ನಟಿ ಆಲಿಯಾ ಭಟ್ ಹೆಗಲೇರಿದ ಮಹತ್ತರ ಜವಾಬ್ದಾರಿ: ಈ ಜವಾಬ್ದಾರಿ ಕೊಟ್ಟವರಾರು??

Written by Soma Shekar

Published on:

---Join Our Channel---

ಬಾಲಿವುಡ್ ಚಿತ್ರರಂಗದ ಪ್ರಖ್ಯಾತ ನಟಿ ಎನಿಸಿಕೊಂಡಿರುವ ಆಲಿಯಾ ಭಟ್ ಇದೇ ಮೊದಲ ಬಾರಿಗೆ ದಕ್ಷಿಣದ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಆಲಿಯಾ ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ, ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಗಳು ಎನಿಸಿಕೊಂಡಿರುವಂತಹ ರಾಮ್ ಚರಣ್ ತೇಜಾ ಹಾಗೂ ಜೂನಿಯರ್ ಎನ್ಟಿಆರ್ ನಾಯಕರಾಗಿರುವ ಬಹು ನಿರೀಕ್ಷಿತ ಸಿನಿಮಾ ಆರ್ ಆರ್ ಆರ್ ಸಿನಿಮಾದ ಒಂದು ಪ್ರಮುಖ ಪಾತ್ರದ ಮೂಲಕ ದಕ್ಷಿಣ ಸಿನಿರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಈಗಾಗಲೇ ಆಲಿಯಾ ಭಟ್ ಅವರ ಲುಕ್ ಕೂಡಾ ಬಿಡುಗಡೆಯಾಗಿ ಜನರ ಗಮನವನ್ನು ಸೆಳೆದಿದೆ. ಇದೀಗ ಚಿತ್ರತಂಡ ನಟಿ ಆಲಿಯಾ ಭಟ್ ಅವರಿಗೆ ಹೊಸದೊಂದು ಜವಾಬ್ದಾರಿಯನ್ನು ನೀಡಿದೆ.

ಈ ಸಿನಿಮಾ ತಂಡವು ಸಾಮಾಜಿಕ ಜಾಲತಾಣಗಳ ಮೂಲಕ ಸಿನಿಮಾದ ಮೇಕಿಂಗ್ ದೃಶ್ಯಗಳು, ವಿಡಿಯೋಗಳು, ಪೋಸ್ಟರ್ ಗಳು ಹಾಗೂ ಇತ್ಯಾದಿ ಮಾಹಿತಿಗಳನ್ನು , ಸಿನಿಮಾ ಹೆಸರಿನ ಖಾತೆಗಳಲ್ಲಿ ಶೇರ್ ಮಾಡುತ್ತಿದೆ. ಇದೀಗ ಇದೇ ವಿಚಾರವಾಗಿ ಸಿನಿಮಾ ತಂಡವು ಈ ಸಿನಿಮಾದ ಸಾಮಾಜಿಕ ಜಾಲತಾಣಗಳ ಖಾತೆಯ ಜವಾಬ್ದಾರಿಯನ್ನು ನಾಯಕಿ ಆಲಿಯಾ ಭಟ್ ಅವರಿಗೆ ವಹಿಸಿದೆ. ಈ ವಿಷಯವಾಗಿ ಟ್ವಿಟರ್ ನಲ್ಲಿ ಚಿತ್ರ ತಂಡ ಮಾಹಿತಿಯನ್ನು ಸಹಾ ಹಂಚಿಕೊಂಡಿದೆ. ಸಿನಿಮಾ ತಂಡವು, ಇನ್ನು ಕೆಲವು ದಿನಗಳ ಕಾಲ ತಮ್ಮ ಇನ್ಸ್ಟಾಗ್ರಾಂ ಖಾತೆಯನ್ನು ನಟಿ ಆಲಿಯಾ ಭಟ್ ನಿರ್ವಹಿಸಲಿದ್ದು, ಅವರು ಯಾವೆಲ್ಲ ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ ಎಂದು ಕಾದು ನೋಡೋಣ ಎಂದಿದ್ದಾರೆ.

ಈ ಸಿನಿಮಾದ ಇನ್ಸ್ಟಾಗ್ರಾಮ್ ಖಾತೆ ಈಗಾಗಲೇ ಸಕ್ರಿಯವಾಗಿದ್ದು, ಇದನ್ನು ಸುಮಾರು 2.30 ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ. ಟ್ವಿಟರ್ ನಲ್ಲಾದರೆ ಆರ್ ಆರ್ ಆರ್ ಸಿನಿಮಾ‌ ಹೆಸರಿನ‌ ಖಾತೆಯನ್ನು 4 ಲಕ್ಷಕ್ಕಿಂತಲೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ಸಿನಿಮಾ ತಂಡವು ಈಗ ಎರಡೂ ಕಡೆ ಹಿಂಬಾಲಕರ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದೇ ಕಾರಣದಿಂದ ಚಿತ್ರತಂಡವು ತಮ್ಮ ಚಿತ್ರದ ಕುರಿತಾಗಿ ಸಕ್ರಿಯವಾಗಿರುವ ಇನ್ಸ್ಟಾಗ್ರಾಂ ನ ಪ್ರತ್ಯೇಕ ಖಾತೆಯ ಜವಾಬ್ದಾರಿಯನ್ನು ನಟಿ ಆಲಿಯಾ ಭಟ್ ಅವರ ಹೆಗಲಿಗೇರಿಸಿದೆ. ಇನ್ನು ಆಲಿಯಾ ಭಟ್ ಈ ಖಾತೆಯನ್ನು ಯಾವ ರೀತಿ ನಿಭಾಯಿಸಲಿದ್ದಾರೆ ಎನ್ನುವುದು ಸದ್ಯಕ್ಕೆ ಎಲ್ಲರ ಕುತೂಹಲವಾಗಿದೆ.

Leave a Comment