ದೇಶವಾಸಿಗಳಿಗೆ ಗುಡ್ ನ್ಯೂಸ್: ಕೊರೊನಾ 4ನೇ ಅಲೆಯ ಭಯ ಬೇಡವೆಂದ ಪ್ರಮುಖ ವೈರಾಲಜಿಸ್ಟ್

0 5

ಕಳೆದ ಎರಡು ವರ್ಷಗಳಿಂದಲೂ ಕೊರನಾ ವೈರಸ್ ವಿಧ ವಿಧವಾದ ರೂಪಾಂತರಗಳನ್ನು ಪಡೆದುಕೊಂಡು ಇಡೀ ಜಗತ್ತಿನ ಮಾನವ ಸಮೂಹವನ್ನು ಭಯ ಪಡಿಸುತ್ತಲೇ ಇದೆ. ಕೊರೊನಾ ಎರಡನೇ ಅಲೆಯಲ್ಲಿ ಡೆಲ್ಟಾ ರೂಪಾಂತರಿ ಹಾಗೂ ಮೂರನೇ ಅಲೆಯಲ್ಲಿ ಒಮಿಕ್ರಾಮ್ ರೂಪಾಂತರಿಯು ಜನರ ಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿದ್ದು ಇನ್ನೂ ಸಹ ನೆನಪಿನಲ್ಲಿ ಉಳಿದಿದೆ. ಕೊರೊನ ಅಸಂಖ್ಯಾತ ಜನರ ಜೀವನವನ್ನು ಹಾಳು ಮಾಡಿ ವಿ ದ್ವಂ ಸವನ್ನು ಸೃಷ್ಟಿಸಿದೆ. ಈಗೀಗ ಜನರು ಕೊರೋನಾ ಮೂರನೇ ಅಲೆಯಿಂದ ಹೊರಬಂದು ಸಾಮಾನ್ಯ ಜೀವನದ ಕಡೆಗೆ ಮುಖ ಮಾಡಿದ್ದಾರೆ.

ಆದರೆ ಇದರ ನಡುವೆಯೇ ಎಲ್ಲೋ ಒಂದು ಕಡೆ ನಾಲ್ಕನೇ ಅಲೆಯು ಬರಬಹುದು ಎನ್ನುವ ಒಂದು ಭೀ ತಿ ಜನರಲ್ಲಿ ಇದೆ ಎನ್ನುವುದು ಕೂಡ ವಾಸ್ತವದ ವಿಷಯವೇ ಆಗಿದೆ. ಇಂತಹ ಆತಂಕದ ಪರಿಸ್ಥಿತಿಯಲ್ಲಿ ಇದ್ದಂತಹ ಜನರಿಗೆ ಪ್ರಮುಖ ವೈರಲಾಜಿಸ್ಟ್ ಡಾಕ್ಟರ್ ಟಿ ಜಾಕೋಬ್ ಜಾನ್ ಅವರು ದೇಶದ ಪ್ರಜೆಗಳಿಗೆ ಒಂದು ಒಳ್ಳೆಯ ವಿಷಯವನ್ನು ತಿಳಿಸಿದ್ದಾರೆ. ದೇಶದಲ್ಲಿ ಕೊರೊನಾ ನಾಲ್ಕನೇ ಅಲೆ ಬರದೇ ಇರಬಹುದು ಎನ್ನುವ ಮಾತನ್ನು ಅವರು ಹೇಳಿದ್ದಾರೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನ ಅಡ್ವಾನ್ಸ್ಡ್ ರಿಸರ್ಚ್ ಸೆಂಟರ್ ಫಾರ್ ವೈರಾಲಜಿಯ ಮಾಜಿ ನಿರ್ದೇಶಕರಾಗಿದ್ದ ಡಾಕ್ಟರ್ ಟಿ ಜಾಕೋಬ್ ಜಾನ್ ಪಿಟಿಐ ಜೊತೆ ಮಾತನಾಡುತ್ತಾ ಪ್ರಮುಖ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಭಾರತದಲ್ಲಿ ಕೊರೋನಾದ ಮೂರನೇ ಅಲೆ ಮುಗಿದಿದ್ದು, ಮುಂದೆ ಸಂಪೂರ್ಣವಾಗಿ ವಿಭಿನ್ನವಾದ ರೂಪಾಂತರಿ ಬಾರದ ಹೊರತು ದೇಶದಲ್ಲಿ ಕೊರೊನಾ ಆ ತಂ ಕ ಇಲ್ಲ ಎನ್ನುವ ಶುಭ ಸುದ್ದಿ ಯನ್ನು ನೀಡಿದ್ದಾರೆ. ಕೊರೊನಾ ದೇಶದಲ್ಲಿ ಮತ್ತೊಮ್ಮೆ ಎಂಡೆಮಿಕ್ ಹಂತವನ್ನುಕ ಸೇರಿದೆ ಎಂದಿರುವ ಅವರು ಆಲ್ಪಾ, ಬೀಟಾ, ಗಾಮ, ಡೆಲ್ಟಾ, ಒಮಿಕ್ರೋನ್ ರೂಪಾಂತರಿ ಗಳಿಗಿಂತ ವಿಭಿನ್ನವಾಗಿ ವ್ಯವಹರಿಸುವ ಹೊಸ ತಳಿ ಹುಟ್ಟಿದರೆ ಮಾತ್ರವೇ ನಾಲ್ಕನೇ ಅಲೆಯ ಸಾಧ್ಯತೆಗಳಿವೆ ಇಲ್ಲದೆ ಹೋದರೆ ನಾಲ್ಕನೇ ಅಲೆಯ ಭೀ ತಿಯಿಲ್ಲ ಎಂದಿದ್ದಾರೆ.

Leave A Reply

Your email address will not be published.