ದೃಷ್ಟಿ ಮಂಜಾಗುತ್ತಿದೆ, ಪುಟಿನ್ ಆಯುಷ್ಯ ಇನ್ನು 3 ವರ್ಷ ಮಾತ್ರ: ರಷ್ಯಾ ಅಧ್ಯಕ್ಷ ಸಾವಿಗೆ ಹತ್ತಿರ ಎಂದ‌ ಗೂಢಾಚಾರಿ

Entertainment Featured-Articles News

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ದೇಹಾರೋಗ್ಯ ಕ್ಷೀಣಿಸುತ್ತಿದ್ದು, ಅವರ ದೃಷ್ಟಿ ಕಡಿಮೆಯಾಗುತ್ತಿದ್ದು, ದೇಹದಲ್ಲಿ ಕ್ಯಾ ನ್ಸ ರ್ ಬಹಳ ವೇಗವಾಗಿ ವ್ಯಾಪಿಸುತ್ತಿದೆ ಎಂದೂ ಹಾಗೂ ಅವರು ಇನ್ನು ಕೇವಲ ಮೂರು ವರ್ಷಗಳಲ್ಲೇ ಸಾಯಬಹುದು ಎಂದ ವೈದ್ಯಕೀಯ ಮೂಲಗಳನ್ನು ಉಲ್ಲೇಖಿಸುವ ಮೂಲಕ ಹಲವು ಮಾದ್ಯಮಗಳು ಸುದ್ದಿಯನ್ನು ಪ್ರಕಟಿಸಿವೆ. ರಷ್ಯಾದ ಕೇಂದ್ರೀಯ ಭದ್ರತಾ ಸಂಸ್ಥೆಯಲ್ಲಿ ಸಂಸ್ಥೆಯಲ್ಲೊಂದು ಜವಾಬ್ದಾರಿಯುತ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರು ಇಂತಹ ಮಾಹಿತಿಯೊಂದನ್ನು ಮಾದ್ಯಮದೊಡನೆ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

69 ವಯಸ್ಸಿನ ವ್ಲಾಡಿಮಿರ್ ಪುಟಿನ್ ಅವರ ಆರೋಗ್ಯದಲ್ಲಿ ತೀ ವ್ರ ವಾದ ಸಮಸ್ಯೆಗಳು ಎದುರಾಗಿದೆ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ. ಆದರೆ ಈ ವಿಚಾರವಾಗಿ ರಷ್ಯಾ ಸರ್ಕಾರವು ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಸಹಾ ಇನ್ನೂ ಬಹಿರಂಗಪಡಿಸಿಲ್ಲ. ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವ ಸರ್ಗೆ ಲ್ಯಾವರೊವ್ ಅವರು ಅಧ್ಯಕ್ಷರ ಆರೋಗ್ಯ ಚೆನ್ನಾಗಿಯೇ ಇದೆ. ಅವರ ಮುಖ ಭಾವ ಅಥವಾ ದೇಹ ಲಕ್ಷಣಗಳಲ್ಲಿ ಯಾವುದೇ ನೋವಿನ ಸೆಲೆ ಏನೂ ಇಲ್ಲ ಎಂದು ಹೇಳಿದ್ದಾರೆ.

ಇನ್ನು ರಷ್ಯಾದ ಗುಪ್ತಚರನಾಗಿ ಕೆಲಸ ಮಾಡುತ್ತಿದ್ದ ಬೋರಿಸ್ ಕಾರ್ ಪಿಚಕೋವ್ ಈಗ ಬ್ರಿಟನ್ ನಲ್ಲಿ ಇದ್ದಾರೆ. ಅವರ ಜೊತೆಗೆ ಎಫ್ ಎಸ್ ಬಿ ಅಧಿಕಾರಿಯು ಮಾತನಾಡುವ ವೇಳೆಯಲ್ಲಿ ಹಲವು ವಿಚಾರಗಳು ಹಾಗೂ ವಿವರಗಳು ಬಹಿರಂಗಗೊಂಡಿವೆ ಎನ್ನಲಾಗಿದೆ. ಪುಟಿನ್ ಅವರಿಗೆ ತಲೆ ನೋವು ತೀವ್ರವಾಗಿ ಬಾಧಿಸುತ್ತಿದೆ ಎಂದು, ಅವರು ಭಾಷಣ ಮಾಡಲು ಬರುವಾಗ ಅವರು ಏನು ಮಾತನಾಡಬೇಕು ಎನ್ನುವುದನ್ನು ಹಾಳೆಯ ಮೇಲೆ ಬರೆದುಕೊಡಲಾಗುತ್ತದೆ. ಅದು ಕೂಡಾ ಎರಡು ಮೂರು ಸಾಲುಗಳಷ್ಟೇ.

ಕಣ್ಣಿನ ಸಮಸ್ಯೆ ಅವರ ಕಾರ್ಯ ನಿರ್ವಹಣೆಯ ಮೇಲೆ ತೀವ್ರವಾದ ಪರಿಣಾಮವನ್ನು ಬೀರುತ್ತಿದೆ. ಅವರ ಪಕ್ಕೆಲುಬುಗಳು ನಿಯಂತ್ರಣಕ್ಕೆ ಬಾರದಂತೆ ತೀವ್ರವಾಗಿ ನಡುಗುತ್ತಿವೆ. ಅವರ ಹೊಟ್ಟೆಯಲ್ಲಿದ್ದ ಅನಗತ್ಯ ದ್ರವವನ್ನು ತೆಗೆಸಿಕೊಳ್ಳಲು ಪುಟಿನ್ ಅವರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಈ ಎಲ್ಲಾ ಮಾಹಿತಿಗಳು ರಷ್ಯಾ ಗುಪ್ತಚರ ಇಲಾಖೆಯ ಟೆಲಿಗ್ರಾಂ ಚಾನೆಲ್ ನಲ್ಲಿ ಹಂಚಿಕೆಯಾಗಿತ್ತು ಎಂದು ಮಾದ್ಯಮಗಳು ವರದಿ ಮಾಡಿವೆ.

Leave a Reply

Your email address will not be published.