ದೇಸೀ ತಂತ್ರಜ್ಞಾನ ಬಳಸಿ ಎಲೆಕ್ಟ್ರಿಕ್ ಕಾರು ಸಿದ್ಧಪಡಿಸಿದ ಕಾಲೇಜು ವಿದ್ಯಾರ್ಥಿ: 30 ರೂ.ಗೆ 185 ಕಿಮೀ ಚಲಿಸುತ್ತೆ ಈ ಕಾರ್

Written by Soma Shekar

Published on:

---Join Our Channel---

ವಿಶ್ವದ ಅನೇಕ ಕಡೆ ಬಹಳಷ್ಟು ಜನರು ಏನಾದರೊಂದು ಹೊಸ ಆವಿಷ್ಕಾರವನ್ನು ಮಾಡುತ್ತಲೇ ಇರುತ್ತಾರೆ. ಅದರಲ್ಲಿ ಒಂದಷ್ಟು ಅದ್ಭುತ ಎನಿಸುವ ಆವಿಷ್ಕಾರಗಳು ಜನರಿಗೆ ಅಚ್ಚರಿಯನ್ನು ಉಂಟು ಮಾಡುತ್ತವೆ. ಅಲ್ಲದೇ ಇದು ಅವರ ಪ್ರತಿಭೆಯನ್ನು ಸಹಾ ಅನಾವರಣ ವನ್ನು ಮಾಡುತ್ತದೆ. ಸ್ನೇಹಿತರೇ ನಾವು ನಿಮಗೆ ಇಂದು ಅಂತಹುದ್ದೇ ಒಂದು ಪ್ರತಿಭೆಯ ಬಗ್ಗೆ ಹೇಳಲು ಹೊರಟಿದ್ದೇವೆ. ಮಧ್ಯಪ್ರದೇಶದ ಸಾಗರದ ಕಾಲೇಜು ಯುವಕನೊಬ್ಬನು ತನ್ನ ಬುದ್ಧಿವಂತಿಕೆಯಿಂದ ಸಿದ್ಧಪಡಿಸಿರುವ ಒಂದು ವಿಸ್ಮಯಕಾರಿ ಆವಿಷ್ಕಾರದ ಬಗ್ಗೆ ತಿಳಿಯೋಣ.

ಹೌದು, ಈ ಕಾಲೇಜು ವಿದ್ಯಾರ್ಥಿಯು ತನ್ನ ಬುದ್ಧಿವಂತಿಕೆ ಉಪಯೋಗಿಸಿ ಒಂದು ಎಲೆಕ್ಟ್ರಿಕ್ ಕಾರನ್ನು ಸಿದ್ಧಪಡಿಸಿದ್ದಾನೆ. ಅದು ಕೂಡಾ ಕಡಿಮೆ ವೆಚ್ಚದ ಬಹುಪಯೋಗಿ ಕಾರ್ ಇದಾಗಿದ್ದು, ಎಲ್ಲರ ಗಮನವನ್ನು ಸೆಳೆಯುತ್ತಿದೆ. ಇದರ ವಿಶೇಷ ಏನೆಂದರೆ ಒಂದು ಸಲ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ಇದು 185 ಕಿಮೀ ದೂರವನ್ನು ಕ್ರಮಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಪೆಟ್ರೋಲ್ ದರವು ಆಗಸಕ್ಕೆ ಹೋಗುತ್ತಿರುವುದು ನೋಡಿದಾಗ ಇಂತಹ ಕಾರುಗಳು ಭವಿಷ್ಯದ ಲಾಭದಾಯಕ ಕಾರುಗಳೆನ್ನಬಹುದಾಗಿದೆ.

