ಅಕ್ಕನಿಗೆ ಸ್ಪರ್ಧೆ ನೀಡಲು ಸಜ್ಜಾದ ತಂಗಿ: ಸಿನಿಮಾ ರಂಗಕ್ಕೆ ನಟಿ ಸಾಯಿಪಲ್ಲವಿ ತಂಗಿಯ ಎಂಟ್ರಿ

Entertainment Featured-Articles News
48 Views

ನಟಿ ಸಾಯಿ ಪಲ್ಲವಿ ಚಿತ್ರರಂಗದಲ್ಲಿ ಬೇರೆ ಹೀರೋಯಿನ್ ಗಳ ರೀತಿಯಲ್ಲಿ ಸಾಗದೇ ತನ್ನ ಆದ ವಿಶೇಷತೆಯಿಂದಲೇ ದೊಡ್ಡ ಸಾಧನೆಯನ್ನು ಮಾಡಿರುವ ನಟಿಯಾಗಿದ್ದಾರೆ. ಬಹುಭಾಷಾ ನಟಿಯಾಗಿ ಹೆಸರನ್ನು ಮಾಡಿರುವ ಸಾಯಿ ಪಲ್ಲವಿ ತೆಲುಗು, ತಮಿಳು, ಮಲೆಯಾಳಂ ಸಿನಿಮಾಗಳಲ್ಲಿ ಹೆಸರು ಮಾಡಿದ್ದಾರೆ. ಬಾಲಿವುಡ್ ನ ಮೊದಲ ಸಿನಿಮಾ ಘೋಷಣೆ ಆಗಿದೆಯಾದರೂ ಇನ್ನೂ ಆರಂಭವಾಗಿಲ್ಲ. ಮೇಕಪ್ ನಿಂದ ದೂರ ಉಳಿಯುವ ಸಾಯಿ ಪಲ್ಲವಿ ಗ್ಲಾಮರ್ ಗಿಂತ ನಟನೆಗೆ ಪ್ರಾಧಾನ್ಯತೆ ಇರುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಡಾನ್ಸ್ ವಿಷಯದಲ್ಲಿ ಸದ್ಯಕ್ಕೆ ಸಾಯಿ ಪಲ್ಲವಿ ಗೆ ಸ್ಪರ್ಧೆ ನೀಡುವ ನಟಿ ಮತ್ತೊಬ್ಬರಿಲ್ಲ. ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರೇ ಸಾಯಿ ಪಲ್ಲವಿಯ ಡಾನ್ಸ್ ಗೆ ಫಿದಾ ಆಗಿ, ಒಮ್ಮೆ ಆದ್ರೂ ನಟಿಯ ಜೊತೆ ಸಿನಿಮಾದಲ್ಲಿ ಡಾನ್ಸ್ ಮಾಡಬೇಕೆಂದು ತಮ್ಮ ಇಚ್ಚೆಯನ್ನು ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ವ್ಯಕ್ತಪಡಿಸಿದ್ದರು. ನಟನೆಯ ಮೂಲಕವೇ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ ಸಾಯಿ ಪಲ್ಲವಿ. ಈಗ ಮತ್ತೊಂದು ವಿಶೇಷ ಏನೆಂದರೆ ಸಾಯಿ ಪಲ್ಲವಿಯ ಸಹೋದರಿ ಸಿನಿಮಾ ರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ.

ನಟಿ ಸಾಯಿ ಪಲ್ಲವಿಯ ಸಹೋದರಿ ಪೂಜಾ ಕಣ್ಣನ್ ತಮಿಳಿನ ‘ಚಿತ್ತಿರ ಚೆವ್ವಾನಂ’ ಸಿನಿಮಾ ಮೂಲಕ ಸಿನಿ ರಂಗ ಪ್ರವೇಶ ಮಾಡುತ್ತಿದ್ದು, ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿ ಗಮನ ಸೆಳೆದಿದೆ. ತಮಿಳಿನ ಖ್ಯಾತ ನಟ, ನಿರ್ದೇಶಕ ಸಮುದ್ರಖಣಿ ಈ ಸಿನಿಮಾದಲ್ಲಿ ಪೂಜಾ ಕಣ್ಣನ್ ಗೆ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ಮಲೆಯಾಳಂ ಸ್ಟಾರ್ ನಟ ಮೋಹನ್ ಲಾಲ್ ಮತ್ತು ತಮಿಳಿನ ಖ್ಯಾತ ನಟ ಧನುಷ್ ಈ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾವನ್ನು ಸಾಹಸ ನಿರ್ದೇಶಕ ಸ್ಟಂಟ್ ಸಿಲ್ವಾ ನಿರ್ದೇಶನ ಮಾಡಿದ್ದಾರೆ.

ಸಾಯಿ ಪಲ್ಲವಿ ಸಹೋದರಿಗೆ ದಕ್ಷಿಣ ಸಿನಿರಂಗದ ಬಹಳಷ್ಟು ಜನ ಸ್ಟಾರ್ ನಟ, ನಟಿಯರು ಆಲ್ ದಿ ಬೆಸ್ಟ್ ವಿಶ್ ಮಾಡಿದ್ದಾರೆ. ಪೂಜಾ ಕಣ್ಣನ್ ಅಭಿನಯದ ಮೊದಲ ಸಿನಿಮಾ ಚಿತ್ತಾರ ಚೆವ್ವಾನಂ ಸಿನಿಮಾ ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಆಗಲಿದೆ. ಡಿಸೆಂಬರ್ 3 ರಿಂದು ಈ ಸಿನಿಮಾ ಜೀ 5 ಆ್ಯಪ್ ನಲ್ಲಿ ಲಭ್ಯವಾಗಲಿದೆ. ಪೂಜಾ ಕಣ್ಣನ್ ತಮ್ಮ ಅಕ್ಕನಿಗೆ ಮುಂದಿನ ದಿನಗಳಲ್ಲಿ ಸ್ಪರ್ಧೆ ನೀಡಲಿದ್ದಾರಾ?? ಎನ್ನುವುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *