ನಟನೆಗೆ ಗುಡ್ ಬೈ, ಬಾಹುಬಲಿ ಸಿನಿಮಾ ಖ್ಯಾತಿಯ ನಟನ ನಿರ್ಧಾರಕ್ಕೆ ಅಭಿಮಾನಿಗಳು ಶಾಕ್!!

Entertainment Featured-Articles Movies News

ಪಂಚ ಭಾಷಾ ನಟನಾಗಿ ಹಿರಿಯ ನಟ ನಾಸರ್ ಅವರು ಮಾಡಿರುವ ಹೆಸರು ಬಹಳ ದೊಡ್ಡದು.‌ ನಟ ನಾಸರ್ ಎಂದರೆ ದಕ್ಷಿಣ ಸಿನಿಮಾ‌ ರಂಗದಲ್ಲಿ ಜನಪ್ರಿಯ ಹೆಸರು. ವೃತ್ತಿ ಜೀವನದಲ್ಲಿ ವೈವಿದ್ಯಮಯ ಪಾತ್ರಗಳಿಗೆ ಜೀವ ತುಂಬಿರುವ ನಟ ನಾಸರ್ ಅವರು ಸಿನಿಮಾ ರಂಗದಲ್ಲಿ ತಮ್ಮದೇ ಆದ ಹೆಸರನ್ನು ಮತ್ತು ಸ್ಥಾನವನ್ನು ಪಡೆದಿದ್ದಾರೆ.‌ ಹೀಗೆ ಸಿನಿಮಾ ರಂಗದಲ್ಲಿ ತನ್ನದೇ ಆದ ವರ್ಚಸ್ಸನ್ನು ಪಡೆದಿರುವ ಈ ಹಿರಿಯ ನಟ ಇದೀಗ ತಮ್ಮ ಸಿನಿಮಾ ವೃತ್ತಿ ಜೀವನಕ್ಕೆ ವಿದಾಯವನ್ನು ಹೇಳಲಿದ್ದಾರೆ ಎನ್ನುವ ಸುದ್ದಿಯೊಂದು ಈಗ ಕೇಳಿ ಬಂದಿದ್ದು, ಸಿನಿ ಪ್ರೇಮಿಗಳು ಈ ವಿಷಯ ಕೇಳಿ ಶಾಕ್ ಆಗಿದ್ದಾರೆ.

ನಾಸರ್ ಅವರು ದಶಕಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯವಾಗಿದ್ದು, ಅವರು ವಿಶಿಷ್ಟ ಪಾತ್ರಗಳ ಮೂಲಕ ಅಪಾರವಾದ ಅಭಿಮಾನಿಗಳ ಬಳಗವನ್ನು ಪಡೆದುಕೊಂಡಿದ್ದಾರೆ. ಜನರನ್ನು ಮೆಚ್ಚಿಸಿದ್ದಾರೆ. ರಾಜಮೌಳಿ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಾಸರ್ ಅವರು ನಿರ್ವಹಿಸಿದ ಬಿಜ್ಜಳ ದೇವನ ಪಾತ್ರವನ್ನು ಜನರು ಮರೆಯುವುದು ಸಾಧ್ಯವಿಲ್ಲ. ಬಾಹುಬಲಿ ಸಿನಿಮಾದ ಯಶಸ್ಸಿನಲ್ಲಿ ನಟ ನಾಸರ್ ಅವರ ಪಾತ್ರ ಕೂಡಾ ಒಂದು ಮಹತ್ವದ ಪಾತ್ರವನ್ನು ನಿರ್ವಹಿಸಿತ್ತು ಎನ್ನುವುದು ನಿಜವಾದ ಮಾತಾಗಿದೆ.

ನಾಸರ್ ಅವರು ನಟನಾಗಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದಾರೆ. ಆದರೆ ಅವರು ನಟ ಮಾತ್ರವೇ ಅಲ್ಲದೇ ನಿರ್ದೇಶಕ, ನಿರ್ಮಾಪಕ, ಡಬ್ಬಿಂಗ್ ಕಲಾವಿದ, ಗಾಯಕ ಮತ್ತು ರಾಜಕಾರಣಿ ಕೂಡಾ ಹೌದು. ನಾಸರ್ ಅವರು ಭಾರತ ವಾಯುಪಡೆಯಲ್ಲಿ ಸೇವೆಯನ್ನು ಸಲ್ಲಿಸಿದ್ದರು. ನಂತರ ಅವರು ದಕ್ಷಿಣ ಭಾರತ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಫಿಲ್ಮ್ಸ್ ಅಂಡ್ ಟೆಲಿವಿಷನ್ ಟೆಕ್ನಾಲಜೀಸ್ ನಲ್ಲಿ ಅವರು ನಟನೆಯ ತರಬೇತಿಯನ್ನು ಪಡೆದುಕೊಂಡರು.

ತಮಿಳು ಸಿನಿಮಾ ರಂಗದ ಪ್ರಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಅವರ ನಿರ್ದೇಶನದ ಕಲ್ಯಾಣ ಆಗತಿಗಳ್ ಸಿ‌ನಿಮಾ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟರು. ಅಲ್ಲಿಂದ ಆರಂಭವಾದ ಸಿನಿಮಾ ಜರ್ನಿಯಲ್ಲಿ ಅವರು ವೈವಿದ್ಯಮಯ ಪಾತ್ರಗಳ ಮೂಲಕ ಸಿನಿ ಪ್ರೇಮಿಗಳನ್ನು ರಂಜಿಸುತ್ತಾ ಬಂದಿದ್ದಾರೆ. ‌ಕೊರೊನಾ ಸಮಯದಲ್ಲಿ ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲಿದ್ದರು. ಅದರಿಂದ ಚೇತರಿಸಿಕೊಂಡ ನಂತರ ಅವರು ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ.

ಆಚಾರ್ಯ ಸಿನಿಮಾ ಚಿತ್ರೀಕರಣದ ವೇಳೆಯಲ್ಲೂ ಅವರು ವಿಶ್ರಾಂತಿಯ ಕುರಿತಾಗಿ ಮಾತನಾಡಿದ್ದರು. ಕೊರೊನಾಕ್ಕೆ ಮೊದಲು ಅವರು ಒಪ್ಪಿಕೊಂಡಿದ್ದ ಸಿ‌ನಿಮಾಗಳನ್ನು ಪ್ರಸ್ತುತ ಮುಗಿಸಿಕೊಡುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಹಿರಿಯ ನಟ ಸಿನಿಮಾ ರಂಗದಿಂದ ನಿವೃತ್ತಿಯನ್ನು ಪಡೆಯಲು ಮಾತನಾಡಿರುವ ವಿಚಾರ ಕೇಳಿ ಸಾಕಷ್ಟು ಚರ್ಚೆಗಳು ಸಹಾ ನಡೆದಿವೆ. ಈಗ ಕೈಯಲ್ಲಿರುವ ಸಿನಿಮಾಗಳು ಮುಗಿದ ನಂತರ ಅವರು ವಿಶ್ರಾಂತಿ ಜೀವನದ ಕಡೆಗೆ ಗಮನ ನೀಡಲಿದ್ದಾರೆ ಎನ್ನಲಾಗಿದೆ.

Leave a Reply

Your email address will not be published.