ದುರ್ಗಾ v/s ಲೀಲಾ, ದುರ್ಗಾ ಮಾಡಿದ ಕುತಂತ್ರಕ್ಕೆ ಮನೆ ಬಿಟ್ಟು ಹೊರಡ್ತಾಳಾ ಲೀಲಾ??

Entertainment Featured-Articles News
33 Views

ಮಿಸ್ಟರ್ ಪರ್ಫೆಕ್ಟ್ ಎಜೆ, ಎಡವಟ್ಟು ಲೀಲಾ ಎಂದೊಡನೆ ಕಿರುತೆರೆಯ ಪ್ರೇಕ್ಷಕರಿಗೆ ತಟ್ಟನೆ ನೆನಪಾಗೋದು ಏನು ಅಂದ್ರೆ ಅದೇ ಹಿಟ್ಲರ್ ಕಲ್ಯಾಣ ಧಾರಾವಾಹಿ. ವಿಭಿನ್ನ ಕಥಾನಕ, ವಿಶಿಷ್ಟ ನಿರೂಪಣೆ ಹಾಗೂ ಆಸಕ್ತಿಕರ ಸನ್ನಿವೇಶಗಳು, ರೋಚಕ ತಿರುವುಗಳ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಿರುವ ಹಿಟ್ಲರ್ ಕಲ್ಯಾಣ ಸೀರಿಯಲ್ ಆರಂಭವಾದ ಕೆಲವೇ ದಿನಗಳಲ್ಲಿ ಟಾಪ್ ಸೀರಿಯಲ್ ಗಳ ಸಾಲಿನಲ್ಲಿ ಸ್ಥಾನವನ್ನು ಪಡೆದುಕೊಂಡು ಜನರನ್ನು ರಂಜಿಸುತ್ತಾ, ಜನಪ್ರಿಯತೆಯ ಉತ್ತುಂಗವನ್ನು ಏರುವತ್ತ ಸಾಗಿದೆ.

ಪರಿಸ್ಥಿತಿ ಗಳ ಪರಿಣಾಮ ಎಜೆಗೆ ಇಷ್ಟವಿಲ್ಲದೇ ಹೋದರೂ ಲೀಲಾ ಜೊತೆ ಮದುವೆ ಆಗಿ ಹೋಗಿದೆ. ಎಲ್ಲವೂ ಪರ್ಫೆಕ್ಟ್ ಪರ್ಫೆಕ್ಟ್ ಇರಬೇಕು ಎಂದು ಬಯಸುವ ಎಜೆಗೆ ಲೀಲಾ ಮಾಡುವ ಎಡವಟ್ಟು ಗಳ ಕಾರಣದಿಂದ ಬರುವ ಕೋಪಕ್ಕೆ ಪ್ರತಿ ಬಾರಿ ಗುರಿಯಾಗುವುದು ಸಹಾ ಲೀಲಾ. ಲೀಲಾ ಮೇಲೆ ಎಜೆ ಮನಸ್ಸು ಬದಲಾಗುತ್ತಿದೆ ಎನ್ನುವ ವೇಳೆಗೆ ಎಜೆಯ ಮೂರು ಜನ ಕುತಂತ್ರಿ ಸೊಸೆ ಗಳು ಮಾಡುವ ಕುತಂತ್ರದಿಂದ ಲೀಲಾ ಮತ್ತೊಮ್ಮೆ ಕೆಟ್ಟವಳಾಗಿ ಬಿಂಬಿತಳಾಗಿ, ಎಜೆಯ ಕೋಪಕ್ಕೆ ಗುರಿಯಾಗ್ತಾಳೆ.

ಎಜೆ ಸೊಸೆಯರಲ್ಲಿ ಹಿರಿಯ ಸೊಸೆ ದುರ್ಗಾ ತನ್ನ ಅಧಿಕಾರ ಲೀಲಾ ಪಾಲಾಗುವುದನ್ನು ಸಹಿಸದೇ ಮಾಡುವ ಕುತಂತ್ರಗಳ ಭಾಗವಾಗಿ, ದೇವಾಲಯಕ್ಕೆ ಒಡವೆ ಕಳುಹಿಸುವ ನೆಪದಲ್ಲಿ ಮಾಡಿದ ತಂತ್ರದ ಕಾರಣ ಅಮಾಯಕಿ ಲೀಲಾ ಕಳ್ಳನ ಕೈಗೆ ಒಡವೆ ಇಟ್ಟು ಎಜೆಯ ಕೋಪಕ್ಕೆ ಗುರಿಯಾಗಿದ್ದಾಗಿದೆ. ಅಲ್ಲದೇ ಅನಂತರ ಇದಕ್ಕೆಲ್ಲಾ ಕಾರಣ ದುರ್ಗಾ ಎಂದು ತಿಳಿದು ಪೋಲಿಸರನ್ನು ಕರೆಸಿದಾಗ ಮನೆಯಲ್ಲಿ ಮತ್ತೊಂದು ಹೈ ಡ್ರಾಮ ನಡೆದು ಮತ್ತೆ ಎಜೆ ಕೋಪಕ್ಕೆ ಗುರಿಯಾದ ಲೀಲಾ ಸವಾಲೊಂದನ್ನು ಹಾಕುತ್ತಾಳೆ.

