ನಟ ದ್ವಾರಕೀಶ್ ಅವರಿಗೆ ಇಂತಹ ಪರಿಸ್ಥಿತೀನಾ:ಕೇವಲ ಒಂದು ತಿಂಗಳ ಗುಡುವು ಕೊಟ್ಟ ಕೋರ್ಟ್

Written by Soma Shekar

Published on:

---Join Our Channel---

ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ್ ಅವರು ಸಿನಿಮಾ ರಂಗದಲ್ಲಿ ನಟನಾಗಿ ಮಾತ್ರವೇ ಅಲ್ಲದೇ ಸಿನಿಮಾ ನಿರ್ಮಾಪಕ ಹಾಗೂ ನಿರ್ದೇಶಕನಾಗಿಯೂ ದೊಡ್ಡ ಹೆಸರನ್ನು ಮಾಡಿದ್ದಾರೆ. ನಿರ್ಮಾಪಕನಾಗಿ ತಮ್ಮ ಸಂಸ್ಥೆಯ ಮೂಲಕ ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಅವರು ನೀಡಿರುವ ಕೊಡುಗೆ ಅಪಾರವಾಗಿದೆ. ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರನ್ನೇ ಗಳಿಸಿರುವ ದ್ವಾರಕೀಶರವರ ಇಂದಿನ ಪರಿಸ್ಥಿತಿಯನ್ನು ನೋಡಿದಾಗ ಒಂದು ಕ್ಷಣ ಬೇಸರವಾಗುತ್ತದೆ. ಅದೇ ವೇಳೆ ಅವರ ಮೇಲೆ ಕೇಳಿ ಬಂದಿರುವ ದೂರು ಬೇಸರವನ್ನು ಉಂಟು ಮಾಡುತ್ತದೆ.

ಸಿನಿಮಾಗಳ ಮೂಲಕವೇ ಕೋಟಿ ಕೋಟಿ ಹಣ ಗಳಿಸುತ್ತಿದ್ದ ದ್ವಾರಕೀಶ್ ಅವರ ಇಂದಿನ ಪರಿಸ್ಥಿತಿ ಮಾತ್ರ ಹಿಂದಿನಂತೆ ಇಲ್ಲ. ಅವರ ನಿರ್ಮಾಣದ ಕೆಲವು ಸಿನಿಮಾಗಳು ಅವರಿಗೆ ಯಶಸ್ಸನ್ನು ನೀಡಿತ್ತಾದರೂ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಕಂಡ ಸೋಲು ಅವರನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದೆ. ಪ್ರಸ್ತುತ ಅಂತಹದೇ ಒಂದು ಸಾಲದ ವಿಚಾರವಾಗಿ ಕೋರ್ಟ್ ಅವರಿಗೆ ಒಂದು ತಿಂಗಳ ಗಡುವನ್ನು ನೀಡಿ, ಈ ಅವಧಿಯಲ್ಲಿ ಅವರು ಪಡೆದಿರುವ ಸಾಲವೊಂದನ್ನು ಮರುಪಾವತಿ ಮಾಡುವಂತೆ ಆದೇಶವನ್ನು ಹೊರಡಿಸಿದೆ.

2013ರಲ್ಲಿ ದ್ವಾರಕೀಶ್ ಅವರು ನಿರ್ಮಾಣ‌ ಮಾಡಿದ್ದ ಚಾರುಲತಾ ಸಿನಿಮಾ ಬಿಡುಗಡೆಗೆ ಸಂಬಂಧಿಸಿದಂತೆ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್ ಅವರ ಬಳಿ 50 ಲಕ್ಷ ರೂಪಾಯಿಗಳ ಸಾಲವನ್ನು ಪಡೆದುಕೊಂಡಿದ್ದರು. ಆದರೆ ಸಾಲವನ್ನು ಮರುಪಾವತಿ ಮಾಡಲಿಲ್ಲ, ಅಲ್ಲದೇ ಹಣವನ್ನು ಕೇಳಲು ಹೋದ ಚಂದ್ರಶೇಖರ್ ಅವರ ಮೇಲೆ ದ್ವಾರಕೀಶ್ ಅವರೇ ದೂರನ್ನು ದಾಖಲಿಸಿದ್ದರು. ಬೇರೆ ದಾರಿಯಿಲ್ಲದೇ ಕೆಸಿಎನ್ ಚಂದ್ರಶೇಖರ್ ಅವರು ಸಾಲವನ್ನು ವಾಪಸ್ಸು ಪಡೆಯಲು ಕೋರ್ಟ್ ಮೊರೆ ಹೋಗಬೇಕಾಯಿತು.

