ದೇವರಿಗೆ ನೈವೇದ್ಯ ಮಾಡುವಾಗ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಎಂದೂ ಮಾಡಬೇಡಿ

Entertainment Featured-Articles News ಜೋತಿಷ್ಯ

ಹಿಂದೂ ಧರ್ಮದಲ್ಲಿ ದೇವತೆಗಳ ಆರಾಧನೆಯ ವಿಚಾರ ಬಂದಾಗ ಕೆಲವು ನಿಯಮಗಳನ್ನು ಪಾಲನೆ ಮಾಡಬೇಕೆಂಬ ಸಂಪ್ರದಾಯಗಳಿವೆ. ದೇವತೆಗಳ ಆರಾಧನೆಯಲ್ಲಿ ನೈವೇದ್ಯ ಸಮರ್ಪಣೆ ಮಾಡುವುದು ಸಹಾ ಪೂಜಾ ವಿಧಾನದಲ್ಲಿನ ಒಂದು ಪ್ರಮುಖ ಭಾಗವಾಗಿದ್ದು, ಇದನ್ನು ಪರಮ ಪವಿತ್ರವಾದ ಕಾರ್ಯ ಎಂದೇ‌ ಪರಿಗಣಿಸಲಾಗಿದೆ. ಮನಃಪೂರ್ವಕವಾಗಿ, ಭಕ್ತಿ, ಶ್ರದ್ಧೆಯಿಂದ ಸಮರ್ಪಿಸಿದ ಪ್ರಸಾದವನ್ನು ಭಗವಂತನು ಸ್ವೀಕರಿಸುವನು ಎನ್ನುವ ನಂಬಿಕೆಯಿಂದಾಗಿಯೇ ಪ್ರಸಾದಕ್ಕೆ ವಿಶೇಷವಾದ ಗೌರವ, ಸ್ಥಾನ ಮಾನವನ್ನು ನೀಡಲಾಗಿದೆ. ದೇವರನ್ನು ಒಲಿಸಿಕೊಳ್ಳಲು ಪ್ರಸಾದ ಸಮರ್ಪಣೆ ಬಹು ಮುಖ್ಯ.

ಜನರು ತಮ್ಮ ಆರಾಧ್ಯ ದೈವವನ್ನು ಪೂಜಿಸುವಾಗ, ಅಥವಾ ಇನ್ನಾವುದೇ ವಿಶೇಷ ಪೂಜೆ ಇರುವಾಗ ಆರಾಧನೆ ಮಾಡುವ ದೇವರಿಗೆ ಇಷ್ಟವಾದ ನೈವೇದ್ಯ ವನ್ನು ಸಿದ್ಧಪಡಿಸಿ ಸಮರ್ಪಣೆ ಮಾಡುತ್ತಾರೆ. ಆದರೆ ಹೀಗೆ ದೇವರಿಗೆ ನೈವೇದ್ಯ ಮಾಡುವಾಗ ಕೆಲವು ಪ್ರಮುಖ ವಿಚಾರಗಳನ್ನು ನಾವು ಗಮನದಲ್ಲಿ ಇರಿಸಿಕೊಳ್ಳಬೇಕು. ನೈವೇದ್ಯ ಸಮರ್ಪಣೆ ಮಾಡುವ ವಿಚಾರದಲ್ಲಿ ಕೆಲವು ನಿಯಮಗಳನ್ನು ಸಹಾ ತಪ್ಪದೇ ಪಾಲನೆ ಮಾಡಬೇಕು. ದೇವರಿಗೆ ನೈವೇದ್ಯ ಸಮರ್ಪಿಸುವಾಗ ಭಕ್ತರು ವಹಿಸಬೇಕಾದ ಎಚ್ಚರಿಕೆ ಹಾಗೂ ಯಾವ ತಪ್ಪುಗಳನ್ನು ಮಾಡಬಾರದು ತಿಳಿಯೋಣ ಬನ್ನಿ.

ಪ್ರಸಾದ ತಯಾರಿಸಲು ಎಣ್ಣೆ : ಇತ್ತೀಚಿನ ದಿನಗಳಲ್ಲಿ ದೇವರ ನೈವೇದ್ಯ ಕ್ಕೆ ಪ್ರಸಾದವನ್ನು ಸಿದ್ಧಪಡಿಸಲು ಜನರು ಎಣ್ಣೆಯನ್ನೇ ಹೆಚ್ಚಾಗಿ ಬಳಸಲು ಆರಂಭಿಸಿದ್ದಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ದೇವರಿಗೆ ಸಮರ್ಪಿಸುವ ನೈವೇದ್ಯ ತುಪ್ಪದಿಂದ ಸಿದ್ಧವಾಗಬೇಕೆಂದು ಹೇಳುತ್ತದೆ.‌ ಅದೇ ರೀತಿ ಮೆಣಸಿನ ಕಾಯಿ ದೇವರ ಪ್ರಸಾದದಲ್ಲಿ ಬಳಸಿದರೆ ಅದರಿಂದ ಪ್ರತಿಕೂಲ ಫಲಗಳು ಸಿಗುತ್ತವೆ ಎನ್ನಲಾಗಿದೆ. ದೇವರ ನೈವೇದ್ಯಕ್ಕೆ ಸದಾ ತುಪ್ಪವನ್ನೇ ಬಳಸಿ.