ಲೀಲಾ ತಾನು 48 ಗಂಟೆಗಳಲ್ಲಿ ದುರ್ಗಾ ತಪ್ಪನ್ನು ಸಾಬೀತು ಮಾಡದೇ ಇದ್ದಲ್ಲಿ ಮನೆ ಬಿಟ್ಟು ಹೇಗೋದಾಗಿ ಸವಾಲನ್ನು ಹಾಕಿದ್ದಳು. ಅದರಂತೆ 48 ಗಂಟೆಗಳಿಗೂ ಮೊದಲೇ ಕಳ್ಳನನ್ನು ಹಿಡಿದು ತಂದು ದುರ್ಗಾ ಮಾಡಿದ ತಪ್ಪನ್ನು ಸಾಬೀತು ಮಾಡಿದಳು. ಆದರೆ ದುರ್ಗಾ ಮೊಸಳೆ ಕಣ್ಣೀರು ಹಾಕಿ, ಆಡಿದ ನಾಟಕದ ಮುಂದೆ ಎಲ್ಲಾ ಉಲ್ಟಾ ಹೊಡೆದು ಕಳ್ಳ ಕೂಡಾ ಲೀಲಾ ತನಗೆ ದುಡ್ಡು ನೀಡಿ ಕರೆ ತಂದಿದ್ದಾಳೆ ಎಂದು ಹೇಳಿದ್ದು ದೊಡ್ಡ ಎಡವಟ್ಟಿಗೆ ಕಾರಣ ಆಗಿದೆ.

ಇಷ್ಟಾದ ಮೇಲೂ ಸಹಾ ಲೀಲಾ ದುರ್ಗಾ ಕೋಣೆಯಲ್ಲಿ ಒಡವೆ ಇದೆ ಅನ್ನೋ ನಂಬಿಕೆಯಿಂದ ಅದನ್ನೂ ಪ್ರೂವ್ ಮಾಡೋಕೆ ಟ್ರೈ ಮಾಡಿದಾಗಲೂ ಚಾಲಾಕಿ ದುರ್ಗಾ ಚಾಣಾಕ್ಷತನದಿಂದ ಅದರಲ್ಲೂ ತಪ್ಪಿಸಿಕೊಂಡು, ಎಜೆ ಮುಂದೆ ತಾನೊಬ್ಬ ಆದರ್ಶ ಸೊಸೆ, ಮನೆಯ ಜವಾಬ್ದಾರಿ ತನ್ನ ಗುರಿ, ತನ್ನ ಹೊಣೆ ಎಂದೆಲ್ಲಾ ಸಾಬೀತು ಮಾಡುವ ಹಾಗೆ ನಟಿಸಿದ್ದಾಳೆ. ಇನ್ನು ತನ್ನ ಟಾಸ್ಕ್ ನಲ್ಲಿ ಸೋತ ಲೀಲಾ ಗೆ ಈಗ ಮನೆ ಬಿಟ್ಟು ಹೋಗೋದು ಬಿಟ್ಟು ಬೇರೆ ದಾರಿಯಿಲ್ಲ ಅನ್ನೋ ಹಾಗೆ ಆಗಿದೆ.

ಹಾಗಾದರೆ ದುರ್ಗಾ ಹಾಗೂ ಲೀಲಾ ನಡುವೆ ನಡೆದ ಈ ಜಟಾಪಟಿಯಲ್ಲಿ ಲೀಲಾ ಸೋತೇ ಹೋದಳಾ?? ದುರ್ಗಾ ತನ್ನ ಕುತಂತ್ರದಲ್ಲಿ ಯಶಸ್ಸನ್ನು ಪಡೆದುಕೊಂಡು ಅಮಾಯಕಿ ಲೀಲಾನ ಮನೆಯಿಂದ ಹೊರಗೆ ಕಳಿಸೋ ತನ್ನ ಮೋಸದಾಟದಲ್ಲಿ ಲೀಲಾಳನ್ನು ಬಲಿಪಶು ಮಾಡಿ ಬಿಟ್ಟಳಾ ? ಎನ್ನುವ ಪ್ರಶ್ನೆಗಳು ಕಾಡಿವೆ.. ಲೀಲಾ ತಲೆ ಬಗ್ಗಿಸಿಕೊಂಡು ಮನೆಯಿಂದ ಹೊರಗೆ ಹೋಗುವಳೋ ಅಥವಾ ದುರ್ಗಾ ಮಾಡಿದ ಕುತಂತ್ರವನ್ನು ಬೇಧಿಸ್ತಾಳಾ ಇದು ಸದ್ಯದ ಕುತೂಹಲದ ವಿಷಯವಾಗಿದೆ.

Leave a Reply

Your email address will not be published. Required fields are marked *