ದುಬೈನಲ್ಲಿ ಅಭಿಮಾನಿಯಿಂದ ಐತಿಹಾಸಿಕ ಉಡುಗೊರೆ ಪಡೆದ ಅಲ್ಲು ಅರ್ಜುನ್
ತೆಲುಗು ಸಿನಿ ರಂಗದ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಅವರು ಪ್ರಸ್ತುತ ಅವರ ಬಹು ನಿರೀಕ್ಷಿತ ಸಿನಿಮಾ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸುಕುಮಾರ್ ನಿರ್ದೇಶನದ ಈ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು, ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಸಿನಿಮಾ ಬಿಡುಗಡೆಯ ದಿನಾಂಕ ಕೂಡಾ ಘೋಷಣೆಯಾಗಿದ್ದು, ಕ್ರಿಸ್ ಮಸ್ ಹಬ್ಬಕ್ಕೆ ಬೆಳ್ಳಿ ತೆರೆಯ ಮೇಲೆ ಪುಷ್ಪ ಪ್ರೇಕ್ಷಕರನ್ನು ರಂಜಿಸುವುದಕ್ಕಾಗಿ ಸಿದ್ಧವಾಗುತ್ತಿದೆ. ಇದೀಗ ಸಿನಿಮಾ ಶೂಟಿಂಗ್ ನಡುವೆ ದುಬೈನಲ್ಲಿ ಕಾಣಸಿಕೊಂಡಿದ್ದಾರೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು.
ಅಲ್ಲು ಅರ್ಜುನ್ ದುಬೈ ನಲ್ಲಿ ಕಾಣಿಸಿಕೊಂಡ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಾ ವೈರಲ್ ಆಗಿವೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಫೋಟೋಗಳನ್ನು ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ. ಇನ್ನು ದುಬೈ ಗೆ ಭೇಟಿ ನೀಡಿರುವ ಅಲ್ಲು ಅರ್ಜುನ್ ಅವರಿಗೆ ದುಬೈನಲ್ಲಿ ಒಂದು ಅತ್ಯಮೂಲ್ಯವಾದ ಅಥವಾ ಒಂದು ವಿಶೇಷವಾದ ಉಡುಗೊರೆಯೊಂದು ಅರಸಿ ಬಂದಿದ್ದು, ಈ ವಿಶೇಷ ಉಡುಗೊರೆಯು ಈಗ ಎಲ್ಲರ ಗಮನವನ್ನು ಸೆಳೆದಿದೆ.
ಹೌದು, ದುಬೈ ಗೆ ಭೇಟಿ ನೀಡಿರುವ ನಟ ಅಲ್ಲು ಅರ್ಜುನ್ ಅವರಿಗೆ ಮಲೆಯಾಳಿ ಮೂಲದ ಉದ್ಯಮಿ ಒಬ್ಬರು ನಟನಿಗೆ ಈ ವಿಶೇಷವಾದ ಉಡುಗೊರೆಯನ್ನು ನೀಡಿದ್ದಾರೆ. ದುಬೈನಲ್ಲಿರುವ ಮಲೆಯಾಳಿ ಉದ್ಯಮಿ ರಿಯಾಜ್ ಕಿಲ್ಟನ್ ಅವರು ನಟ ಅಲ್ಲು ಅರ್ಜುನ್ ಅವರಿಗೆ ಸುಮಾರು 160 ವರ್ಷ ಹಳೆಯದಾದ ಪಿಸ್ತೂಲನ್ನು ಉಡುಗೊರೆಯಾಗಿ ನೀಡುವ ಮೂಲಕ ಗಮನವನ್ನು ಸೆಳೆದಿದ್ದಾರೆ. ಈ ಮೂಲಕ ಅಭಿಮಾನ ನಟನ ಬಗ್ಗೆ ಅಭಿಮಾನವನ್ನು ಮೆರೆದಿದ್ದಾರೆ.
ಅಲ್ಲು ಅರ್ಜುನ್ ಅವರು ತಮ್ಮ ಪತ್ನಿ ಸ್ನೇಹಾ ರೆಡ್ಡಿ, ಹಾಗೂ ತಮ್ಮ ಮಕ್ಕಳ ಜೊತೆಗೆ ದುಬೈನಲ್ಲಿ ಹಾಲಿಡೇಸ್ ಎಂಜಾಯ್ ಮಾಡುತ್ತಿದ್ದಾರೆ. ಸತತ ಚಿತ್ರೀಕರಣದಿಂದ ಬಳಲಿದ್ದ ನಟ ಅಲ್ಲು ಅರ್ಜುನ್ ಅವರು ಚಿತ್ರೀಕರಣದಿಂದ ವಿರಾಮ ಪಡೆದುಕೊಂಡು ಕಳೆದ ಒಂದು ವಾರದಿಂದ ಮಡದಿ ಹಾಹೂ ಮಕ್ಕಳೊಡನೆ ದುಬೈನಲ್ಲಿ ಬೀಡು ಬಿಟ್ಟಿದ್ದು, ಅಲ್ಲಿ ಸಂತೋಷದ ದಿನಗಳನ್ನು ಕಳೆಯುತ್ತಾ, ಕುಟುಂಬದ ಜೊತೆಗೆ ಸಮಯವನ್ನು ಕಳೆಯುತ್ತಿದ್ದಾರೆ.
ಇನ್ನು ನಿನ್ನೆ ತಾನೇ ಅಲ್ಲು ಅರ್ಜುನ್ ಅವರ ಬಹು ನಿರೀಕ್ಷಿತ ಪುಷ್ಪ ಸಿನಿಮಾದಲ್ಲಿ ನಾಯಕಿ ರಶ್ಮಿಕಾ ಮಂದಣ್ಣ ಅವರ ಫಸ್ಟ್ ಲುಕ್ ಬಿಡುಗಡೆ ಆಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ನಟಿಯ ಫಸ್ಟ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ರಶ್ಮಿಕಾ ಲುಕ್ ನೋಡಿ ನೆಟ್ಟಿಗರು ಹಾಗೂ ಅಭಿಮಾನಿಗಳು ಮೆಚ್ಚುಗೆಯನ್ನು ಹರಿಸುತ್ತಾ, ಹೊಗಳುತ್ತಾ ಸಾಗಿದ್ದಾರೆ.