ನಟಿಯಾಗಲು ಬಂದು ಮಾಫಿಯಾ ಕ್ವೀನ್ ಆದಳು: ಹೆಣ್ಣಿನ ಇಚ್ಛೆ ಮೀರಿ ವೇ ಶ್ಯಾ ವೃತ್ತಿಗೆ ಅವಕಾಶ ನೀಡಲಿಲ್ಲ ಈಕೆ!!

Entertainment Featured-Articles News

ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಾಥಿಯವಾಡಿ ಸಿನಿಮಾ ಸಾಕಷ್ಟು ಸುದ್ದಿ ಮತ್ತು ಚರ್ಚೆಗಳಲ್ಲಿ ಇದೆ. ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಸ್ಟಾರ್ ನಟಿ ಆಲಿಯಾ ಭಟ್ ಗಂಗೂಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಲಿಯಾ ಭಟ್ ಫಸ್ಟ್ ಲುಕ್ ನೋಡಿ ಅಭಿಮಾನಿಗಳು ಹಾಗೂ ಸಿನಿ ಪ್ರೇಮಿಗಳು ಫಿದಾ ಆಗಿದ್ದಾರೆ. ಸಿನಿಮಾ ಮೇಲೆ ನಿರೀಕ್ಷೆಗಳು ಹೆಚ್ಚಾಗಲು ಇನ್ನೊಂದು ಪ್ರಮುಖ ಕಾರಣವೂ ಇದೆ. ಅದೇನೆಂದರೆ ಈ ಸಿನಿಮಾ ರಿಯಲ್ ಲೈಫ್ ಮಾಫಿಯಾ ಕ್ವೀನ್ ಒಬ್ಬಾಕೆಯ ಕಥೆಯಾಗಿದೆ.

ಎಸ್ ಹುಸೇನ್ ಜೈದಿ ಅವರ ಪುಸ್ತಕ “ಮಾಫಿಯಾ ಕ್ವೀನ್ಸ್ ಆಫ್ ಮುಂಬೈ” ನ ಪ್ರಕಾರ ಗಂಗೂಬಾಯಿ ಗುಜರಾತಿನ ಮೂಲದ ಮಹಿಳೆಯಾಗಿದ್ದರು. ಆಕೆಯ ಮೂಲ ಹೆಸರು ಹರಜೀವನದಾಸ್ ಕಾಥಿಯಾವಾಡಿ ಎನ್ನುವುದಾಗಿತ್ತು. ಈಕೆ ಬಾಲ್ಯದಲ್ಲೇ ತಾನೊಬ್ಬ ಸಿನಿಮಾ ನಟಿಯಾಗಬೇಕೆಂದು ಕನಸನ್ನು ಹೊತ್ತವಳಾಗಿದ್ದಳು. ಆದರೆ ಆಕೆಯ ವಿಧಿ ಬೇರೆಯೇ ಆಗಿತ್ತು. ಕೇವಲ 16 ನೇ ವಯಸ್ಸಿನಲ್ಲೇ ಆಕೆ ತನ್ನ ತಂದೆಯ ಅಕೌಂಟೆಂಟ್ ನ ಜೊತೆ ಪ್ರೇಮ ಪಾಶದಲ್ಲಿ ಸಿಲುಕಿದಳು. ಪ್ರೀತಿ ಎಷ್ಟು ಗಾಢವಾಗಿತ್ತೆಂದರೆ ಆತನೊಡನೆ ಮದುವೆಯಾಗಿ ಮುಂಬೈಗೆ ಬಂದು ನೆಲೆಸಿದಳು.

