ನಟಿ ಅಮೃತಾ ಅವರ ಜೀವನದಲ್ಲಿ ಮೂಡಿದೆ ಮತ್ತೆ ನಗು: ಗಂಡು ಮಗುವಿನ ತಾಯಿಯಾದ ನಟಿ ಅಮೃತಾ ರೂಪೇಶ್

Entertainment Featured-Articles Movies News

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಅಮೃತ ರೂಪೇಶ್ ಅವರ ಮನೆಯಲ್ಲಿ ಮತ್ತೊಮ್ಮೆ ಸಂತೋಷದ ವಾತಾವರಣ ಮೂಡಿದೆ. ನೋವಿನ ಛಾಯೆಯಲ್ಲಿ ಇದ್ದ ಅಮೃತ ಅವರ ಕುಟುಂಬದಲ್ಲಿ ಹೊಸ ಸಂತೋಷದ ನಗೆಯೊಂದು ಕೇಳಿಬಂದಿದೆ. ನಟಿ ಅಮೃತಾ ರೂಪೇಶ್ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಹೌದು, ಅಮೃತಾ ರೂಪೇಶ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಅವರು ತಾಯಿಯಾದ ಸಂತೋಷ ಅವರ ಮನೆಯಲ್ಲಿ ನಗುವಿನ ವಾತಾವರಣವನ್ನು ಮೂಡಿಸಿದೆ. ಸಾಕಷ್ಟು ಸಿನಿಮಾಗಳು, ಕಿರುತೆರೆ ಮತ್ತು ರಿಯಾಲಿಟಿ ಶೋಗಳ ಮೂಲಕ ಅಮೃತ ಅವರ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

ಆದರೆ ಇತ್ತೀಚೆಗೆ ಅವರ ಜೀವನದಲ್ಲಿ ಎದುರಾದ ಕಷ್ಟಗಳು ಹಾಗೂ ನೋವಿನ ವಿಚಾರ ಸುದ್ದಿಯಾಗಿ ಅವರ ಅಭಿಮಾನಿಗಳು ಮಾತ್ರವೇ ಅಲ್ಲದೇ ನೆಟ್ಟಿಗರು ಕೂಡ ನಟಿಗೆ ಕಾಮೆಂಟ್ ಗಳನ್ನು ಮಾಡುವ ಮೂಲಕ ಧೈರ್ಯವನ್ನು ಹೇಳುವ ಕೆಲಸವನ್ನು ಮಾಡಿದ್ದರು. ಅಮೃತಾ ಅವರ ಮುದ್ದು ಮಗಳು ಸಮನ್ವಿ ಅನಿರೀಕ್ಷಿತವಾಗಿ ನಡೆದ ಅ ಪ ಘಾತವೊಂದರಲ್ಲಿ ಇಹಲೋಕ ವನ್ನು ತ್ಯಜಿಸಿದ ನಂತರ ಅಮೃತಾ ಅವರು ಸಾಕಷ್ಟು ಕುಗ್ಗಿಹೋಗಿದ್ದರು. ಅವರ ಕುಟುಂಬದಲ್ಲಿ ಕೂಡಾ ನೋವಿನ ಛಾಯೆ ಮೂಡಿತ್ತು.

ಆದರೆ ಇದೀಗ ಅವರ ಕುಟುಂಬಕ್ಕೆ ಬಂದು ಹೊಸ ಚೈತನ್ಯ ದೊರೆತಿದೆ. ಅಮೃತ ಅವರು ಗಂಡು ಮಗುವಿನ ತಾಯಿಯಾಗಿದ್ದಾರೆ. ಅಮೃತ ರೂಪೇಶ್ ಅವರು ಜುಲೈ 2ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ತಾಯಿಯಾದ ಸಂಭ್ರಮವನ್ನು ಅಮೃತ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಎಲ್ಲರ ಜೊತೆ ಹಂಚಿಕೊಂಡಿದ್ದಾರೆ.

ಅಮೃತ ಅವರು ತಮಗೆ ಶುಭಹಾರೈಸಿದಂತಹ ಎಲ್ಲರಿಗೂ ಕೂಡಾ ಈ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ. ನಟಿಯು ತಿಳಿಸಿದ ಸಿಹಿ ಸುದ್ದಿ, ಸಂತೋಷದ ಸುದ್ದಿಯನ್ನು ಕೇಳಿ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ತಾಯಿ ಮತ್ತು ಮಗುವಿಗೆ ಶುಭ ಹಾರೈಸುತ್ತಾ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಅಮೃತಾ ಅವರ ಜೀವನದಲ್ಲಿ ಸದಾ ಸಂತೋಷ ತುಂಬಿರಲೆಂದು ನೆಟ್ಟಿಗರು ಶುಭ ಕೋರುತ್ತಿದ್ದಾರೆ.

Leave a Reply

Your email address will not be published.