ನಟ ಅಜಿತ್ ಹೊಸ ಸಾಧನೆ! ಎಲ್ಲ ನಟರಿಂದ ಇದು ಆಗಲ್ಲ ಬಿಡಿ ಎಂದ ಅಭಿಮಾನಿಗಳು: ನಟ ಗೆದ್ದ ಪದಕಗಳೆಷ್ಟು ನೋಡಿ

Entertainment Featured-Articles Movies News

ಸ್ಟಾರ್ ನಟರಲ್ಲಿ ಕೆಲವರು ಕೇವಲ ಸಿನಿಮಾ ಮಾತ್ರವೇ ಅಲ್ಲದೇ ಬೇರೆ ರಂಗಗಳಲ್ಲಿ ಕೂಡಾ ತನ್ನ ಪ್ರತಿಭೆಯನ್ನು ಅನಾವರಣ ಮಾಡಿದ್ದಾರೆ. ಆದರೆ ಇಂತಹ ನಟರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಎಂದರೆ ತಪ್ಪಾಗಲಾರದು. ಹೌದು ಕೇವಲ ಕೆಲವೇ ಕೆಲವು ನಟರು ಮಾತ್ರ ಸಿನಿಮಾದ ಹೊರತಾಗಿಯೂ ಬೇರೆ ಕ್ಷೇತ್ರಗಳಲ್ಲಿ ಸಾಧನೆಯನ್ನು ಮೆರೆದು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ ಎನ್ನುವುದು ಸತ್ಯ. ಹೀಗೆ ಸಾಧನೆ ಮೆರೆದಿರುವ ಪ್ರತಿಭಾವಂತ ನಟರ ಸಾಲಿಗೆ ತಮಿಳಿನ ಸ್ಟಾರ್ ನಟ ಅಜಿತ್ ಅವರು ಸೇರುತ್ತಾರೆ. ಮಲ್ಟಿ ಟ್ಯಾಲೆಂಟೆಡ್ ಎನಿಸಿಕೊಂಡಿರುವ ಈ ನಟ ಈಗ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ.

ಹೌದು, ನಟ ಅಜಿತ್ ಅವರು ಗನ್ ಶೂಟಿಂಗ್ ಸ್ಪರ್ಧೆಯಲ್ಲಿ ಒಂದು, ಎರಡಲ್ಲ ಬರೋಬ್ಬರಿ ಆರು ಪದಕಗಳನ್ನು ಗೆದ್ದು ಸುದ್ದಿಯಾಗಿದ್ದಾರೆ. 47 ನೇ ತಮಿಳುನಾಡು ರಾಜ್ಯ ಶೂಟಿಂಗ್ ಸ್ಪರ್ಧೆಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಅವರು ನಾಲ್ಕು ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಮತ್ತು ಎರಡರಲ್ಲಿ ಮೂರನೆಯ ಸ್ಥಾನ ಸಿಕ್ಕಿದೆ. ನಟ ಅಜಿತ್ ಅವರ ಈ ಸಾಧನೆಗೆ ವ್ಯಾಪಕ ಮೆಚ್ಚುಗೆಗಳು ಹರಿದು ಬರುತ್ತಿದ್ದು, ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಟನಿಗೆ ಶುಭಾಶಯವನ್ನು ಕೋರುತ್ತಿದ್ದಾರೆ.

ಸೆಂಟರ್ ಫೈರ್ ಪಿಸ್ತೂಲ್ ಪುರುಷರ ವಿಭಾಗ, ಸ್ಟಾಂಡರ್ಡ್ ಪಿಸ್ತೂಲ್ ಮಾಸ್ಟರ್ ಪುರುಷ ವಿಭಾಗ, 50 ಮೀಟರ್ ಫ್ರೀ ಪಿಸ್ತೂಲ್​ ಮಾಸ್ಟರ್ ಪುರುಷ ವಿಭಾಗ ಹಾಗೂ ಸ್ಟ್ಯಾಂಡರ್ಡ್​ ಪಿಸ್ತೂಲ್ ಮಾಸ್ಟರ್ ಪುರುಷ ವಿಭಾಗದಲ್ಲಿ ನಟ ಅಜಿತ್ ಅವರು ಚಿನ್ನದ ಪದಕವನ್ನು ಗೆದ್ದಿದ್ದಾರೆ. ಇನ್ನುಳಿದಂತೆ ಅವರು 50 ಮೀಟರ್ ಫ್ರೀ ಪಿಸ್ತೂಲ್ ಪುರುಷ ವಿಭಾಗ ಹಾಗೂ ಸ್ಟ್ಯಾಂಡರ್ಡ್​ ಪಿಸ್ತೂಲ್ ಪುರುಷ ವಿಭಾಗದಲ್ಲಿ ಮೂರನೇ ಬಹುಮಾನ ಅಂದರೆ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಈ ಮೂಲಕ ಶೂಟಿಂಗ್ ನಲ್ಲೂ ತಾನು ಮಾಸ್ಟರ್ ಎಂದು ಸಾಬೀತು ಮಾಡಿದ್ದಾರೆ.

ಈ ಸ್ಪರ್ಧೆಗಳು ತಿರುಚ್ಚಿ ರೈಫಲ್ ಕ್ಲಬ್ ನಲ್ಲಿ ನಡೆದಿದೆ. ಸ್ಪರ್ಧಿಯಾಗಿ ಅಜಿತ್ ಅವರು ಅಲ್ಲಿಗೆ ಬರುತ್ತಿದ್ದಾರೆ ಎಂದು ತಿಳಿದ ಅವರ ಅಭಿಮಾನಿಗಳು ಸ್ಪರ್ಧೆ ನಡೆಯುವ ಕಟ್ಟಡದ ಹೊರಗೆ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು. ಅಜಿತ್ ಅವರು ಸಹಾ ಅಭಿಮಾನಿಗಳನ್ನು ನೋಡಿ ಅವರ ಕಡೆ ಕೈ ಬೀಸಿ ಹಾಯ್ ಹೇಳಿದ್ದಾರೆ. ಇದನ್ನು ನೋಡಿದಾಗ ಅವರ ಅಭಿಮಾನಿಗಳು ಜೋರಾಗಿ ಚಪ್ಪಾಳೆ ತಟ್ಟಿ, ಸಿಳ್ಳೆ ಹೊಡೆದು ತಮ್ಮ ಸಂಭ್ರಮವನ್ನು ತಮ್ಮದೇ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಅಜಿತ್ ಅವರು ಪ್ರಶಸ್ತಿ ಗೆದ್ದಿರುವುದು ಅಭಿಮಾನಿಗಳ‌ ಖುಷಿಯನ್ನು ದುಪ್ಪಟ್ಟು ಮಾಡಿದೆ.

Leave a Reply

Your email address will not be published.