ಧೃವ ಸರ್ಜಾ ಜನ್ಮದಿನಕ್ಕೆ ವಿಶೇಷವಾಗಿ ಶುಭಾಶಯ ಕೋರಿದ ಪತ್ನಿ ಮತ್ತು ಅತ್ತಿಗೆ

0 4

ಇಂದು ಅಕ್ಟೋಬರ್ 6, ಸ್ಯಾಂಡಲ್ವುಡ್ ನ ಸ್ಟಾರ್ ನಟ ಧೃವ ಸರ್ಜಾ ಅವರ ಜನ್ಮದಿನ. ಸ್ಯಾಂಡಲ್ವುಡ್ ನಲ್ಲಿ ಆ್ಯಕ್ಷನ್ ಪ್ರಿನ್ಸ್ ಎನ್ನುವ ಖ್ಯಾತಿಯನ್ನು ತನ್ನದಾಗಿಸಿಕೊಂಡಿರುವ ಧೃವ ಅವರ ಜನ್ಮದಿನ ಎಂದ ಮೇಲೆ ಅವರ ಅಭಿಮಾನಿಗಳಿಗೆ ದೊಡ್ಡ ಸಂಭ್ರಮ ಕೂಡಾ ಹೌದು. ಆದರೆ ಧೃವ ಅವರು ನಿನ್ನೆಯೇ ಸೋಶಿಯಲ್ ಮೀಡಿಯಾ ದಲ್ಲಿ ವೀಡಿಯೋ ಒಂದನ್ನು ಶೇರ್ ಮಾಡಿಕೊಂಡು, ಈ ಬಾರಿ ತಾನು ಜನ್ಮದಿನವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ ಎನ್ನುವ ಮಾತನ್ನು ಹೇಳಿದ್ದರು‌. ಅಲ್ಲದೇ ತಾನು ವಿಶಾಖಪಟ್ಟಣಂ ನಲ್ಲಿ ಇರುತ್ತೇನೆ ಎನ್ನುವ ವಿಚಾರ ಕೂಡಾ ತಿಳಿಸಿದ್ದರು.

ಇಂದು ಸೋಶಿಯಲ್ ಮೀಡಿಯಾಗಳಲ್ಲಿ ಧೃವ ಅವರ ಅಭಿಮಾನಿಗಳು ತಮ್ಮ ಅಭಿಮಾನ ನಟನ ಫೋಟೋ ಶೇರ್ ಮಾಡಿಕೊಂಡು ಜನ್ಮದಿನದ ಶುಭಾಶಯವನ್ನು ಕೋರುತ್ತಿದ್ದಾರೆ. ದೃವ ಅವರ ಕುಟುಂಬದವರು ಸಹಾ ಅವರಿಗೆ ವಿಶೇಷವಾಗಿ ಶುಭಾಶಯವನ್ನು ಕೋರುತ್ತಿದ್ದಾರೆ. ಧೃವ ಅವರ ಪತ್ನಿ ಪ್ರೇರಣಾ ಶಂಕರ್ ಹಾಗೂ ಅತ್ತಿಗೆ ಮೇಘನಾ ರಾಜ್ ಅವರು ಸೋಶಿಯಲ್ ಮೀಡಿಯಾ ಮೂಲಕ ಜನ್ಮದಿನದ ಶುಭಾಶಯ ಕೋರಿದ್ದಾರೆ.

ಧೃವ ಅವರ ಪತ್ನಿ ಪ್ರೇರಣಾ ಅವರು ಪ್ರತಿ ಸಲದಂತೆ ಈ ಬಾರಿಯೂ ಸಹಾ ಒಂದು ಹಳೆಯ ಫೋಟೋವನ್ನು ಶೇರ್ ಮಾಡಿಕೊಂಡು ಶುಭಾಶಯವನ್ನು ಕೋರಿದ್ದಾರೆ. ಅವರು ತಮ್ಮ ಪೋಸ್ಟ್ ನಲ್ಲಿ, “ಇದು ನಾವು 10 ವರ್ಷಗಳ ಹಿಂದೆ. ನಿನ್ನ ಹೆಂಡತಿ ನಿನ್ನನ್ನು ಎಂದಿನಂತೆಯೇ ಸದಾ ಪ್ರೀತಿಸುವಳು” ಎಂದು ಬರೆದುಕೊಂಡು ಪ್ರೀತಿಯ ಗಂಡನಿಗೆ ಜನ್ಮದಿನದ ಶುಭಾಶಯವನ್ನು ಕೋರಿದ್ದಾರೆ. ಪ್ರೇರಣಾ ಅವರ ಪೋಸ್ಟ್ ಗೆ ಅಭಿಮಾನಿಗಳು ಮೆಚ್ಚುಗೆ ನೀಡಿ ಶುಭಾಶಯ ಕೋರಿದ್ದಾರೆ.

ಇನ್ನು ಧೃವ ಅವರ ಅತ್ತಿಗೆ ನಟಿ ಮೇಘನಾ ರಾಜ್ ಅವರು ಸಹಾ ಧೃವ ಅವರ ಫೋಟೋ ಶೇರ್ ಮಾಡಿಕೊಂಡು, ಹ್ಯಾಪಿ ಬರ್ತಡೇ BIL ಎಂದು ಬರೆದು ಶುಭಾಶಯವನ್ನು ಕೋರಿದ್ದಾರೆ. ಮೇಘನಾ ರಾಜ್ ಅವರು ಬರೆದುಕೊಂಡ BIL ಪದದ ಅರ್ಥ ಏನು ಎಂದು ಕೆಲವರು ಆಶ್ಚರ್ಯ ಪಟ್ಟಿದ್ದಾರೆ. ಆದರೆ ಇದು ಬ್ರದರ್ ಇನ್ ಲಾ ಎನ್ನುವುದರ ಸಂಕ್ಷಿಪ್ತ ರೂಪವಾಗಿದೆಯಷ್ಟೇ. ಮೇಘನಾ ಅವರ ಪೋಸ್ಟ್ ಗೆ ಸಹಾ ಸಾಕಷ್ಟು ಮೆಚ್ಚುಗೆಗಳು ಹರಿದು ಬರುತ್ತಿವೆ.

ಧೃವ ಸರ್ಜಾ ಅವರು ನಿನ್ನೆ ವೀಡಿಯೋ ಶೇರ್ ಮಾಡಿಕೊಂಡು, ಈ ಬಾರಿ ಕೊರೊನಾ ಕಾರಣದಿಂದ ಹಾಗೂ ಚಿತ್ರೀಕರಣ ಇರುವುದರಿಂದ ಜನ್ಮದಿನ ಆಚರಣೆ ಮಾಡಿಕೊಳ್ಳುತ್ತಿಲ್ಲ. ಜನ್ಮದಿನ ಆಚರಿಸುವ ಮನಸ್ಥಿತಿಯಲ್ಲಿ ನಾನಿಲ್ಲ. ಎಲ್ಲರಿಗೂ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಸದಾ ಇರಲಿ ಎಂದು ಹೇಳಿದ್ದರು.

Leave A Reply

Your email address will not be published.