ಧೈರ್ಯ ಪ್ರದರ್ಶಿಸಲು ಅಲ್ಲಿ ಬುರ್ಖಾ ಧರಿಸದೇ ಧೈರ್ಯ ಪ್ರದರ್ಶಿಸಿ ನೋಡೋಣ: ಕಂಗನಾ ಹಾಕಿದ ಸವಾಲು

Written by Soma Shekar

Published on:

---Join Our Channel---

ನಮ್ಮ ರಾಜ್ಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾದ, ಗ ಲ ಭೆ, ಆ ತಂ ಕ ಗಳಿಗೆ ಕಾರಣವಾದ ಹಿಜಾಬ್ ಪ್ರಕರಣವು ಈಗ ಕೇವಲ ರಾಜ್ಯದ ವಿಷಯವಾಗಿ ಉಳಿದಿಲ್ಲ. ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದವರೆಗೂ ಈ ವಿಷಯ ಈಗ ಸದ್ದು ಮಾಡಿದ್ದು, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಾದ್ಯಮಗಳಲ್ಲಿ ಸಹಾ ಸುದ್ದಿಯಾಗಿದ್ದು ಅನೇಕರು ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡುವ ಮೂಲಕ ಇದರ ಪರ ಹಾಗೂ ವಿ ರೋ ಧ ಅಭಿಪ್ರಾಯಗಳನ್ನು ಹಂಚಿಕೊಂಡು ಗಮನವನ್ನು ಸೆಳೆಯುತ್ತಿದ್ದಾರೆ.

ದೇಶದಲ್ಲಿ ಯಾವುದೇ ಸೂಕ್ಷ್ಮ ವಿಚಾರಗಳು ಸದ್ದು ಮಾಡಿದ ಕೂಡಲೇ ಅದಕ್ಕೊಂದು ಪ್ರತಿಕ್ರಿಯೆ ನೀಡುವ ಬಾಲಿವುಡ್ ನ ನಟಿ, ತಮ್ಮ ವಿ ವಾ ದಾತ್ಮಕ ಹೇಳಿಕೆಗಳಿಂದಲೇ ಸದ್ದು ಮಾಡುವ ಕಂಗನಾ ಏಕೆ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಎನ್ನುವ ಕುತೂಹಲ ಸಹಜವಾಗಿಯೇ ಎಲ್ಲರಿಗೂ ಮೂಡಿತ್ತು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಏಕೆಂದರೆ ಹಿಜಾಬ್ ವಿಚಾರವು ತೀ ವ್ರ ಮಟ್ಟಕ್ಕೆ ಹೋಗಿರುವ ಬೆನ್ನಲ್ಲೇ ನಟಿ ಕಂಗನಾ ಮಾಡಿರುವ ಪೋಸ್ಟ್ ಒಂದು ಈಗ ಸಂಚಲನವನ್ನು ಸೃಷ್ಟಿಸಿದೆ.

ನಟಿ ಕಂಗನಾ ನೇರವಾಗಿ ಹಿಜಾಬ್ ನ‌ ಕುರಿತಾಗಿ ಯಾವುದೇ ರೀತಿಯ ಮಾತನ್ನು ಹೇಳಿಲ್ಲ ಅಥವಾ ಹೇಳಿಕೆಯನ್ನು ನೀಡಿಲ್ಲ. ಆದರೆ ತಮ್ಮ ಇನ್ಸ್ಟಾಗ್ರಾಂ ಸ್ಟೋರಿ ಮೂಲಕ ಈ ವಿಚಾರವಾಗಿ ತನ್ನ ಅಭಿಪ್ರಾಯ ಏನು ಎನ್ನುವುದನ್ನು ನಟಿ ಹಂಚಿಕೊಂಡಿದ್ದಾರೆ. ಕಂಗನಾ ತಮ್ಮ ಪೋಸ್ಟ್ ನಲ್ಲಿ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ಕಂಗನಾ “ನಿಮಗೆ ಧೈರ್ಯ ತೋರಿಸಬೇಕು ಎನ್ನುವುದಾದರೆ ಆಫ್ಘಾನಿಸ್ತಾನದಲ್ಲಿ ಬುರ್ಖಾ ಧರಿಸದೇ ಧೈರ್ಯ ಪ್ರದರ್ಶನ ಮಾಡಿ” ಎಂದು ಬರೆದುಕೊಂಡಿದ್ದಾರೆ.

ಅಲ್ಲದೇ ಮತ್ತೆರಡು ಸಾಲುಗಳಲ್ಲಿ ಕಂಗನಾ, “ಸ್ವತಂತ್ರವಾಗಿರುವುದನ್ನು ಕಲಿಯಿರಿ, ನಿಮ್ಮನ್ನು ನೀವು ಪಂಜರದಲ್ಲಿ ಬಂ‌ ಧಿಯಾಗಿಸಿಕೊಳ್ಳಬೇಡಿ” ಎನ್ನುವ ಮಾತನ್ನು ಹೇಳಿದ್ದಾರೆ. ಆನಂದ್ ರಂಗನಾಥನ್ ಅವರ ಟ್ವಿಟರ್ ಪೋಸ್ಟ್ ಅನ್ನು ಕಂಗನಾ ಶೇರ್ ಮಾಡಿದ್ದು ಅದರಲ್ಲಿ ಹೇಗೆ 50 ವರ್ಷಗಳಲ್ಲಿ ಮಹಿಳೆಯರು ಬಿ ಕಿ ನಿಯಿಂದ ಬುರ್ಖಾಗೆ ಬಂದರು, ಯಾರು ಇತಿಹಾಸವನ್ನು ತಿಳಿದಿಲ್ಲವೋ ಅವರು ಮತ್ತೆ ಅದನ್ನೇ ಪುನಾರಾವರ್ತೆನೆ ಮಾಡಲು ಮುಳುಗಿದ್ದಾರೆ ಎಂದು ಬರೆದುಕೊಂಡಿರುವುದನ್ನು ನೋಡಬಹುದು.

Leave a Comment