗಿರುವುದು ಒಬ್ಬ ಕನ್ನಡ ಮೂಲದ ನಟಿ ಹಾಗೂ ತೆಲುಗು ಮೂಲದ ನಟ. ಹೌದು ಕನ್ನಡದ ನಟಿ, ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಪವಿತ್ರ ಲೋಕೇಶ್ ಹಾಗೂ ತೆಲುಗು ಚಿತ್ರರಂಗದ ಹಿರಿಯ ನಟ ನರೇಶ್ ಅವರು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈಗಾಗಲೇ ಮೂರು ಮದುವೆ ಆಗಿರುವ ನರೇಶ್ ನಾಲ್ಕನೇ ಮದುವೆಗೆ ಸಜ್ಜಾಗಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಮಾದ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ್ದು ತಮ್ಮ ಪತಿ ನಟ ನರೇಶ್ ಅವರ ಬಗ್ಗೆ ಸ್ಪೋ ಟ ಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಬೆಂಗಳೂರು ಮೂಲದವರಾಗಿದ್ದಾರೆ‌. ಇನ್ನು ಇತ್ತೀಚಿಗೆ ನರೇಶ್ ಮತ್ತು ಪವಿತ್ರ ಲೋಕೇಶ್ ಅವರ ಸುದ್ದಿಗಳು ಹೊರ ಬಂದಾಗ, ಇವರು ಈಗಾಗಲೇ ಮದುವೆ ಆಗಿದ್ದಾರೆ ಎನ್ನುವ ಮಾತು ಕೇಳಿ ಬಂತು. ಆದರೆ ರಮ್ಯಾ ಅವರಿಗೆ ವಿಚ್ಛೇದನ ನೀಡದೇ ನರೇಶ್ ನಾಲ್ಕನೇ ಮದುವೆ ಹೇಗೆ ಆದರು ಎನ್ನುವ ಪ್ರಶ್ನೆ ಕೂಡಾ ಎದುರಾಗಿತ್ತು.

ರಮ್ಯಾ ಅವರು ಕನ್ನಡದ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಪತಿಯ ಬಗ್ಗೆ ಮಾತನಾಡಿದ್ದಾರೆ. ನರೇಶ್ ಒಬ್ಬ ಹೆಣ್ಣು ಬಾಕ, ಅವರ ಆ ಗುಣ ನನಗೆ ತಿಳಿದಿದ್ದು ಮದುವೆಯಾದ ಮೂರು ವರ್ಷಗಳ ನಂತರ ಎಂದು ರಮ್ಯಾ ಅವರು ಹೇಳಿದ್ದಾರೆ. ನಮ್ಮ ಅತ್ತೆ ಅವರದ್ದು ತುಂಬು ಕುಟುಂಬ, ಎಲ್ಲರೂ ಒಟ್ಟಾಗಿ ಇರುತ್ತೇವೆ, ಪ್ರತಿಯೊಂದು ಕ್ಷಣವನ್ನು ಅನುಭವಿಸೋಣ ಎಂದು ಹೇಳಿದ್ದರು. ಆದರೆ ಇವರು ಹೆಂಗಸರು ಎಂದರೆ ಬಾಯಿ ಬಿಡುತ್ತಿದ್ದರು ಎಂದು ನರೇಶ್ ಬಗ್ಗೆ ಹೇಳಿದ್ದಾರೆ.

ಇದೇ ವೇಳೆ ರಮ್ಯಾ ಅವರು ತಮ್ಮ ಪತಿ ನರೇಶ್ ಹಾಗೂ ನಟಿ ಪವಿತ್ರ ಲೋಕೇಶ್ ಅವರು ಕಳೆದ ಆರು ವರ್ಷಗಳಿಂದಲೂ ಲಿವಿನ್ ರಿಲೇಶನ್ ಶಿಪ್ ನಲ್ಲಿ ಇದ್ದಾರೆ ಎನ್ನುವ ವಿಚಾರವನ್ನು ಸಹಾ ತಿಳಿಸಿದ್ದಾರೆ. ಈಗ ಅವರು ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇನ್ನು ನಟಿ ಪವಿತ್ರ ಲೋಕೇಶ್ ಅವರು ಸಹಾ ತಮ್ಮ ಪತಿಯಿಂದ ಕಾನೂನಿನ ಪ್ರಕಾರ ವಿಚ್ಚೇದನ ಪಡೆಯಬೇಕಾಗಿದ್ದು, ಅದು ದೊರೆತ ನಂತರ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರು ವಿವಾಹ ಆಗಬಹುದು ಎನ್ನುವ ಮಾತುಗಳು ಕೇಳಿ ಬಂದಿದೆ.

Leave a Reply

Your email address will not be published.