ನಂಗೆ ಯಾವತ್ತೂ ಮೂಡ್ ಆಫ್ ಆಗಲ್ಲ, ಸದಾ ಮೂಡ್‌ನಲ್ಲಿ ಇರ್ತೀನಿ ಎಂದ ಸೋನು!! ಬಿಗ್ ಬಾಸ್ ಓಟಿಟಿ

Entertainment Featured-Articles Movies News

ಬಿಗ್ ಬಾಸ್ ಕನ್ನಡ ಓಟಿಟಿ ಮೊದಲನೇ ಸೀಸನ್ ದಿನಕಳೆದಂತೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಆರಂಭವಾದ ಮೊದಲ ಎರಡು ದಿನಗಳಲ್ಲಿ ಸಾಕಷ್ಟು ಅನ್ಯೋನ್ಯವಾಗಿದ್ದ ಸ್ಪರ್ಧಿಗಳ ನಡುವೆ ಇದೀಗ ವೈಮನಸ್ಸು ಉಂಟಾಗುತ್ತಿದ್ದು, ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ಗಳು ನಡೆಯುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಸ್ಪೂರ್ತಿ ಗೌಡ ಹಾಗೂ ರಾಕೇಶ್ ಆಡಿಗ ಮಾತನಾಡುತ್ತಿದ್ದಾಗ ಅದನ್ನು ನೋಡಿ, ಅವರ ಮಾತುಗಳ ಬಗ್ಗೆ ಅಪಾರ್ಥ ಮಾಡಿಕೊಂಡ ಸೋಶಿಯಲ್ ಮೀಡಿಯಾ ಸೆನ್ಸೇಶನ್ ಸೋನು ಶ್ರೀನಿವಾಸ ಗೌಡ ಅವರೊಡನೆ ಕಿರಿಕ್ ಮಾಡಿಕೊಂಡು, ನಂತರ ಅದು ಜಗಳಕ್ಕೆ ಪರಿವರ್ತನೆಯಾಗಿ, ಸೋನು ಕಣ್ಣೀರು ಹಾಕಿದ ಘಟನೆ ನಡೆದಿದೆ.

ಸ್ಪೂರ್ತಿ ಜೊತೆ ಮಾತನಾಡಿದ ಸೋನು ನೀವು ಹೀಗೆ ಸುಮ್ಮನೆ ನಗುವುದು ಸರಿಯಲ್ಲ, ಹಿಂದಿನಿಂದ ಹೀಯಾಳಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ ಎಂದು ತಕರಾರನ್ನು ತೆಗೆದರು. ಈ ವಿಷಯವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಪ್ರಾರಂಭವಾಯಿತು ಕೋಪಗೊಂಡಿದ್ದ ಸ್ಪೂರ್ತಿ ಗೌಡ ನನ್ನ ವಿಷಯಕ್ಕೆ ಬರಬೇಡ ಎಂದು ಸೋನುಗೆ ಖಡಕ್ ಎಚ್ಚರಿಕೆಯನ್ನು ನೀಡಿದರು. ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯುವಾಗ ರಾಕೇಶ್ ಅಡಿಗ ಅಲ್ಲಿ ಪ್ರವೇಶ ಮಾಡಿದರು. ಸೋನು ಗೌಡರ ಮನವೊಲಿಸಲು ಪ್ರಯತ್ನ ಪಟ್ಟ ರಾಕೇಶ್ ಅಡಿಗ, ನಾವಿಬ್ಬರೇ ತಮಾಷೆ ಮಾಡಿಕೊಂಡು ಇದ್ದೆವು. ಆದರೆ ನೀವು ಅದನ್ನು ಅಪಾರ್ಥ ಮಾಡಿಕೊಂಡಿರುವಿರಿ ಎಂದು ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದರು.

ಈ ವೇಳೆ ಸ್ಫೂರ್ತಿಗೌಡ ನಗುವುದು, ಬಿಡುವುದು ನನ್ನಿಷ್ಟ ಎಂದು ಹೇಳಿದರು. ಮತ್ತೆ ಸ್ಪೂರ್ತಿ ಮತ್ತು ಸೋನು ನಡುವಿನ ಜಗಳ ತಾರಕಕ್ಕೇರಿತ್ತು. ಮನೆಯ ಇತರೆ ಸದಸ್ಯರು ಬಂದು ಅವರಿಬ್ಬರನ್ನು ದೂರ ದೂರಕ್ಕೆ ಕರೆದುಕೊಂಡು ಹೋದರು. ಇದಾದ ನಂತರ ತನಗೆ ಯಾರೂ ಕೂಡಾ ಸಪೋರ್ಟ್ ಮಾಡಲಿಲ್ಲ ಎನ್ನುವ ಕಾರಣಕ್ಕೆ ಸೋನು ಗೌಡ ಒಂಟಿಯಾಗಿ ಕಣ್ಣೀರು ಹಾಕುತ್ತಿದ್ದರು. ಈ ವೇಳೆ ರಾಕೇಶ್ ಅಡಿಗ ಸೋನು ಅವರನ್ನು ಸಮಾಧಾನ ಮಾಡಲು ಪ್ರಯತ್ನವನ್ನು ಮಾಡಿದರು. ಅವರು ಸೋನು ಬಳಿ, ಬೆಳಿಗ್ಗೆ ಬೆಳಿಗ್ಗೆ ಮೂಡ್ ಆಫ್ ಆಗಬೇಡ ಎಂದು ಹೇಳಿದರು.

ರಾಕೇಶ್ ಹೇಳಿದ ಮಾತಿಗೆ ಕೋಪದಿಂದಲೇ ಉತ್ತರ ನೀಡಿದ ಸೋನು ನಾನು ಯಾವತ್ತೂ ಮೂಡ ಆಫ್ ಆಗಲ್ಲ ಎಂದು ಉತ್ತರವನ್ನು ನೀಡಿದರು. ಆಗ ರಾಕೇಶ್ ನೀನು ಕೋಪ ಮಾಡಿಕೊಂಡಿರುವೆ ಎಂದು ಸೋನು ಕಾಲೆಳೆಯುವ ಪ್ರಯತ್ನವನ್ನು ಮತ್ತೆ ಮಾಡಿದರು. ಸೋನು ಮಾತ್ರ ತಮ್ಮ ಕೋಪವನ್ನು ಬಚ್ಚಿಟ್ಟುಕೊಳ್ಳುತ್ತಾ, ತಾನು ಆಗಲೂ ಸಹ ಒಳ್ಳೆಯ ಮೂಡ್ ನಲ್ಲೇ ಇದ್ದೇನೆ ಎಂದು ತೋರಿಸಿಕೊಳ್ಳುವ ಪ್ರಯತ್ನವನ್ನು ಮಾಡಿದರು. ಒಟ್ಟಾರೆ ಆರಂಭದ ಎರಡು ದಿನಗಳಲ್ಲಿ ಶಾಂತವಾಗಿದ್ದ ಮನೆಯಲ್ಲಿ ಈಗ ಜಗಳಗಳು ಹಾಗೂ ಮನಸ್ತಾಪಗಳು ಪ್ರಾರಂಭವಾಗಿದೆ

Leave a Reply

Your email address will not be published.