ದುರ್ಭಾಗ್ಯವನ್ನು ದೂರ ಮಾಡಲು ನೀರಿಗೆ ಸಂಬಂಧಿಸಿದ ಈ ವಾಸ್ತು ದೋಷಗಳ ಕಡೆ ಗಮನ ನೀಡಿ
ಜೀವನಕ್ಕೆ ಅತ್ಯಗತ್ಯ ಹಾಗೂ ಅನಿವಾರ್ಯ ಎಂದು ಪರಿಗಣಿಸಲಾಗಿರುವ ನೀರನ್ನು ಜೀವ ಜಲ ಎಂದೇ ಕರೆಯಲಾಗುತ್ತದೆ. ಅಲ್ಲದೇ ನೀರನ್ನು ಎಲ್ಲಾ ಧರ್ಮಗಳಲ್ಲಿಯೂ ಸಹಾ ಪೂಜ್ಯವೆಂದು ಪರಿಗಣಿಸಲಾಗಿದೆ. ಸನಾತನ ಸಂಪ್ರದಾಯಕ್ಕೆ ಸಂಬಂಧಪಟ್ಟಂತಹ ಯಾವುದೇ ಸಂಸ್ಕಾರ ಅಥವಾ ಆರಾಧನೆಯು ಜಲ ಇಲ್ಲದೇ ಪೂರ್ಣಗೊಳ್ಳುವುದಿಲ್ಲ ಎನ್ನುವಷ್ಟರ ಮಟ್ಟಕ್ಕೆ ನೀರು ನಮ್ಮ ಧಾರ್ಮಿಕ ವಿಚಾರಧಾರೆಗಳಲ್ಲಿ ಬೆರೆತು ಹೋಗಿದ್ದು, ಅದರಿಂದಲೇ ನೀರಿಗೆ ಧಾರ್ಮಿಕ ಪ್ರಾಮುಖ್ಯತೆಯನ್ನು ಸಹಾ ನೀಡಲಾಗಿದೆ. ಜಲವನ್ನು ಕೂಡಾ ದೈವ ಎಂದು ಬಗೆದು ಆರಾಧನೆ ಮಾಡಲಾಗುತ್ತದೆ.
ಜಲ ಎನ್ನುವುದು ಮಾನವನ ಜನನ ಕ್ಕಿಂತ ಮೊದಲಿನಿಂದ ಆರಂಭವಾಗಿ ಅನಂತರವೂ ಅವನ ಜೀವನದಲ್ಲಿ ಅವನೊಂದಿಗೆ ಬೆಸೆದುಕೊಂಡಿರುತ್ತದೆ. ನೀರು ಕೇವಲ ಧರ್ಮಕ್ಕೆ ಸಂಬಂಧಿಸಿಲ್ಲ ಅದು ವಾಸ್ತು ಶಾಸ್ತ್ರದೊಂದಿಗೂ ಬೆಸೆದುಕೊಂಡಿದ್ದು, ನೀರು ನಮ್ಮ ಜೀವನದ ಸಂತೋಷ, ಸಮೃದ್ಧಿ ಮತ್ತು ಅದೃಷ್ಟಕ್ಕೂ ಸಂಬಂಧಿಸಿದೆ ಎನ್ನಲಾಗಿದೆ. ವಾಸ್ತು ಶಾಸ್ತ್ರದಲ್ಲಿ ನೀರನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದ್ದು ಅದಕ್ಕೆ ವಿಶೇಷವಾದ ಪ್ರಾಮುಖ್ಯತೆಯನ್ನು ನೀಡಲಾಯಿದೆ.
ಆದ್ದರಿಂದಲೇ ಯಾವುದೇ ಕಟ್ಟಡವೊಂದರ ನಿರ್ಮಾಣ ಕಾರ್ಯವನ್ನು ಮಾಡುವಂತಹ ಸಂದರ್ಭದಲ್ಲಿ, ನೀರಿನ ಸರಿಯಾದ ಸ್ಥಳ ಮತ್ತು ದಿಕ್ಕು ಇತ್ಯಾದಿಗಳನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಅಲ್ಲದೇ ನೀರಿಗೆ ಸಂಬಂಧಿಸಿದ ಪ್ರಮುಖ ನಿಯಮಗಳು ಮತ್ತು ಅದಕ್ಕೆ ಸಂಬಂಧಿಸಿದ ವಾಸ್ತು ದೋಷದ ಬಗ್ಗೆ ನಾವು ಇಂದು ವಿವರವಾಗಿ ತಿಳಿದುಕೊಳ್ಳೋಣ ಹಾಗೂ ಅದನ್ನು ಪಾಲಿಸುವ ಕಡೆಗೆ ಗಮನ ನೀಡೋಣ.
ವಾಸ್ತು ಶಾಸ್ತ್ರದ ಪ್ರಕಾರ, ಉತ್ತರ ದಿಕ್ಕನ್ನು ಭೂಗತ ತೊಟ್ಟಿಯ ( ನೀರಿನ ಸಂಪ್ ) ನಿರ್ಮಾಣಕ್ಕೆ ಅಥವಾ ಮನೆಯಲ್ಲಿ ನೀರನ್ನು ಸಂಗ್ರಹಿಸಲು ಶುಭ ಪ್ರದ ಎಂದು ಪರಿಗಣಿಸಲಾಗುತ್ತದೆ. ಅದೇ ರೀತಿ, ನಿಮ್ಮ ಛಾವಣಿಯ ಮೇಲೆ ನೀರಿನ ತೊಟ್ಟಿಯನ್ನು ಹಾಕಲು ಬಯಸಿದರೆ, ನೀವು ಅದನ್ನು ಪಶ್ಚಿಮ ಅಥವಾ ನೈಋತ್ಯ ದಿಕ್ಕಿನಲ್ಲಿ ಇಡಬೇಕು. ಸನಾತನ ಸಂಪ್ರದಾಯದ ಪ್ರಕಾರ ನೀರನ್ನು ಧನದ ದೇವಿಯಾದ ಮಾತೆ ಶ್ರೀ ಮಹಾಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದ.
ಆದ್ದರಿಂದಲೇ ನೀರನ್ನು ಮರೆತು ಸಹಾ ಎಂದೂ ವ್ಯರ್ಥ ಮಾಡಬಾರದು. ವಾಸ್ತು ಪ್ರಕಾರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಬಯಸುವ ಜನರು ತಮ್ಮ ಮನೆಯಲ್ಲಿ ಎಲ್ಲಾದರೂ ನೀರಿನ ಸೋರಿಕೆ ಕಂಡು ಬಂದರೆ ಅದನ್ನು ಸಾಧ್ಯವಾದಷ್ಟು ಬೇಗ ಸರಿಪಡಿಸಿಕೊಳ್ಳಬೇಕು. ವಾಸ್ತು ಶಾಸ್ತ್ರದ ಪ್ರಕಾರ ನೀರಿನ ಕೊಳಾಯಿ ಮತ್ತು ಪೈಪ್‌ಗಳ ಮೂಲಕ ಸೋರಿಕೆಯಾಗುವುದು ಮಾತ್ರವೇ ಅಲ್ಲ, ಲೋಟದಲ್ಲಿ ನೀರು ಕುಡಿದ ನಂತರ ಅದರಲ್ಲಿ ನೀರನ್ನು ಹಾಗೇ ಬಿಡುವುದು ಸಹ ಗಂಭೀರ ದೋಷವೆಂದು ಪರಿಗಣಿಸಲಾಗುತ್ತದೆ.
ಆದ್ದರಿಂದಲೇ ಯಾವುದೇ ರೀತಿಯಲ್ಲೂ ಸಹಾ ನೀರು ವ್ಯರ್ಥವಾಗುವುದನ್ನು ವಾಸ್ತುವಿನಲ್ಲಿ ಬಹಳ ದೊಡ್ಡ ದೋಷವೆಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದಲ್ಲಿ, ಕುಡಿಯುವ ನೀರನ್ನು ಯಾವಾಗಲೂ ಸಹಾ ನಮ್ಮ ಅಡುಗೆ ಮನೆಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಇಡಬೇಕು ಎನ್ನಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆ ಮನೆಯಲ್ಲಿ ನೀರಿನ ಅಂಶವಿರುವ ಸ್ಥಳದಲ್ಲಿ ಒಲೆ ಇಡಬಾರದು ಎನ್ನಲಾಗಿದೆ. ಏಕೆಂದರೆ ಅದಕ್ಕೆ ಆಗ್ನೇಯ ಅಂದರೆ ಅದು ಅಗ್ನಿ ದಿಕ್ಕು. ವಾಸ್ತು ಶಾಸ್ತ್ರದ ಪ್ರಕಾರ ಗ್ಯಾಸ್ ಸ್ಟವ್ ಇರುವ ಕಡೆ ಅದರ ಪಕ್ಕದಲ್ಲಿ ಕುಡಿಯುವ ನೀರು ಅಥವಾ ಸಿಂಕ್ ಮಾಡಿದರೆ ಅದು ಗಂಭೀರ ದೋಷವೆಂದು ಹೇಳಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಬ್ರಹ್ಮಸ್ಥಾನದಲ್ಲಿ ನೀರಿನ ಸ್ಥಳವನ್ನು ಎಂದಿಗೂ ಕೂಡಾ ಮಾಡಬಾರದು. ವಾಸ್ತುವಿನ ಪ್ರಕಾರ, ಮನೆಯಲ್ಲಿ ನೆಲೆಗೊಂಡಿರುವ ಬ್ರಹ್ಮಸ್ಥಾನದಲ್ಲಿರುವ ನೀರಿನ ತೊಟ್ಟಿಯು, ಅದು ನೆಲದ ಮೇಲೆ ಇರಲಿ ಅಥವಾ ಛಾವಣಿಯ ಮೇಲೇ ಇರಲಿ ಅದನ್ನು ಒಂದು ಗಂಭೀರವಾದ ವಾಸ್ತು ದೋಷವೆಂದು ಪರಿಗಣಿಸಲಾಗಿದೆ.