ನಟಿ ಪವಿತ್ರಾ ಲೋಕೇಶ್ ಮದುವೆ ಸುದ್ದಿ: ಕಾನೂನು ಸಮರಕ್ಕೆ ಸಜ್ಜಾದ ನಟಿ

Entertainment Featured-Articles Movies News

ಕಳೆದ ಹದಿನೈದು ದಿನಗಳಿಂದಲೂ ಮಾದ್ಯಮಗಳಲ್ಲಿ ನಟಿ ಪವಿತ್ರ ಲೋಕೇಶ್ ಅವರು ದೊಡ್ಡ ಸುದ್ದಿಯಾಗಿದ್ದಾರೆ. ವೈಯಕ್ತಿಕ ಕಾರಣಗಳ ವಿಚಾರವಾಗಿ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ನಟ ಇದೀಗ ಕಾನೂನು ಸ ಮರ ಕ್ಕೆ ಮುಂದಾಗಿದ್ದಾರೆ. ಕನ್ನಡ ಸಿನಿಮಾದಿಂದ ಚಿತ್ರರಂಗಕ್ಕೆ ಅಡಿಯಿಟ್ಟ ನಟಿ ಪವಿತ್ರ ಲೋಕೇಶ್ ತೆಲುಗು ಸಿನಿಮಾ ರಂಗದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ಕಳೆದ ಕೆಲವು ದಿನಗಳಿಂದಲೂ ಸಹಾ ನಟಿ ಪವಿತ್ರ ಲೋಕೇಶ್ ಮತ್ತು ತೆಲುಗು ನಟ ನರೇಶ್ ಅವರ ಬಗ್ಗೆ ಮಾದ್ಯಮಗಳಲ್ಲಿ ಸಾಕಷ್ಟು ಸುದ್ದಿಗಳಾಗಿವೆ‌.‌ ಅವರ ಸಂಬಂಧದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದೆ.

ಅಲ್ಲದೇ ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರು ಮದುವೆಯಾಗಿದ್ದಾರೆ ಎನ್ನುವ ಸುದ್ದಿಗಳು ಕೂಡಾ ಸದ್ದು ಮಾಡಿದೆ. ಆದರೆ ಕೆಲವು ಸುದ್ದಿಗಳಲ್ಲಿ ಇನ್ನೂ ಮದುವೆಯಾಗಿಲ್ಲ ಶೀಘ್ರದಲ್ಲೇ ಅವರು ಮದುವೆ ಆಗಲಿದ್ದಾರೆ ಎಂದು ಕೂಡಾ ಹೇಳಲಾಗಿದೆ. ಈಗ ಇವೆಲ್ಲವುಗಳ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಘನತೆಗೆ ಧಕ್ಕೆ ತರುವಂತಹ ಕೆಲಸವನ್ನು ಮಾಡಲಾಗುತ್ತಿದೆ ಎಂದು ನಟಿ ಈಗ ಪೋಲಿಸರ ಮೊರೆ ಹೋಗಿದ್ದು, ದೂರನ್ನು ದಾಖಲಿಸಿದ್ದಾರೆ.

ಮೈಸೂರಿನ ನಜಾರಾಬಾದ್ ಸೈಬರ್ ಮತ್ತು ಆರ್ಥಿಕ ಅ ಪ ರಾ ಧ ಠಾಣೆಗೆ ದೂರನ್ನು ನೀಡಿರುವ ನಟಿ ಪವಿತ್ರಾ ಲೋಕೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ತನ್ನ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ನನ್ನ ಘನತೆಗೆ ಧ ಕ್ಕೆ ತರುವಂತಹ ಕೆಲಸಗಳನ್ನು ಮಾಡಲಾಗುತ್ತಿದೆ. ಈ ರೀತಿ ಮಾಡುತ್ತಿರುವುದರಿಂದ ನನಗೆ ಮಾನಸಿಕ ಹಿಂ ಸೆ ಆಗುತ್ತಿದ್ದು, ಈ ಮೂಲಕ ನನಗೆ ಮಾನಸಿಕ ಕಿ ರು ಕು ಳ ವನ್ನು ನೀಡುತ್ತಿದ್ದಾರೆ. ಹಾಗಾಗಿ ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮವನ್ನು ಜರುಗಿಸಬೇಕು ಎಂದು ಪವಿತ್ರಾ ಲೋಕೇಶ್ ಅವರು ಪೋಲಿಸರಲ್ಲಿ ಮನವಿ ಮಾಡಿದ್ದಾರೆ.

ತಮ್ಮ ಹೆಸರಿನಲ್ಲಿ ಫೇಸ್ ಬುಕ್ ನಲ್ಲಿ ನಕಲಿ ಖಾತೆಗಳನ್ನು ತೆರೆಯಲಾಗಿದ್ದು, ಹಾಗೆ ನಕಲಿ ಖಾತೆ ತೆರೆದಿರುವ ವ್ಯಕ್ತಿಯು ತನಗೆ ಅನುಚಿತವಾದ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎನ್ನುವ ದೂರನ್ನು ಸಹಾ ಪವಿತ್ರ ಲೋಕೇಶ್ ಅವರು ನೀಡಿದ್ದಾರೆ ಎನ್ನಲಾಗಿದೆ. ಪವಿತ್ರ ಲೋಕೇಶ್ ಅವರು ಹರಡಿರುವ ಸುದ್ದಿಗಳ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದು, ಮಾದ್ಯಮವೊಂದರಲ್ಲಿ ನಟ ನರೇಶ್ ಅವರು ಒಳ್ಳೆಯ ವ್ಯಕ್ತಿ ಎಂದು ಹೇಳಿದ್ದಾರೆ ಎನ್ನಲಾಗಿದೆ.

Leave a Reply

Your email address will not be published.