HomeEntertainment"ದೇಶದಲ್ಲೊಂದು ದೊಡ್ಡ ಅವಘಡ ಸಂಭವಿಸಲಿದೆ"- ಕೋಡಿ ಮಠದ ಶ್ರಿಗಳು ನುಡಿದ ಆಘಾತಕಾರಿ ಭವಿಷ್ಯವಾಣಿ

“ದೇಶದಲ್ಲೊಂದು ದೊಡ್ಡ ಅವಘಡ ಸಂಭವಿಸಲಿದೆ”- ಕೋಡಿ ಮಠದ ಶ್ರಿಗಳು ನುಡಿದ ಆಘಾತಕಾರಿ ಭವಿಷ್ಯವಾಣಿ

ಕೋಡಿ ಮಠದ ಶ್ರೀಗಳಾದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಕೆಲವೇ ದಿನಗಳ ಹಿಂದೆ ಆಶ್ವೀಜದಿಂದ ಸಂಕ್ರಾಂತಿಯೊಳಗೆ ಜಗತ್ತು ತಲ್ಲಣಗೊಳ್ಳುತ್ತದೆ ಎಂದಿದ್ದರು. ಈಗ ಮತ್ತೊಂದು ರಾಜಕೀಯ ತಲ್ಲಣವು ಸಂಭವಿಸಲಿದೆ ಎನ್ನುವ ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಅವರು ರಾಣೆ ಬೆನ್ನೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ವೇಳೆಯಲ್ಲಿ ಅವರು ರೂಪಾಂತರಿ ಓಮಿಕ್ರಾನ್ ಮತ್ತು ರಾಜಕೀಯ ತಲ್ಲಣದ ವಿಚಾರವಾಗಿ ಮಾತನಾಡುವ ಮೂಲಕ ಗಮನವನ್ನು ಸೆಳೆದಿದ್ದಾರೆ.

ಸ್ವಾಮೀಜಿಯವರು ಮಾತನಾಡುತ್ತಾ, ಈಗಾಗಲೇ ನಾನು ಹೇಳಿದಂತೆ ದೊಡ್ಡ ಅ ವ ಘ ಡ ಸಂಭವಿಸಿದೆ. ಇದೀಗ ದೇಶದಲ್ಲಿ ಅಂತಹುದೇ ದು ರಂ ತ ವೊಂದು ಸಂಭವಿಸುವ ಮುನ್ಸೂಚನೆ ಇದು ಎನ್ನುವ ಮಾತನ್ನು ಅವರು ಹೇಳಿದ್ದಾರೆ.‌ ಕೊರೊನಾ ರೂಪಾಂತರಿಯು ಹೆಚ್ಚಾಗುವ ಲಕ್ಷಣಗಳಿವೆ. ರೋಗ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ದೇಶದಲ್ಲಿ ಮುಂದಿನ‌ ದಿನಗಳಲ್ಲಿ ಸಂಶಯ, ಅಸಹನೆ, ದ್ವೇಷ ಹಾಗೂ ಕಲಹಗಳು ಹೆಚ್ಚುವ ಸಾಧ್ಯತೆಗಳು ಇವೆ ಹಾಗೂ ಮುಂದಿನ ದಿನಗಳಲ್ಲಿ ಹೆಚ್ಚು ಮಳೆಯಾಗುವ ಸಂಭವ ಕೂಡಾ ಇದೆ ಎಂದು ಭವಿಷ್ಯ ವಾಣಿ ನುಡಿದಿದ್ದಾರೆ.

ಕೋಡಿ ಮಠದ ಶ್ರೀಗಳು ಕೊರೊನಾ ಆರಂಭವಾದ ಕಾಲದಿಂದಲೂ ಸಹಾ ಭವಿಷ್ಯವಾಣಿಯನ್ನು ನುಡಿಯುತ್ತಾ ಬಂದಿದ್ದಾರೆ. ಅಲ್ಲದೇ ಅವರು ಈ ಹಿಂದೆಯೂ ಜಾಗತಿಕ ಮಟ್ಟದಲ್ಲಿ ದೊಡ್ಡ ರಾಜಕೀಯ ಬದಲಾವಣೆಗಳು ಸಂಭವಿಸುತ್ತದೆ, ಮಳೆ ಹೆಚ್ಚಿ ಪ್ರವಾಹಗಳು ಸಂಭವಿಸುತ್ತದೆ, ಕೊರೊನಾ ಬಗ್ಗೆ‌ ಜನರು ಇನ್ನೂ ಜಾಗೃತರಾಗಿರಬೇಕಾದ ಅವಶ್ಯಕತೆ ಎನ್ನುವ ಭವಿಷ್ಯವಾಣಿ ಗಳನ್ನು ಹಾಗೂ ರಾಜ್ಯದ ರಾಜಕೀಯದ ಬಗ್ಗೆಯೂ ಭವಿಷ್ಯವಾಣಿಯನ್ನು ನುಡಿದಿದ್ದರು.

- Advertisment -