ಅಂದು ದ್ವಾರಕೀಶ್ ಅವರು ಸಾಲ ಪಡೆಯುವಾಗ ಚೆಕ್ ಒಂದನ್ನು ನೀಡಿದ್ದರು, ಆದರೆ ಆನಂತರ ದ್ವಾರಕೀಶ್ ಅವರು ನಾನು ಯಾವುದೇ ಚಕ್ ನೀಡಿಲ್ಲ, ಚೆಕ್ ಗೆ ಸಹಿ ಕೂಡಾ ಮಾಡಿಲ್ಲ ಎನ್ನುವ ಮಾತನ್ನು ಹೇಳಿದ್ದರು. ಆದರೆ ಫೊರೆನ್ಸಿಕ್ ವರದಿಯಲ್ಲಿ ಅದು ದ್ವಾರಕೀಶ್ ಅವರ ಸಹಿ ಎಂದು ಸಾಬೀತಾಗಿತ್ತು. 2019ರಲ್ಲಿ ದ್ವಾರಕೀಶ್ ಅವರಿಗೆ ಸಾಲವನ್ನು ವಾಪಸ್ ನೀಡುವಂತೆ ಆದೇಶ ನೀಡಿತು. ಆದರೆ ದ್ವಾರಕೀಶ್ ಅವರು ನ್ಯಾಯಾಲಯದ ತೀರ್ಪಿನ ವಿರುದ್ಧ ಸೆಷೆನ್ಸ್ ಕೋರ್ಟ್ ಮೆಟ್ಟಿಲೇರಿದ್ದರು.

ಅಲ್ಲಿ ಈ ಪ್ರಕರಣದ ವಿಚಾರಣೆ ನಡೆದು ಕೆಳಹಂತದ ಕೋರ್ಟಿನ ತೀರ್ಪನ್ನು ಸೆಷನ್ಸ್ ಕೋರ್ಟ್ ಎತ್ತಿ ಹಿಡಿದಿದೆ. ದ್ವಾರಕೀಶ್ ಅವರು ಸಾಲ ಪಡೆದಿರುವ ಸಾಬೀತಾಗಿದೆ. ಅಲ್ಲದೇ ಆದರೆ ಒಂದು ತಿಂಗಳ ಗಡುವನ್ನು ನೀಡಿದ್ದು 50 ಲಕ್ಷ ರೂಪಾಯಿಗಳಿಗೆ ಇನ್ನೂ ಎರಡು ಲಕ್ಷ ರೂಪಾಯಿಗಳನ್ನು ಸೇರಿಸಿ 52 ಲಕ್ಷ ರೂಪಾಯಿಗಳನ್ನು ಕೆಸಿಎನ್ ಚಂದ್ರಶೇಖರ್ ಅವರಿಗೆ ನೀಡುವಂತೆ ಆದೇಶವನ್ನು ಹೊರಡಿಸಲಾಗಿದೆ. ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸ್ಥಾನ, ಹೆಸರು ಪಡೆದ ಹಿರಿಯ ನಟ ಹಣದ ವಿಚಾರದಲ್ಲಿ ನಡೆದುಕೊಂಡ ಈ ವಿಷಯ ಬೇಸರವನ್ನು ಮೂಡಿಸುತ್ತದೆ.

Leave a Comment