ದೊಡ್ಡ ಸಿನಿಮಾದಿಂದ ಕರೀನಾ ಔಟ್, ಕಂಗನಾ ಇನ್: ಕೊನೆಗೂ ಫಲಿಸಿತು ನೆಟ್ಟಿಗರ ಕೋರಿಕೆ, ಖುಷಿಯಾದ ನೆಟ್ಟಿಗರು

Written by Soma Shekar

Published on:

---Join Our Channel---

ಅಲೌಖಿಕ್ ದೇಸಾಯಿ ನಿರ್ದೇಶನದ, ಬಾಹುಬಲಿ , ಭಜರಂಗಿ ಬಾಯಿಜಾನ್, ಮಣಿಕರ್ಣಿಕಾ ದಂತಹ ಅದ್ಭುತ ಸಿನಿಮಾಗಳಿಗೆ ಕಥೆ ಸಿದ್ಧಪಡಿಸಿದ ವಿಜಯೇಂದ್ರ ಪ್ರಸಾದ್ ಅವರ ಲೇಖನಿಯಿಂದ ಮೂಡಿ ಬಂದಿರುವ ಹೊಸ ಕಥೆ, ರಾಮಾಯಣ ಮಹಾಕಾವ್ಯದ ಮಹಾ ಸಾದ್ವಿ, ಸೀತೆಯ ಪರಮ ಪಾವನ ಚರಿತೆ, ಸೀತಾ- ದಿ ಇನ್ಕಾರನೇಷನ್ ಸಿನಿಮಾ ಘೋಷಣೆಯ ನಂತರ ಒಂದು ಸಂಚಲನ ಸೃಷ್ಟಿಯಾಗಿತ್ತು. ಅಲ್ಲದೇ ಈ ಸಿನಿಮಾ ನಾಯಕಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಮೂಡಿರುವಾಗಲೇ, ಬಾಲಿವುಡ್ ನಟಿ ಕರೀನಾಗೆ ಸೀತಾ ಪಾತ್ರದಲ್ಲಿ ನಟಿಸಲು ಆಫರ್ ನೀಡಲಾಗಿದೆ ಎನ್ನಲಾಗಿದೆ‌.

ಅಲ್ಲದೇ ಸೀತೆಯ ಪಾತ್ರಕ್ಕೆ ಕರೀನಾ ಕಪೂರ್ ಖಾನ್ ಭಾರೀ ಮೊತ್ತದ ಸಂಭಾವನೆಯನ್ನು ಕೇಳಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡಿತ್ತು. ನೆಟ್ಟಿಗರು ಈ ವಿಚಾರವಾಗಿ ಕರೀನಾರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿ ಅದೊಂದು ದೊಡ್ಡ ಸುದ್ದಿಯಾಗಿ, ಕರೀನಾ ಸೀತಾ ಪಾತ್ರಕ್ಕೆ ಹೊಂದುವುದಿಲ್ಲ, ಶೂರ್ಫನಖ ಪಾತ್ರ ಮಾಡಿಸಿ ಎಂದೆಲ್ಲ ವ್ಯಂಗ್ಯ ಮಾಡಿ, ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಗಳು ಹರಿದಾಡಿದ್ದವು. ಬಿ ಟೌನ್ ನಲ್ಲಿ ಸೀತಾ ಸಿನಿಮಾ ಟಾಕ್ ಆಫ್ ದಿ ಟೌನ್ ಆಗಿತ್ತು.

ಈಗ ಎಲ್ಲಾ ಸದ್ದು, ಸುದ್ದಿಗಳ ನಂತರ ಈ ಸಿನಿಮಾದಲ್ಲಿ ಸೀತೆಯ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವ ಅಧಿಕೃತ ಘೋಷಣೆಯಾಗಿದೆ. ಹೌದು ಮಂಗಳವಾರ ಸೀತಾ ಸಿನಿಮಾದಲ್ಲಿ ನಾಯಕಿಯಾಗಿ, ಪುರಾಣ ಕಥೆಯಲ್ಲಿನ ಈ ಅದ್ಭುತ ಪಾತ್ರಕ್ಕೆ ನಟಿ ಕಂಗನಾ ಅವರನ್ನು ಆಯ್ಕೆ ಮಾಡಿರುವುದಾಗಿ ತಿಳಿಸಲಾಗಿದೆ‌. ಈ ಮೂಲಕ ಕರೀನಾ ಜಾಗಕ್ಕೆ ಕಂಗನಾ ನಾಯಕಿಯಾಗಿ ಎಂಟ್ರಿ ನೀಡಿದ್ದಾರೆ.

ನೆಟ್ಟಿಗರು ಸಹಾ ಕರೀನಾ ಹೆಸರು ಘೋಷಣೆಯಾದಾಗ ಸೈಫ್ ಅಲಿ ಖಾನ್ ರನ್ನು ಮದುವೆಯಾಗಿರುವ ಕರೀನಾ ಈ ಸಿನಿಮಾದಲ್ಲಿ ನಟಿಸಬಾರದು ಎನ್ನುವ ಕೂಗು ಕೇಳಿ ಬಂದಿತ್ತು. ಅಲ್ಲದೇ ಕರೀನಾ ನಂತರ ಮತ್ತೋರ್ವ ಬಾಲಿವುಡ್ ನಟಿ ಆಲಿಯಾ ಹೆಸರು ಸಹಾ ಸದ್ದು ಮಾಡಿತ್ತು. ಆದರೆ ಕೊನೆಗೆ ಪಾತ್ರವು ನಟಿ ಕಂಗನಾ ಪಾಲಾಗಿರುವುದು ಕೆಲವರಿಗೆ ಖಂಡಿತ ಅಸಮಾಧಾನ ಉಂಟು ಮಾಡುತ್ತದೆ.

ನಟಿ ಕಂಗನಾ ಈ ಹಿಂದೆ ಮಣಿಕರ್ಣಿಕಾ ಸಿನಿಮಾದಲ್ಲಿ ಐತಿಹಾಸಿಕ ಪಾತ್ರ ಮಾಡಿದ್ದರು. ಇದು ಅವರ ಮೊದಲ ಪೌರಾಣಿಕ ಪಾತ್ರ ಆಗಲಿದೆ. ಇತ್ತೀಚಿಗೆ ಕಂಗನಾ ನಟನೆಯ ತಮಿಳು ನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಜೀವನಾಧಾರಿತ ತಲೈವಿ ಬಿಡುಗಡೆ ಆಗಿ ಕಂಗನಾ ಪಾತ್ರಕ್ಕೆ ಮೆಚ್ಚುಗೆ ಹರಿದು ಬಂದಿದೆಯಾದರೂ, ಹಣ ಮಾಡುವ ನಿಟ್ಟಿನಲ್ಲಿ ಸಿನಿಮಾ ಎಡವಿದೆ ಎಂದು ಹೇಳಲಾಗಿದೆ.

Leave a Comment