ದುಡಿಮೆಯ ಜೀವನ ಮೆಚ್ಚಿ ಮನೆಗೆ ಹರಿದು ಬಂದ ದೇವರ ಕೃಪೆ: ಬಿಗ್ ಬಾಸ್ ಸ್ಪರ್ಧಿ ಶಂಕರ್ ಅಶ್ವಥ್

0 2

ಕನ್ನಡ ಚಿತ್ರರಂಗದ ಹಿರಿಯ ನಟ ದಿವಂಗತ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಅವರು ಸ್ವಾಭಿಮಾನಿ ಬದುಕನ್ನು ಕಟ್ಟಿಕೊಂಡವರು. ಸಿನಿಮಾಗಳಲ್ಲಿ ತನಗೆ ಸೂಕ್ತ ಅವಕಾಶ ಸಿಗಲಿಲ್ಲ ಎಂದು ಕೊರಗುತ್ತಾ ಕೂತವರಲ್ಲ, ಬದಲಾಗಿ ತನ್ನ ಜೀವನವನ್ನು ಕಟ್ಟಿಕೊಂಡು ಸ್ವಾಭಿಮಾನಿ ಬದುಕಿಗೆ ಮಾದರಿಯಾದವರು. ಶಂಕರ್ ಅಶ್ವಥ್ ಅವರು ಉಬರ್ ನಲ್ಲಿ ಚಾಲಕನಾಗಿ ಜೀವನ ನಿರ್ವಹಣೆ ಮಾಡಿದವರು, ಅದರ ನಡುವೆ ಸಿಕ್ಕ ಸಿನಿಮಾ ಅವಕಾಶಗಳನ್ನು ಸಹಾ ಸದುಪಯೋಗ ಪಡಿಸಿಕೊಂಡವರು. ಆದರೆ ಸಿನಿಮಾ ಅವಕಾಶಗಳಿಗಾಗಿ ಎಂದೂ‌ ಕಾಯುತ್ತಾ ಕೂರದೇ ಕಾಯಕದ ಕಡೆಗೆ ಗಮನ ನೀಡಿ, ಪತ್ನಿ ಸಮೇತ ದುಡಿಮೆಯಲ್ಲಿ ತೊಡಗಿಕೊಂಡವರು ಶಂಕರ್ ಅಶ್ವಥ್ ಅವರು.

ನಟ ಶಂಕರ್ ಅಶ್ವಥ್ ಈ ಬಾರಿ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸ್ಪರ್ಧಿಯಾಗಿ ಮನೆಯನ್ನು ಪ್ರವೇಶ ಮಾಡಿದ್ದರು. ