ನಟಿ ಮಾನ್ವಿತಾ ಕಣ್ಣೀರು ಒರೆಸಿದ ಸೋನು ಸೂದ್, ರಿಯಲ್ ಹೀರೋ ನೀವು ಎಂದ ನಟಿ: ಸೋನು ನೀಡಿದ ನೆರವೇನು ಗೊತ್ತಾ?

0 7

ಬಾಲಿವುಡ್ ಮಾತ್ರವೇ ಅಲ್ಲದೇ ದಕ್ಷಿಣ ಸಿನಿಮಾ ರಂಗದಲ್ಲೂ ಸಹಾ ತನ್ನ ಅದ್ಭುತ ಅಭಿನಯದಿಂದ, ತನಗಾಗಿ ಒಂದು ಸ್ಥಾನವನ್ನು ಪಡೆದಿರುವ ನಟ ಸೋನು ಸೂದ್ ಅವರು ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಮಾತ್ರವೇ ಅಲ್ಲದೇ ಮಾನವೀಯ ಕಾರ್ಯಗಳಿಗೂ ಹೆಸರಾಗಿದ್ದಾರೆ. ಕೊರೊನಾ ಸಮಯದಲ್ಲಿ ಆರಂಭಿಸಿದ ತಮ್ಮ ಸಮಾಜ ಸೇವಾ ಕಾರ್ಯಗಳನ್ನು ಇನ್ನೂ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಅವರು ಈಗಾಗಲೇ ಅಸಂಖ್ಯಾತ ಜನರಿಗೆ ನೆರವನ್ನು ನೀಡುವ ಮೂಲಕ, ಅನೇಕರ ಬಾಳಿನಲ್ಲಿ ರಿಯಲ್ ಹೀರೋ‌ ಆಗಿದ್ದಾರೆ. ಸೋನು ಸೂದ್ ಅವರಿಂದ ನೆರವು ಪಡೆದವರು ಅವರನ್ನು ಸ್ಮರಿಸುತ್ತಿದ್ದಾರೆ. ಕಷ್ಟದಲ್ಲಿ ಇರುವವರಿಗೆ ಅಗತ್ಯ ನೆರವನ್ನು ನೀಡಲು ಸೋನು ಸೂದ್ ಮುಂದೆ ಇದ್ದು ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಅವರ ಬಳಿ ಅದೆಷ್ಟೋ ಜನರು ನೆರವನ್ನು ಯಾಚಿಸುತ್ತಾರೆ.

ಈಗ ನಟ ಸೋನು ಸೂದ್ ಅವರಿಂದ ನೆರವು ಪಡೆದ, ಕನ್ನಡ ಸಿನಿಮಾಗಳಲ್ಲಿ ಸಹಾ ನಟಿಸಿ ಜನರಿಗೆ ಪರಿಚಿತರಾದ ನಟಿ ಮಾನ್ವಿತಾ ಕಾಮರ್ ಅವರು ನಟ ಸೋನು ಸೂದ್ ತಮಗೆ ನೀಡಿದ ನೆರವನ್ನು ಸ್ಮರಿಸಿ, ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ನಟನಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಹೌದು, ನಟಿ ಮಾನ್ವಿತಾ ಕಾಮತ್ ಅವರು ನಟ ಸೋನು ಸೂದ್ ಅವರು ತಮ್ಮ ತಾಯಿಯ ಚಿಕಿತ್ಸೆಗೆ ನೆರವಾಗಿದ್ದನ್ನು ಸ್ಮರಿಸಿ, ನಟ ಸೋನು ಸೂದ್ ಅವರ ತಮ್ಮ ಕುಟುಂಬದ ಪಾಲಿಗೆ ರಿಯಲ್ ಹೀರೋ ಎಂದು ಅವರ ಗುಣಗಾನವನ್ನು ಮಾಡಿದ್ದು, ನಟಿ ಮಾಡಿರುವ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮೆಚ್ಚುಗೆಗಳು ಸಹಾ ಹರಿದು ಬಂದಿದೆ.

ಕಳೆದ ಏಪ್ರಿಲ್ ತಿಂಗಳಿನಲ್ಲಿ ಮಾನ್ವಿತಾ ಅವರಿಗೆ ತಾಯಿಗೆ ಕಿಡ್ನಿ ಸಮಸ್ಯೆ ಆಗಿತ್ತು. ಆಗ ನಟಿಯು ಚಿಕಿತ್ಸೆಗಾಗಿ ಒಳ್ಳೆಯ ವೈದ್ಯರನ್ನು ಸಲಹೆ ನೀಡಿ ಎಂದು ಮಾಡಿದ್ದ ಪೋಸ್ಟ್ ಗಮನಿಸಿದ ಸೋನು ಸೂದ್ ಟ್ರಸ್ಟ್ ಮಾನ್ವಿತಾ ಅವರನ್ನು ಸಂಪರ್ಕಿಸಿ, ಅವರ ತಾಯಿಯ ಚಿಕಿತ್ಸೆಗೆ ಅಗತ್ಯ ಇರುವ ನೆರವನ್ನು ನೀಡುವ ಭರವಸೆಯನ್ನು ನೀಡಿತ್ತು. ಈಗ ಸೋನು ಸೂದ್ ಅವರ ಫೌಂಡೇಶನ್ ಕೊಟ್ಟ ಮಾತಿನಂತೆ ಮಾನ್ವಿತಾ ಅವರ ನೆರವಿಗೆ ಬಂದಿರುವುದರಿಂದ ನಟಿಯು ಸೋನು ಸೂದ್ ಅವರಿಗೆ ಧನ್ಯವಾದಗಳನ್ನು ತಿಳಿಸಿ, ಅವರನ್ನು ರಿಯಲ್ ಹೀರೋ ಎಂದು ಕರೆದಿದ್ದಾರೆ.

ಮಾನ್ವಿತಾ ಅವರ ತಾಯಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿಗಳ ಅಗತ್ಯವಿದೆ ಎನ್ನಲಾಗಿದೆ. ಅಲ್ಲದೇ ಅವರಿಗೆ ಕಿಡ್ನಿ ಕಸಿ ಸಹಾ ಮಾಡಿಸಬೇಕು ಎನ್ನಲಾಗಿದೆ. ಸೋನು ಸೂದ್ ಅವರು ಈ ಚಿಕಿತ್ಸೆಗೆ ಬೇಕಾಗಿರುವ ಅಗತ್ಯ ನೆರವನ್ನು ನೀಡುವುದಾಗಿ ಭರವಸೆಯನ್ನು ನೀಡಿದ್ದು, ಈ ವಿಚಾರವನ್ನು ಅವರು ಆಸ್ಪತ್ರೆಗೆ ತಿಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಸೋನು ಸೂದ್ ಅವರು ಸಹಾ ಮಾನ್ವಿತಾ ಅವರ ತಾಯಿ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಸೋನು ಸೂದ್ ಅವರ ಈ ನೆರವಿಗೆ ಮೆಚ್ಚುಗೆಗಳು ಹರಿದು ಬರುತ್ತಿವೆ.

Leave A Reply

Your email address will not be published.