“ದುಡ್ಡು ಕೊಟ್ಟು ಅಂದ ಪಡೆದ ನಟಿ” ಎಂದು ಬಾಲಿವುಡ್ ನಟಿಯ ಫೋಟೋ ಹಾಕಿ ಕಾಲೆಳೆದ ಕಮಾಲ್ ಖಾನ್

0
193

ಬಾಲಿವುಡ್ ನಟಿ, ಕೆಜಿಎಫ್ ಚಾಪ್ಟರ್ ಒನ್ ನ ಹಿಂದಿ ವರ್ಷನ್ ನಲ್ಲಿ ಐಟಂ ಸಾಂಗ್ ಗೆ ಹೆಜ್ಜೆ ಹಾಕಿದ ನಟಿ ಮೌನಿ ರಾಯ್ ಕಿರುತೆರೆ ಹಾಗೂ ಬಾಲಿವುಡ್ ಎರಡೂ ಕಡೆ ಜನಪ್ರಿಯತೆ ಪಡೆದುಕೊಂಡಿರುವ ನಟಿಯಾಗಿದ್ದಾರೆ. ಮೌನಿ ರಾಯ್ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆಯನ್ನು ತಂದು ಕೊಟ್ಟಿದ್ದು ನಾಗಿನ್ ಸೀರಿಯಲ್ ಎನ್ನುವುದು ವಾಸ್ತವ. ಕಿರುತೆರೆಯಲ್ಲಿ ನಾಗಿಣಿಯಾಗಿ ಮೌನಿ ರಾಯ್ ಪಡೆದ ಯಶಸ್ಸು ಅನಂತರದ ನಾಗಿನ್ ಸಿರೀಸ್ ಗಳ ಯಾವ ನಟಿಗೂ ಸಿಗಲಿಲ್ಲ ಎನ್ನುವುದು ಕೂಡಾ ನಿಜವಾದ ವಿಷಯವೇ ಆಗಿದೆ.

ಮೌನಿ ರಾಯ್ ಬಣ್ಣದ ಲೋಕಕ್ಕೆ ಅಡಿಯಿರಿಸಿ ದಶಕಗಳೇ ಕಳೆದಿವೆ. ಅವರಿಗೆ ಈಗ 36 ವರ್ಷ ವಯಸ್ಸು. ಆದರೆ ವರ್ಷದಿಂದ ವರ್ಷಕ್ಕೆ ಮೌನಿ ರಾಯ್ ಅವರ ಅಂದ ಮತ್ತು ಚಾರ್ಮ್ ಕುಗ್ಗುತ್ತಿಲ್ಲ ಬದಲಾಗಿ ಮೌನಿ ವರ್ಷದಿಂದ ವರ್ಷಕ್ಕೆ ಇನ್ನೂ ಗ್ಲಾಮರಸ್ ಆಗಿ ಕಾಣುತ್ತಿದ್ದಾರೆ. ಈ ಒಂದು ಬದಲಾವಣೆಯನ್ನು ಅವರ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಸಹಾ ಗಮನಿಸಿದ್ದಾರೆ. ಅಲ್ಲದೇ ಮೌನಿ ರಾಯ್ ಅವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿರಬಹುದು ಎನ್ನುವ ಮಾತುಗಳು ಕೂಡಾ ಕೇಳಿ ಬಂದಿವೆ.

ಆದರೆ ಮೌನಿ ರಾಯ್ ಮಾತ್ರ ಈವರೆಗೂ ಇಂತಹ ಯಾವುದೇ ವಿಚಾರದಲ್ಲೂ ಕೂಡಾ ಪ್ರತಿಕ್ರಿಯೆ ನೀಡುವುದಾಗಲೀ ಅಥವಾ ಅದರ ಬಗ್ಗೆ ಮಾತನಾಡುವುದಾಗಲೀ ಮಾಡಿಲ್ಲ. ಆದರೆ ಈಗ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕಮಾಲ್ ಖಾನ್ ಅವರು ಮೌನಿ ರಾಯ್ ಬಗ್ಗೆ ಮಾತನಾಡಿ ನಟಿಯ ಕಾಲೆಳೆಯುವ ಕೆಲಸವನ್ನು ಮಾಡಿದ್ದು, ನಟಿಯ ಹಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಕಮಾಲ್ ಖಾನ್ ಅವರು ಮೌನಿ ಅವರ ಹಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಕ್ಯಾಪ್ಷನ್ ನಲ್ಲಿ “ಹಣವು ವ್ಯಕ್ತಿಯ ಲುಕ್ಸ್ ಕೂಡಾ ಬದಲಾಯಿಸಬಲ್ಲದು, ಇಲ್ಲಿ ನೋಡಿ ನಟಿ ಮೌನಿ ರಾಯ್ ತಮ್ಮ ಲುಕ್ಸ್ ಅನ್ನು ಬದಲಾವಣೆ ಮಾಡುತ್ತಲೇ ಇರುವರು” ಎನ್ನುವ ಸಾಲುಗಳನ್ನು ಬರೆದುಕೊಂಡಿದ್ದಾರೆ. ಈ ಮೂಲಕ ಮೌನಿ ಹಣ ನೀಡಿ ಅಂದ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತನ್ನು ಅವರು ಹೇಳಿದ್ದಾರೆ.

ಇಲ್ಲಿ ಕಮಾಲ್ ಖಾನ್ ಮೌನಿ ಪ್ಲಾಸ್ಟಿಕ್ ಸರ್ಜರಿ ಅಥವಾ ಇನ್ನಾವುದೋ ವಿಧಾನದಲ್ಲಿ ಹಣ ಖರ್ಚು ಮಾಡಿ ಅಂದ ಹೆಚ್ಚಿಸಿಕೊಂಡಿದ್ದಾರೆ ಎಂದು ಪರೋಕ್ಷವಾಗಿ ವ್ಯಂಗ್ಯ ಮಾಡಿದ್ದಾರೆ. ಕಮಾಲ್ ಖಾನ್ ಆಗಾಗ ಬಾಲಿವುಡ್ ನ ಸೆಲೆಬ್ರಿಟಿಗಳನ್ನು ಕೆಣಕುವ, ಅವರ ಬಗ್ಗೆ ವ್ಯಂಗ್ಯ ಮಾಡುವ ಮೂಲಕ ಸುದ್ದಿಗಳಲ್ಲಿ ಇರುತ್ತಾರೆ. ‌ಬಾಲಿವುಡ್ ನ ಸ್ಟಾರ್ ನಟರನ್ನು ಕೂಡಾ ಟೀಕಿಸುವಲ್ಲಿ ಕಮಾಲ್ ಖಾನ್ ಸದಾ ಮುಂದಾಗಿರುತ್ತಾರೆ.

LEAVE A REPLY

Please enter your comment!
Please enter your name here