ದೃಷ್ಟಿಹೀನ ಬಾಲಕಿಗೆ ಯಾರ ಸಹಾಯ ಪಡೆಯದೇ ಶಾಲೆಗೆ ಹೋಗುವ ಸಂಭ್ರಮ: ಹೆಮ್ಮೆಯಾಗುತ್ತಿದೆ ಎಂದ ತಾಯಿಯ ಮನಮಿಡಿವ ವೀಡಿಯೋ ವೈರಲ್

Entertainment Featured-Articles News Viral Video
77 Views

ಸೋಶಿಯಲ್ ಮೀಡಿಯಾ ಗಳಲ್ಲಿ ದಿನವೊಂದಕ್ಕೆ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಇಂತಹ ವಿಡಿಯೋಗಳಲ್ಲಿ ಹತ್ತು ಹಲವಾರು ವಿಡಿಯೋಗಳು ಮನರಂಜನೆಯನ್ನು ನೀಡಿದರೆ, ಒಂದಷ್ಟು ವಿಡಿಯೋಗಳು ನೋಡುಗರ ಮನ ಮಿಡಿಯುವಂತೆ ಮಾಡುತ್ತದೆ. ಅಂತಹ ವಿಡಿಯೋಗಳಲ್ಲಿ ಇಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ದೃಷ್ಟಿಹೀನ ಬಾಲಕಿಯೊಬ್ಬಳು ಮೊದಲ ಸಲ ಯಾರ ಸಹಾಯವಿಲ್ಲದೇ ಶಾಲೆಗೆ ಹೋಗುವ ಉತ್ಸಾಹವನ್ನು ನಮ್ಮ ಕಣ್ಮುಂದೆ ಇರಿಸದ್ದಾಳೆ. ಈ ವಿಡಿಯೋ ಭರ್ಜರಿಯಾಗಿ ವೈಲರ್ ಆಗುತ್ತಿದ್ದು, ನೋಡುಗರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ.

ಬಹಳ ಧೈರ್ಯವಂತಳಾದ ಬಾಲಕಿಯು ದೃಷ್ಟಿ ಹೀನತೆಯಿಂದ ಬಳಲುತ್ತಿದ್ದಾಳೆ. ಆದರೂ ಸಹಾ ಆತ್ಮವಿಶ್ವಾಸದಿಂದ ಯಾರ ಸಹಾಯವನ್ನೂ ಪಡೆಯದೆ, ತಾನೇ ನಿಧಾನವಾಗಿ ನಡೆದು ಹೋಗಿ, ಶಾಲಾ ಬಸ್ಸು ನಿಲ್ಲುವ ಜಾಗ ತಲುಪಿ, ಬಸ್ಸನ್ನು ಮೆಟ್ಟಿಲನ್ನು ಹತ್ತುವ ಸುಂದರವಾದ ವಿಡಿಯೋವನ್ನು ಆ ಬಾಲಕಿಯ ತಾಯಿ ಟಿಕ್ ಟಾಕ್ ಮೂಲಕ ಶೇರ್ ಮಾಡಿಕೊಂಡು ಸಂಭ್ರಮಿಸಿದ್ದಾರೆ. ಈ ಮನಮುಟ್ಟುವ ವಿಡಿಯೋ ಬಹಳಷ್ಟು ಜನರ ಮೆಚ್ಚುಗೆ ಪಡೆಯುತ್ತಿದೆ.

ಮೊದಲ ಬಾರಿ ಯಾರ ಸಹಾಯವಿಲ್ಲದೇ ಶಾಲೆಗೆ ಹೋಗುವ ಸಂಭ್ರಮ ಆಕೆಯ ನಡಿಗೆಯಲ್ಲೇ ಕಾಣುತ್ತಿದೆ. ವಿಡಿಯೋ ಶೇರ್ ಮಾಡಿಕೊಂಡ ಆಕೆಯ ತಾಯಿ, “ನನ್ನ ಮಗಳಿಗೆ ಕಣ್ಣು ಕಾಣುವುದಿಲ್ಲ, ಅವಳು ಮೊದಲ ಬಾರಿಗೆ ಯಾರ ಸಹಾಯವಿಲ್ಲದೆ ಶಾಲೆಗೆ ಹೋಗಲು ಹೊರಟಿದ್ದಾಳೆ. ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ” ಎಂದು ಬಹಳ ಖುಷಿಯಿಂದ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಈ ವಿಡಿಯೋವನ್ನು ಈಗಾಗಲೇ ಸಾವಿರಾರು ಜನರು ವೀಕ್ಷಣೆಯನ್ನು ಮಾಡಿದ್ದು, ವೀಡಿಯೋ ನೋಡಿದಂತಹ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಹೆಮ್ಮೆ ಎನಿಸುವ ಅದ್ಭುತ ವಿಡಿಯೋ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ಈ ವಿಡಿಯೋ ನೋಡಿ ಕಣ್ತುಂಬಿ ಬಂದಿತ್ತು ಎಂದು ಭಾವುಕತೆಯನ್ನು ವ್ಯಕ್ತಪಡಿಸಿದ್ದಾರೆ.

ಈ ಬಾಲಕಿ ನಿಜಕ್ಕೂ ಬಹಳ ಧೈರ್ಯವಂತೆ, ಅಲ್ಲದೇ ಆಕೆ ಒಬ್ಬಳೇ ನಡೆದು ಹೋಗುವಾಗ ಮಧ್ಯ ಪ್ರವೇಶ ಮಾಡದೇ ವಿಡಿಯೋ ಮಾಡುತ್ತಿರುವ ಆಕೆಯ ತಂದೆ ತಾಯಿ ಕೂಡಾ ಧೈರ್ಯವಂತರು ಎಂದು ನೆಟ್ಟಿಗರೊಬ್ಬರು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಒಂದಷ್ಟು ಜನ ಹಾರ್ಟ್ ಇಮೋಜಿಗಳನ್ನು ಹಾಕುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಈ ವೀಡಿಯೋ ಜನರ ಮನಸ್ಸನ್ನು ಗೆಲ್ಲುತ್ತಿದೆ.

Leave a Reply

Your email address will not be published. Required fields are marked *