ಈ ತಪ್ಪು ಮಾಡಬೇಡಿ : ಅನೇಕ ಸಂದರ್ಭಗಳಲ್ಲಿ ದೇವರಿಗೆ ನೈವೇದ್ಯ ಇರಿಸಿದ ನಂತರ, ಕೂಡಲೇ ನೈವೇದ್ಯ ವನ್ನು ದೇವರ ಮುಂದಿನಿಂದ ತೆಗೆದು ಬಿಡುತ್ತಾರೆ. ಈ ರೀತಿ ಮಾಡಬಾರದು, ದೇವರಿಗೆ ಇರಿಸಿದ ನೈವೇದ್ಯ ವನ್ನು ಕೂಡಲೇ ತೆಗೆಯದೇ ಅದನ್ನು ಅಲ್ಲೇ ಬಿಡಬೇಕು. ಆಹಾರ ಪದಾರ್ಥವೇ ಆಗಿರಲಿ, ಹಣ್ಣೇ ಆಗಿರಲಿ, ನೈವೇದ್ಯ ವನ್ನು ಮಾತ್ರ ಸ್ವಲ್ಪ ಸಮಯದ ಅಲ್ಲೇ ಬಿಟ್ಟು ಅನಂತರ ದೇವರಿಗೆ ನಮಸ್ಕರಿಸಿ, ಅನಂತರ ನೈವೇದ್ಯ ವನ್ನು ಅಲ್ಲಿಂದ ತೆಗೆಯಬೇಕು.

ತುಳಸಿಯನ್ನು ಸಮರ್ಪಿಸಬೇಡಿ : ಶಿವನ ಪೂಜೆ ಮಾಡುವಾಗ ಕೆಲವರು ತುಳಸಿಯನ್ನು ಸಮರ್ಪಣೆ ಮಾಡುತ್ತಾರೆ, ಅದೇ ರೀತಿ ಗಣೇಶನ ಆರಾಧನೆ ವೇಳೆ ಕೂಡಾ ಮಾಡುವುದುಂಟು. ಆದರೆ ಇದು ಸರಿಯಾದ ಕ್ರಮವಲ್ಲ. ಶಿವನ ಆರಾಧನೆಗೆ ಬಿಲ್ವಪತ್ರೆ, ಗಣಪನ ಆರಾಧನೆಗೆ ಗರಿಕೆ ಯನ್ನು ಬಳಸಿದರೆ ಅವರ ಕೃಪಾ ಕಟಾಕ್ಷವು ನಮಗೆ ದೊರೆಯುವುದು ಎಂದು ಹೇಳಲಾಗುತ್ತದೆ. ಆದ್ದರಿಂದ ಇಲ್ಲಿ ತುಳಸಿಯನ್ನು ಬಳಸಬೇಡಿ.

ಹಸುವಿಗೆ ಆಹಾರ : ಸಿದ್ಧ ಪಡಿಸಿದ ಆಹಾರವನ್ನು ಮಾತ್ರವೇ ದೇವರಿಗೆ ನೈವೇದ್ಯ ಮಾಡಬೇಕು. ದೇವರಿಗೆ ಸಮರ್ಪಿಸಿದ ನೈವೇದ್ಯ ವನ್ನು ನೀವು ಸ್ವೀಕರಿಸುವ ಮೊದಲು, ಅದರಲ್ಲಿ ಸ್ವಲ್ಪ ಭಾಗವನ್ನು ಹಸುವಿಗೆ ನೀಡಿ. ಹಸುವಿಗೆ ನೀಡಿದ ನೈವೇದ್ಯ ದಿಂದ ಸಕಲ ದೇವತೆಗಳು ಸಂತುಷ್ಟರಾಗುವರು ಎನ್ನಲಾಗುತ್ತದೆ. ಆದ್ದರಿಂದಲೇ ಮೊದಲು ನೈವೇದ್ಯ ಹಸುವಿಗೆ ನೀಡಿ, ಅನಂತರ ಅದನ್ನು ನೀವು ಪ್ರಸಾದವನ್ನಾಗಿ ಸ್ವೀಕರಿಸಿ.

Leave a Reply

Your email address will not be published. Required fields are marked *