ಈ ವಿಶೇಷ ಕಾರನ್ನು ಸಿದ್ಧಪಡಿಸಿದ ಯುವಕನ ಹೆಸರು ಹಿಮಾನ್ಷು ಪಟೇಲ್‌, ಇಂಜಿನಿಯರಿಂಗ್ ವಿದ್ಯಾರ್ಥಿ ಆಗಿರುವ ಹಿಮಾನ್ಷು ಐದು ತಿಂಗಳ ಅವಧಿಯಲ್ಲಿ ಎಲೆಕ್ಟ್ರಿಕ್ ಕಾರನ್ನು ಸಿದ್ಧಪಡಿಸಿದ್ದಾರೆ. ಹಿಮಾನ್ಷು ಅವರ ನಿರ್ಮಾಣದ ಈ ಕಾರಿನಲ್ಲಿ ವಾಹನ ಚಾಲಕನು ಸೇರಿ ಒಟ್ಟು ಐದು ಜನರು ಬಹಳ ಆರಾಮವಾಗಿ ಕುಳಿತುಕೊಂಡು ಹೋಗಬಹುದಾಗಿದೆ. ಗಂಟೆಗೆ 50 ಕಿಮೀ ಗಳ ವೇಗದಲ್ಲಿ ಕಾರು ಚಲಿಸುವ ಸಾಮರ್ಥ್ಯ ಹೊಂದಿದೆ ಎಂಬುದು ಹಿಮಾನ್ಷು ದೃಢ ವಿಶ್ವಾಸವಾಗಿದೆ.

ಇನ್ನು ಈ ಕಾರನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು 4 ಗಂಟೆಗಳ ಅವಧಿ ಬೇಕಾಗುತ್ತದೆ. ಅಲ್ಲದೇ ಇದಕ್ಕೆ ತಗಲುವ ವೆಚ್ಚವು 30 ರೂಪಾಯಿಗಳು ಎನ್ನಲಾಗಿದೆ. ರಿಮೋಟ್ ಮೂಲಕ ಕಾರನ್ನು ಆನ್ ಮತ್ತು ಆಫ್ ಮಾಡುವ ಸೌಲಭ್ಯ ಕೂಡಾ ಇದರಲ್ಲಿ ಅಳವಡಿಸಲಾಗಿದೆ. ಎಲೆಕ್ಟ್ರಾನಿಕ್ ಸ್ಪೀಡ್ ಮೀಟರ್, ಪವರ್ ಮೀಟರ್, ಬ್ಯಾಟರಿ, ಪವರ್ ಮೀಟರ್, ರಿವರ್ಸ್ , ಫಾಸ್ಟ್ ಚಾರ್ಜಿಂಗ್, ಎಲೆಕ್ಟ್ರಿಕ್ ಸೇಫ್ಟಿ , ಆ್ಯಂಟಿ ಥೆಫ್ಟ್ ಅಲರ್ಟ್ ನಂತಹ ಎಲ್ಲಾ ಸೌಲಭ್ಯಗಳು ಇದೆ.

ಇನ್ನು ಬೆಲೆಯ ವಿಚಾರಕ್ಕೆ ಬಂದರೆ ಈ ಕಾರಿನ ಬೆಲೆ ಸಹಾ ದುಬಾರಿಯಲ್ಲ ಎನ್ನಲಾಗಿದೆ. ಈ ಕಾರನ್ನು ಸಿದ್ಧಪಡಿಸಲು ಎರಡು ಲಕ್ಷ ರೂ.ಗಳು ಖರ್ಚಾಗಿವೆ ಎಂದು ಹೇಳಿದ್ದಾರೆ ಹಿಮಾನ್ಷು. ಒಟ್ಟಾರೆ ಈ ಕಾರು ಒಂದು ಕಡೆ ಹಿಮಾನ್ಷು ಅವರಿಗೆ ಅವರ ಪ್ರತಿಭೆಯನ್ನು ಅನಾವರಣ ಮಾಡಲು ಸಾಧ್ಯವಾಗಿದೆ ಅಲ್ಲದೇ ಒಂದು ಜನೋಪಯೋಗಿ ಭವಿಷ್ಯದ ಕಾರನ್ನು ಕಾಣಿಕೆಯಾಗಿ ನೀಡಿದ್ದಾರೆ.

Leave a Comment