‘ನಕ್ಷತ್ರ ಪುಂಜದಿಂದ ಸ್ಪೂರ್ತಿ’ ಅಂತೆ ಈ ಡ್ರೆಸ್: ಉರ್ಫಿಯ ಹೊಸ ಅವತಾರ ಕಂಡು ಬೆಚ್ಚಿದ ನೆಟ್ಟಿಗರು

Written by Soma Shekar

Published on:

---Join Our Channel---

ಬಾಲಿವುಡ್ ಅಂಗಳದಲ್ಲಿ ಚಿತ್ರ ವಿಚಿತ್ರವಾದ ಡ್ರೆಸ್ ಗಳನ್ನು ಧರಿಸುವ ಮೂಲಕವೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಏಕೈಕ ಸೆಲೆಬ್ರಿಟಿ ಎಂದರೆ ಅದು ಉರ್ಫಿ ಜಾವೇದ್ ಮಾತ್ರವೇ ಎನ್ನುವುದರಲ್ಲಿ ಎಳ್ಳಷ್ಟು ಸುಳ್ಳಿಲ್ಲ. ಹೌದು, ಬಿಗ್ ಬಾಸ್ ಹಿಂದಿ ಓಟಿಟಿ ಮೂಲಕ ಜನಪ್ರಿಯತೆ ಪಡೆದ ಉರ್ಫಿಗೆ ಅದ್ಯಾಕೋ ಬಿಗ್ ಬಾಸ್ ನಲ್ಲಿ ಅಷ್ಟೆಲ್ಲಾ ಸದ್ದು ಮಾಡಿದರೂ ಸಹಾ ನಂತರ ಯಾವುದೇ ಹೊಸ ರಿಯಾಲಿಟಿ ಶೋ ಆಗಲೀ, ಇನ್ನಾವುದೇ ಜಾಹೀರಾತಾಗಲೀ ಅಥವಾ ಕಿರುತೆರೆಯ ಅವಕಾಶವಾಗಲೀ ಒಲಿದು ಬಂದಿಲ್ಲ‌. ಹಾಗಂದ ಮಾತ್ರಕ್ಕೆ ಉರ್ಫಿ ಸುದ್ದಿಗಳಿಂದ ಹೊರಗೆ ಉಳಿದಿಲ್ಲ. ಇದಕ್ಕೆ ಪ್ರಮುಖ ಕಾರಣ ಉರ್ಫಿ ಧರಿಸುವ ಡ್ರೆಸ್ ಗಳೇ ಕಾರಣವಾಗಿದೆ.

ಉರ್ಫಿ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಹಾಟ್ ಮತ್ತು ಬೋಲ್ಡ್ ಅವತಾರದಲ್ಲಿ ಇರುವ ಫೋಟೋ ಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಉರ್ಫಿ ಯ ಫೋಟೋಗಳು ವೈರಲ್ ಆಗುವ ಜೊತೆಗೆ ಸಿಕ್ಕಾಪಟ್ಟೆ ಟ್ರೋಲ್ ಕೂಡಾ ಆಗುತ್ತವೆ. ಆದರೆ ಆಕೆ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಇನ್ನೂ ಹೊಸ ಹೊಸ ವಿನ್ಯಾಸದ, ಜನರ ಊಹೆಯನ್ನು ಮೀರಿದಂತಹ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡು ಮಾದ್ಯಮದ ಸುದ್ದಿಗಳಲ್ಲಿ ಮಿಂಚುತ್ತಿದ್ದಾರೆ. ಅನೇಕರು ಉರ್ಫಿಯ ಫ್ಯಾಷನ್ ನೋಡಿ ಅಚ್ಚರಿ ಯನ್ನು ಸಹಾ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಹೀಗೆಲ್ಲಾ ಡ್ರೆಸ್ ಗಳಿದ್ಯಾ ಎಂದು ಶಾ ಕ್ ಆಗುತ್ತಾರೆ.

ಈಗ ಮತ್ತೊಮ್ಮೆ ಉರ್ಫಿ ಅಂತಹುದೇ ಶಾಕ್ ನೀಡಲು ಹೊಸ ದೊಂದು ವಿನ್ಯಾಸದ ಡ್ರೆಸ್ ಧರಿಸಿ ಜನರ ಮುಂದೆ ಬಂದಿದ್ದು, ಹೊಸ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುವ ಜೊತೆಗೆ ಫೋಟೋ ನೋಡಿದ ಮಂದಿ ಇದೆಂತಾ ಡ್ರೆಸ್ ? ಎಂದು ಉದ್ಗಾರ ತೆಗೆದಿದ್ದಾರೆ. ಚರ್ಮದ ಬಣ್ಣದ ಉಡುಗೆಯ ಮೇಲೆ ಥಳ ಥಳ ಹೊಳೆಯುವ ವಿಶೇಷ ವಿನ್ಯಾಸದ ಟಾಪ್ ಇದ್ದು, ಉರ್ಫಿ ತನ್ನ ಈ ಹೊಸ ಡ್ರೆಸ್ ಗೆಲ್ಯಾಕ್ಸಿ ಅಥವಾ ನಕ್ಷತ್ರಪುಂಜದಿಂದ ಸ್ಪೂರ್ತಿ ಪಡೆದು ಡಿಸೈನ್ ಮಾಡಲಾಗಿದೆ ಎಂದು ಹೇಳಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಫೋಟೋಗೆ ವೈವಿದ್ಯಮಯ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ.

ಎಂದಿನಂತೆ ಈ ಫೋಟೋಗೆ ಸಹಾ ಮಿಶ್ರ ಪ್ರತಿಕ್ರಿಯೆಗಳು ಹರಿದು ಬರುತ್ತಿದೆ. ಫ್ಯಾಷನ್ ಪ್ರಿಯರು ಉರ್ಫಿಯ ಈ ಹೊಸ ಡ್ರೆಸ್ ನೋಡಿ ಅದ್ಭುತ ಎಂದು ಹಾಡಿ ಹೊಗಳಿದರೆ, ನೆಟ್ಟಿಗರಲ್ಲಿ ಅನೇಕರು ಉರ್ಫಿ ಪ್ಯಾಂಟ್ ಧರಿಸದೇ ಬಂದಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಹಾಸ್ಯ ಅಥವಾ ವ್ಯಂಗ್ಯ ಮಾಡುವಂತಹ ಇಮೋಜಿಗಳನ್ನು ಹಾಕಿ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಉರ್ಫಿಯ ಅಭಿಮಾನಿಗಳು ಮಾತ್ರ ಎಂದಿನಂತೆ ಈ ಫೋಟೊ ಗೂ ಭರ್ಜರಿ ಮೆಚ್ಚುಗೆಗಳನ್ನು ಸೂಚಿಸುತ್ತಾ ಸಾಗಿದ್ದಾರೆ.

Leave a Comment