ಆದರೆ ಗಂಗೂಬಾಯಿಯ ಕನಸು ನುಚ್ಚು ನೂರಾಗಿತ್ತು, ಪ್ರೇಮದ ಹೆಸರಿನಲ್ಲಿ ಆಕೆಗೆ ಆಕೆಯ ಪತಿ ವಂಚನೆ ಮಾಡಿದ್ದ. ಮುಂಬೈನಲ್ಲಿ ಕೇವಲ 500 ರೂ.ಗಳಿಗೆ ಆಕೆಯ ಪತಿ ಗಂಗೂಬಾಯಿಯನ್ನು ವೇ ಶ್ಯಾ ಗೃಹವೊಂದಕ್ಕೆ ಮಾರಾಟ ಮಾಡಿದ. ಗಂಗೂಬಾಯಿ ವೇ ಶ್ಯಾ ವೃತ್ತಿ ಎನ್ನುವ ಕೂಪದಲ್ಲಿ ಬಿದ್ದಾಯಿತು. ಅದರಿಂದ ಹೊರಗೆ ಬರುವುದು ಅಸಾಧ್ಯವಾದಾಗ ಆಕೆ ಅದಕ್ಕೆ ಒಗ್ಗಿಹೋದಳು. ಕೆಲವು ಕು ಖ್ಯಾ ತ ಅ ಪ ರಾ ಧಿಗಳು ಕೂಡಾ ಆಕೆಯ ಗಿರಾಕಿ ಗಳಾಗಿದ್ದರಿಂದ ಅವರ ಪರಿಚಯವೂ ಆಕೆಗೆ ಚೆನ್ನಾಗಿ ಆಯಿತು.

ಗಂಗೂಬಾಯಿ ಕಾಮಾಟಿಪುರದಲ್ಲಿ ತನ್ನದೇ ವೇ ಶ್ಯಾ ಗೃ ಹ ನಡೆಸಲು ಆರಂಭಿಸಿದಳು. ಕರೀಂಲಾಲ್ ಎನ್ನುವ ವ್ಯಕ್ತಿಯ ರೌ ಡಿ ಗ್ಯಾಂಗ್ ನ ಒಬ್ಬನು ಗಂಗೂಬಾಯಿ ಯ ಮೇಲೆ ಬ‌ ಲಾ ತ್ಕಾರವನ್ನು ಮಾಡಿದ. ತನಗೆ ನ್ಯಾಯ ಬೇಕೆಂದು ಘರ್ಜಿಸಿದ ಗಂಗೂಬಾಯಿ ಯನ್ನು ಕರೀಂಲಾಲ್ ತನ್ನ ಸಹೋದರಿ ಎಂದು ಘೋಷಣೆ ಮಾಡಿದ. ನಿರೀಕ್ಷೆ ಮಾಡಿರದ ಬದಲಾವಣೆಗಳು ಅನೇಕ ಗಂಗೂಬಾಯಿ ಜೀವನದಲ್ಲಿ ನಡೆಯಲು ಪ್ರಾರಂಭಿಸಿದ್ದವು. ಕರೀಂಲಾಲ್ ಸಹೋದರಿ ಎಂದು ಘೋಷಣೆ ಆದ ಮೇಲೆ ಕಾಮಾಟಿಪುರದ ಹೊಣೆಯನ್ನು ಗಂಗೂಬಾಯಿ ಹೆಗಲಿಗೆ ಏರಿಸಲಾಗಿತ್ತು.

ಗಂಗೂಬಾಯಿ ಯಾವುದೇ ಹೆಣ್ಣನ್ನು ಅವಳ ಇಚ್ಛೆಗೆ ಬಿ ರು ದ್ಧ ವಾಗಿ ವೇ ಶ್ಯಾ ವೃ ತ್ತಿ ಮಾಡಲು ಬಿಡಲಿಲ್ಲ. ಲೈಂಗಿಕ ಕಾರ್ಯಕರ್ತೆಯರು ಹಾಗೂ ಅಸಹಾಯಕ ಮಕ್ಕಳಿಗೆ ಗಂಗೂಬಾಯಿ ಆಶ್ರಯವನ್ನು ನೀಡಿದಳು. ಮುಂಬೈನಲ್ಲಿ ವೇ ಶ್ಯಾ ಗೃಹಗಳನ್ನು ತೊಲಗಿಸಬೇಕೆಂಬ ಆಂದೋಲನವನ್ನು ಮಾಡಲು ಗಂಗೂಬಾಯಿ ಮುಂದಾದರು. ಗಂಗೂಬಾಯಿ ಮಾಡಿದ ಉತ್ತಮ ಕೆಲಸಗಳು ಕಾಮಾಟಿಪುರದಲ್ಲಿ ಆಕೆಗೆ ಗೌರವದ ಸ್ಥಾನವನ್ನು ನೀಡಿತು. ಇವೆಲ್ಲವುಗಳ ಕಾರಣದಿಂದಲೇ ಈಗ ಆಕೆಯ ಜೀವನ ತೆರೆಯ ಮೇಲೆ ಬರಲು ಸಜ್ಜಾಗಿದೆ.

Leave a Reply

Your email address will not be published.