ನಟಿಯನ್ನು ಹಾಟ್ ಎಂದು ತೋರಿಸಲು ಆ ಭಾಗದಲ್ಲಿ ಚಪಾತಿ ಇಟ್ಟು ಬೇಯಿಸೋಣ: ನಿರ್ಮಾಪಕ ಕೊಟ್ಟಿದ್ದ ವಿಚಿತ್ರ ಐಡಿಯಾ

Entertainment Featured-Articles News

ಬಾಲಿವುಡ್ ನ ಮಾದಕ ನಟಿಯರ ಹೆಸರುಗಳು ಬಂದಾಗ ಅಲ್ಲಿ ಮಲ್ಲಿಕಾ ಶೆರಾವತ್ ಹೆಸರು ಇರಲೇಬೇಕು ಎನ್ನುವಷ್ಟು ಮಟ್ಟಗೆ ಹಾಟ್ ಹಾಟ್ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿಯಾಗಿದ್ದಾರೆ. ಮಲ್ಲಿಕಾ ಶೆರಾವತ್ ಅವರು ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲವಾದರೂ, ಸದಾ ಸುದ್ದಿಯಲ್ಲಿ ಇರುವುದು ವಿಶೇಷವಾಗಿದೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಲ್ಲಿಕಾ ಶೆರಾವತ್ ನೀಡಿರುವ ಹೇಳಿಕೆಯೊಂದರಿಂದ ಈಗ ಮತ್ತೊಮ್ಮೆ ಸಖತ್ ಸುದ್ದಿಯಾಗಿ, ಎಲ್ಲರ ಗಮನವನ್ನು ಸೆಳೆದಿದ್ದಾರೆ.‌ ಇದೊಂದು ವಿಲಕ್ಷಣ ಅನುಭವ ಎಂದಿದ್ದಾರೆ ಮಲ್ಲಿಕಾ.

ದಿ ಲವ್ ಲಾಫ್ ಲೈವ್ ಶೋ ಎನ್ನುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಲ್ಲಿಕಾ ಈ‌ ವೇಳೆ ಸಿನಿಮಾವೊಂದರ ಡಾನ್ಸ್ ವಿಷಯವಾಗಿ ತನ್ನ ಮುಂದೆ ಬಂದಿದ್ದ ವಿಚಿತ್ರವಾದ ಪ್ರಪೋಸಲ್ ಬಗ್ಗೆ ಮಾತನಾಡಿದ್ದಾರೆ. ಮಲ್ಲಿಕಾ ಸಂದರ್ಶನದಲ್ಲಿ ಸಿನಿಮಾವೊಂದರ ಹಾಡು ಬಹಳ ಹಾಟ್ ಆಗಿ ಮೂಡಿ ಬರಬೇಕು ಎನ್ನುವ ಕಾರಣದಿಂದ ಸಿನಿಮಾ ನಿರ್ಮಾಪಕ ತಮ್ಮ ಮುಂದೆ ಇಟ್ಟಿದ್ದ ಬೇಡಿಕೆಯ ಕುರಿತಾಗಿ ಮಲ್ಲಿಕಾ ಹೇಳಿದ್ದು, ತನ್ನ ಸೊಂಟದ ಮೇಲೆ ಚಪಾತಿ ಬೇಯಿಸುವ ದೃಶ್ಯ ಅದಾಗಿತ್ತು ಎಂದಿದ್ದಾರೆ.

ನಿರ್ಮಾಪಕ ಮಲ್ಲಿಕಾ ಅವರಿಗೆ ಸಿನಿಮಾದ ಹಾಡು ಬಹಳ ಹಾಟ್ ಆಗಿ ಮೂಡಿ ಬರಬೇಕು. ಆದರೆ ನೀವು ಹಾಟ್ ಎಷ್ಟು ಆಗಿದ್ದೀರೆಂದರೆ ನಿಮ್ಮ‌ ಸೊಂಟದ ಮೇಲೆ ಚಪಾತಿ ಯನ್ನು ಮಾಡಬಹುದು. ಆದ್ದರಿಂದ ನೀವು ಹಾಟ್ ಅನ್ನೋದು ನೋಡುಗರಿಗೆ ಗೊತ್ತಾಗಲು ನಿಮ್ಮ ಸೊಂಟದ ಮೇಲೆ ಚಪಾತಿ ಮಾಡುವ ದೃಶ್ಯ ಮಾಡಬಹುದು ಎಂದಾಗ ಅದನ್ನು ಕೇಳಿ ಮಲ್ಲಿಕಾ ಶೆರಾವತ್ ಎಂತಾ ವಿಚಿತ್ರ ಆಲೋಚನೆ ಎಂದು ನಗುತ್ತಾ, ಇಲ್ಲ ನಾನು ಆ ದೃಶ್ಯದಲ್ಲಿ ನಟಿಸುವುದಿಲ್ಲ ಎನ್ನುವ ಮಾತನ್ನು ಹೇಳಿದ್ದರಂತೆ.

ನಿರ್ಮಾಪಕರ ಆಲೋಚನೆ ಹೊಸದು ಮತ್ತು ಸೃಜನಶೀಲವಾಗಿತ್ತು ಎಂದು ಮಲ್ಲಿಕಾ ಹೇಳಿದ್ದಾರೆ. ಇದೇ ವೇಳೆಯಲ್ಲಿ ಮಲ್ಲಿಕಾ ಭಾರತದಲ್ಲಿ ಮಾದಕತೆಯ ಮಾನದಂಡ ಯಾವುದೆಂದು ನನಗಿನ್ನೂ ಅರ್ಥವಾಗಿಲ್ಲ. ಇಲ್ಲಿ ಜನರು ಮಹಿಳೆಯರ ಮಾದಕತೆಯ ಬಗ್ಗೆ ಬಹಳ ವಿಚಿತ್ರ ಆಲೋಚನೆಗಳನ್ನು ಹೊಂದಿದ್ದು, ಅದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಎನ್ನುತ್ತಾ, ವೃತ್ತಿ ಜೀವನದ ಆರಂಭಕ್ಕಿಂತ ಈಗ ಸ್ವಲ್ಪ ಹೆಚ್ಚು ತಿಳುವಳಿಕೆ ಬಂದಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *