ದೇವರು ನನ್ನ ಬ್ರಾ ಸೈಜ್ ತಗೊಳ್ತಿದ್ದಾರೆ: ಸೆಲೆಬ್ರಿಟಿಗಳಿಗೆ ಮಾತಿನ ಮೇಲೆ ಹಿಡಿತ, ಇಂಗಿತ ಜ್ಞಾನ ಇರೋದಿಲ್ವಾ? ನೆಟ್ಟಿಗರ ಸಿಟ್ಟು

Written by Soma Shekar

Published on:

---Join Our Channel---

ಇತ್ತೀಚಿನ ದಿನಗಳಲ್ಲಿ ಕೆಲವು ನಟಿಯರು ತಿಳಿದು ಮಾಡುತ್ತಾರೆಯೋ ಅಥವಾ ತಿಳಿಯದೇ ಮಾಡುತ್ತಾರೆಯೋ ವಿ ವಾ ದಗಳನ್ನು ಹುಟ್ಟು ಹಾಕುವುದರಲ್ಲಿ ಮಂಚೂಣಿಯಲ್ಲಿರುತ್ತಾರೆ. ಕೆಲವೊಂದು ವಿಷಯಗಳನ್ನು ನೋಡಿದಾಗ ಸೆಲೆಬ್ರಿಟಿ ಸ್ಥಾನದಲ್ಲಿ ಇರುವ ವ್ಯಕ್ತಿಗಳು ಮಾತನ್ನು ಆಡುವ ಮೊದಲು ಇಂಗಿತ ಜ್ಞಾನ ಕೂಡಾ ಇಲ್ಲದೇ ಹೀಗೆ ವರ್ತಿಸುತ್ತಿದ್ದಾರೆಯೇ ಎನ್ನುವ ಅನುಮಾನವಂತೂ ಖಂಡಿತ ಮೂಡುತ್ತದೆ. ಈಗ ಅಂತಹುದ್ದೇ ಒಂದು ಘಟನೆ ನಡೆದಿದೆ‌. ಬಾಲಿವುಡ್ ನ ನಟಿ ಶ್ವೇತಾ ತಿವಾರಿ ಮಾಡಿರುವ ಕೆಲಸ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಆ ಕ್ರೋ ಶವನ್ನು ಹುಟ್ಟು ಹಾಕಿದೆ.

ಬಾಲಿವುಡ್ ಕಿರುತೆರೆಯ ಜನಪ್ರಿಯ ನಟಿ, ಬಿಗ್ ಬಾಸ್ ನ ಒಂದು ಸೀಸನ್ ವಿನ್ನರ್ ಕೂಡಾ ಆಗಿರುವ ನಟಿ ಶ್ವೇತಾ ತಿವಾರಿ ನೀಡಿರುವ ಒಂದು ಹೇಳಿಕೆಯ ವಿ ರು ದ್ಧ ತನಿಖೆಯನ್ನು ನಡೆಸುವಂತೆ ಭೋಪಾಲ್ ಕಮೀಷನರ್ ಅವರಿಗೆ ಮಧ್ಯಪ್ರದೇಶ ಗೃಹ ಸಚಿವರು ಸೂಚನೆಯನ್ನು ನೀಡಿದ್ದಾರೆ. ಮಹಾಭಾರತ ಸೀರಿಯಲ್ ನಲ್ಲಿ ಶ್ರೀಕೃಷ್ಣ ನ ಪಾತ್ರದ ಮೂಲಕ ದೇಶದ ಜನರ ಗಮನ ಗಳಿಸಿದ್ದ ನಟ ಸೌರಭ್ ರಾಜ್ ಜೈನ್ ಜೊತೆ ಶ್ವೇತಾ ತಿವಾರಿ ಹೊಸ ವೆಬ್ ಸಿರೀಸ್ ಒಂದರಲ್ಲಿ ನಟಿಸಿದ್ದಾರೆ.

ಈ ಹೊಸ ವೆಬ್ ಸಿರೀಸ್ ನ ಪ್ರಮೋಷನ್ ಕಾರ್ಯ ಇತ್ತೀಚಿಗೆ ನಡೆದಿತ್ತು. ಭೂಪಾಲ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ವೇತಾ ತಿವಾರಿ ಮಾತನಾಡುವ ಭರದಲ್ಲಿ, ಮಾತಿನ ಮೇಲೆ ಗಮನವಿಲ್ಲದೇ, ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ಳುತ್ತಿದ್ದಾನೆ ಎನ್ನುವ ಉದ್ದಟತನದ ಮಾತನ್ನು ಆಡಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ನಟಿ ದೇವರ ಬಗ್ಗೆ ವ್ಯಂಗ್ಯ ಮಾಡಿದ್ದು ನೆಟ್ಟಿಗರ ಆ ಕ್ರೋ ಶಕ್ಕೆ ಗುರಿಯಾಗಿದೆ.

ವೀಡಿಯೋ ವೈರಲ್ ಆದ ಮೇಲೆ ಇದನ್ನು ಗಮನಿಸಿದ ಮಧ್ಯಪ್ರದೇಶದ ಗೃಹ ಸಚಿವರಾದ ನರೋತ್ತಮ್ ಮಿಶ್ರಾ ಅವರು, ಶ್ವೇತಾ ತಿವಾರಿ ಅವರು ನೀಡಿರುವ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಅವರ ಹೇಳಿಕೆಯನ್ನು ನಾನು ತೀ ವ್ರ ವಾಗಿ ಖಂಡಿಸುತ್ತೇನೆ ಎಂದಿರುವ ಅವರು ಈ ಬಗ್ಗೆ ತನಿಖೆ ನಡೆಸಿ ವರದಿಯನ್ನು ನೀಡುವಂತೆ ಭೂಪಾಲ್ ನ ಪೋಲಿಸ್ ಕಮೀಷನರ್ ಅವರಿಗೆ ಸೂಚನೆಗಳನ್ನು ನೀಡಿರುವುದಾಗಿ, ಅನಂತರ ಸೂಕ್ತ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.

Leave a Comment