ದುಬೈನಲ್ಲಿ 640 ಕೋಟಿಗೆ ಮನೆ ಖರೀದಿಸಿದ ಮುಖೇಶ್ ಅಂಬಾನಿ: ಈ ಮನೆಯ ವಿಶೇಷತೆಗಳು ಅಬ್ಬಾ ಅದ್ಭುತ!!

Entertainment Featured-Articles News
59 Views

ಮುಖೇಶ್ ಅಂಬಾನಿ ಹಾಗೂ ಅವರ ಕುಟುಂಬದ ಐಶಾರಾಮೀ ಬದುಕಿನ ಚಿತ್ರಣದ ವಿಚಾರವಾಗಿ ಆಗಾಗ ಸುದ್ದಿಗಳಾಗುತ್ತಲೇ ಇರುತ್ತವೆ. ರಿಲಯನ್ಸ್ ಗ್ರೂಪ್ ನ ಒಡೆತನವನ್ನು ಪಡೆದಿರುವ ಮುಖೇಶ್ ಅಂಬಾನಿ ವಿಶ್ವದ ಪ್ರಮುಖ ಉದ್ಯಮಗಳಲ್ಲಿ ಒಬ್ಬರಾಗಿರುವುದು ಮಾತ್ರವೇ ಅಲ್ಲದೇ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಂಬಾನಿ ಕುಟುಂಬದ ವಿಚಾರಗಳು ಹೊರ ಬಂದಾಗಲೆಲ್ಲಾ ಅದು ದೊಡ್ಡ ಸುದ್ದಿಯಾಗುತ್ತದೆ. ಈಗ ಒಂದು ಹೊಸ ವಿಚಾರವೊಂದು ಮಾದ್ಯಮಗಳ ಸುದ್ದಿಗಳಲ್ಲಿ ಹರದಾಡಿ ಎಲ್ಲರ ಗಮನ ಸೆಳೆಯುವ ಜೊತೆಗೆ ಕುತೂಹಲವನ್ನು ಸಹಾ ಕೆರಳಿಸಿದೆ. ಹಾಗಾದರೆ ಏನೀ ಆಸಕ್ತಿಕರ ವಿಚಾರ ತಿಳಿಯೋಣ ಬನ್ನಿ.

ಮುಖೇಶ್ ಅಂಬಾನಿ ಒಡೆತನದ ರಿಲಯಕ್ಸ್ ಇಂಡಸ್ಟ್ರೀಸ್ ಲಿ. ದುಬೈನಲ್ಲಿ 80 ಮಿಲಿಯನ್ ಡಾಲರ್ ಗಳು ಅಂದರೆ ಸುಮಾರು 640 ಕೋಟಿ ರೂ.ಗಳ ಐಶಾರಾಮೀ ಮನೆಯೊಂದನ್ನು ಖರೀದಿ ಮಾಡಿದೆ ಎನ್ನುವ ಸುದ್ದಿ ಎಲ್ಲರ ಕುತೂಹಲ ಕೆರಳಿಸಿದೆ. ಈ ಐಶಾರಾಮೀ ಮನೆಯನ್ನು ಖರೀದಿ ಮಾಡಿರುವ ವಿಚಾರವನ್ನು ಇನ್ನೂ ಅವರು ಅಧಿಕೃತವಾಗಿ ಘೋಷಣೆ ಮಾಡಿಲ್ಲವಾದರೂ, ಕೆಲವೊಂದು ಮೂಲಗಳ ಪ್ರಕಾರ ಮನೆ ಖರೀದಿ ಮಾಡಿರುವುದು ನಿಜ ಎನ್ನಲಾಗಿದೆ. ಬೀಚ್ ಪಕ್ಕದಲ್ಲಿರುವ ಮನೆಯನ್ನು ಖರೀದಿ ಮಾಡಲಾಗಿದ್ದು, ಇದು ನಗರದ ಅತಿ ದೊಡ್ಡ ವಸತಿ ಆಸ್ತಿ ವ್ಯವಹಾರವಾಗಿದೆ ಎಂದು ಒಪ್ಪಂದದ ಬಗ್ಗೆ ತಿಳಿದ ವ್ಯಕ್ತಿಯೊಬ್ಭರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಪಾಮ್ ಜುಮೇರಾ ಹೆಸರಿನ ಕೃತಕವಾದ ದ್ವೀಪದಲ್ಲಿ ಇರುವ ಈ ಐಶಾರಾಮೀ ಮನೆಯನ್ನು ಮುಖೇಶ್ ಅಂಬಾನಿ ತಮ್ಮ ಕಿರಿಯ ಮಗ ಅನಂತ್ ಅಂಬಾನಿ ಅವರಿಗಾಗಿ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಈ ದ್ವೀಪವು ತಾಳೆ ಮರದ ಆಕಾರದಲ್ಲಿ ಇದ್ದು, ಈ ದ್ವೀಪದ ಉತ್ತರ ಭಾಗದಲ್ಲಿ ಈ ಇರುವ ಐಶಾರಾಮಿ ಮನೆಯಲ್ಲಿ 10 ಬೆಡ್ ರೂಂ ಗಳು, ಖಾಸಗಿ ಸ್ಪಾ, ಒಳಾಂಗಣ ಮತ್ತು ಹೊರಾಂಗಣ ಈಜುಕೊಳಗಳು ಸಹಾ ಈ ಮನೆಯಲ್ಲಿದೆ ಎನ್ನುವ ಮಾಹಿತಿಯನ್ನು ಸ್ಥಳೀಯ ಮಾದ್ಯಮಗಳು ವರದಿ ಮಾಡಿದೆ. ದುಬೈ ದೀರ್ಘಾವಧಿಯ ಗೋಲ್ಡನ್ ವೀಸಾ ಮತ್ತು ಮನೆ ಮಾಲೀಕತ್ವದ ನಿರ್ಬಂಧಗಳನ್ನು ಸಡಿಲಿಸಿದೆ ಎನ್ನಲಾಗಿದೆ.

ಈ ಐಶಾರಾಮೀ ಮನೆಯ ಖರೀದಿಯ ನಂತರ ಮುಖೇಶ್ ಅಂಬಾನಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಬ್ರಿಟನ್ ನ ಫುಟ್ಬಾಲ್ ಆಟಗಾರ ಡೇವಿಡ್ ಬೆಕ್ ಹ್ಯಾಂ ಮತ್ತು ಬಾಲಿವುಡ್ ನಟ ಶಾರೂಖ್ ಖಾನ್ ಗೆ ದುಬೈನಲ್ಲಿ ನೆರೆ ಹೊರೆಯ ಮನೆಯವರಾಗಿದ್ದಾರೆ. ಮುಖೇಶ್ ಅಂಬಾನಿ ಅವರು ಕಿರಿ ಮಗನಿಗಾಗಿ ಈಗ ಖರೀದಿ ಮಾಡಿರುವ ಮನೆ ಅವರು ದುಬೈ ಗೆ ತೆರಳಿದಾಗ ಉಳಿದುಕೊಳ್ಳಲು ಮಾತ್ರವೇ ಎನ್ನಲಾಗಿದ್ದು, ಮುಂಬೈನ ಆ್ಯಂಟೀಲಿಯಾ ಅವರ ಮೂಲ ನಿವಾಸವಾಗಿಯೇ ಇರಲಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *