ಶಾಲೆ ಅಥವಾ ಕಾಲೇಜಿನಲ್ಲಿ ಪಾಠ, ಪ್ರವಚನಗಳ ಬೋಧನೆಯನ್ನು ಮಾಡುವಾಗ ಶಿಕ್ಷಕರು ಅಥವಾ ಉಪನ್ಯಾಸಕರು ಸಂದರ್ಭಕ್ಕೆ ತಕ್ಕ ಹಾಗೆ ತಮ್ಮ ಧ್ವನಿಯಲ್ಲಿ ಏರಿಳಿತಗಳನ್ನು ಮಾಡುತ್ತಾ ಬೋಧನೆ ಮಾಡುತ್ತಾರೆ. ಆದರೆ ಈ ವಿಚಾರದಲ್ಲಿ ಒಂದು ಅಚ್ಚರಿಯನ್ನು ಉಂಟು ಮಾಡುವ ಅಥವಾ ನಂಬಲು ಅಸಾಧ್ಯವಾದ ಘಟನೆಯೊಂದರ ವರದಿಯಾಗಿದೆ. ಹೌದು ಈ ಘಟನೆಯ ವಿವರಗಳಿಗೆ ಹೋದಾಗ ಒಂದು ಕ್ಷಣ ನಿಮಗೂ ಇದನ್ನು ನಂಬಲು ಅಸಾಧ್ಯ ಎನಿಸಬಹುದು. ಆದರೆ ಇದು ನಿಜವಾಗಿಯೂ ನಡೆದಿರುವ ಘಟನೆಯಾಗಿದೆ.
ಹೌದು, ವಿಶ್ವ ವಿದ್ಯಾಲಯವೊಂದರಲ್ಲಿ ಉಪನ್ಯಾಸಕಿಯೊಬ್ಬರ ಧ್ವನಿಯು ಜೋರಾಗಿದೆ ಎನ್ನುವ ಕಾರಣಕ್ಕೆ ಆಕೆಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಈ ಘಟನೆಯು ಇಂಗ್ಲೇಂಡಿನ ಎಕ್ಸ್ಟೆರ್ ಯೂನಿವರ್ಸಿಟಿ ಗೆ ಸಂಬಂಧಿಸಿದ್ದು ಎನ್ನಲಾಗಿದೆ. ಧ್ವನಿಯ ಕಾರಣದಿಂದಾಗಿ ಈಗ ಕೆಲಸವನ್ನು ಕಳೆದುಕೊಂಡಿರುವ ಶಿಕ್ಷಕಿಯ ಹೆಸರು ಡಾಕ್ಟರ್ ಆ್ಯನೆಟ್ ಪ್ಲಾಟ್ ಎನ್ನಲಾಗಿದ್ದು, ಇವರಿಗೆ 59 ವರ್ಷ ವಯಸ್ಸಾಗಿದ್ದು, ಕಳೆದ 29 ವರ್ಷಗಳಿಂದ ಅವರು ಇದೇ ಬೋಧನೆಯನ್ನು ವೃತ್ತಿಯನ್ನಾಗಿ ಸ್ವೀಕರಿಸಿದ್ದಾರೆ ಎನ್ನಲಾಗಿದೆ.
ಈಗ ಇದ್ದಕ್ಕಿದ್ದಂತೆ ಇಂತಹುದೊಂದು ಕಾರಣವನ್ನು ನೀಡಿ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ವಿಶ್ವ ವಿದ್ಯಾಲಯದ ಈ ನಿರ್ಧಾರದಿಂದ ಬೇಸತ್ತ ಆ್ಯನೆಟ್ ಅವರು ನ್ಯಾಯವನ್ನು ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ವಿಶ್ವ ವಿದ್ಯಾಲಯ ಈ ವೇಳೆ ಅವರನ್ನು ಕೆಲಸದಿಂದ ತೆಗೆದಿರುವುದು ಧ್ವನಿಯ ಕಾರಣದಿಂದ ಅಲ್ಲ, ಬದಲಿಗೆ ಆಕೆ ಖಿನ್ನತೆಗಾಗಿ ಔಷಧ ತೆಗೆದುಕೊಳ್ಳುತ್ತಿದ್ದಾರೆ ಹಾಗೂ ಕಾಲೇಜಿನಲ್ಲಿ ಇಬ್ಬರು ಪಿಹೆಚ್‌ಡಿ ವಿದ್ಯಾರ್ಥಿಗಳ ಜೊತೆಗೆ ಬಹಳ ಕ ಠಿ ಣವಾಗಿ, ಜೋರಾಗಿ ಮಾತನಾಡಿದ್ದರು ವರ್ತಿಸಿದ್ದರು ಎಂದು ಹೇಳಿದೆ.
ಆ್ಯನೆಟ್ ಮಾತ್ರ ವಿಶ್ವವಿದ್ಯಾಲಯದವರು ಸುಳ್ಳು ಹೇಳುತ್ತಿದ್ದಾರೆ, ನನಗೆ ಪ್ರಕೃತಿ ದತ್ತವಾಗಿ ಧ್ವನಿ ಜೋರಾಗಿದೆ. ಮಾತನಾಡುವಾಗ ಯಾವಾಗ ಅದು ಏರುತ್ತದೆ ಎನ್ನುವುದು ತಿಳಿಯುವುದಿಲ್ಲ ಎಂದು ತನ್ನ ವಾದ ಮಂಡಿಸಿದ್ದು ತಾನು ಈ ಹಿಂದೆ ನ್ಯೂಯಾರ್ಕ್ ಹಾಗೂ ಜರ್ಮನಿಯಲ್ಲಿ ಸಹಾ ಕೆಲಸ ಮಾಡಿದ್ದು ಎಲ್ಲಿಯೂ ಇಂತಹ ಆ ರೋ ಪ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ. ಡಾಕ್ಟರ್ ಆ್ಯನೆಟ್ ಅವರು ತನ್ನನ್ನು ಕೆಲಸದಿಂದ ತೆಗೆಯುವ ಮುನ್ನ ಎರಡು ಬಾರಿ ಸಸ್ಪೆಂಡ್ ಮಾಡಲಾಗಿತ್ತು ಎಂದು ಹೇಳಿದ್ದಾರೆ.
ತನ್ನನ್ನು ಸಸ್ಪೆಂಡ್ ಮಾಡಿದ್ದ ಕಾರಣದಿಂದಲೇ ತಾನು ಬೇಸರಗೊಂಡು ಖಿನ್ನತೆಗೆ ಒಳಗಾಗಿದ್ದೆ ಎಂದೂ, ಆದ್ದರಿಂದಲೇ ಔಷಧ ಪಡೆಯುತ್ತಿದೆ ಎಂದು ಆ್ಯನೆಟ್ ಕೋರ್ಟ್ ಮುಂದೆ ಹೇಳಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ ಮೇಲೆ ಕೋರ್ಟ್ ಜನವರಿ 17 ರಂದು ತನ್ನ ನಿರ್ಣಯವನ್ನು ನೀಡಿದೆ. ಕೋರ್ಟ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಡಾ.ಆ್ಯನೆಟ್ ಅವರಿಗೆ ಒಂದು ಕೋಟಿ ರೂಪಾಯಿಗ ಮೊತ್ತವನ್ನು ಪರಿಹಾರ ಧನವಾಗಿ ನೀಡುವಂತೆ ನಿರ್ದೇಶನವನ್ನು ನೀಡಿದೆ.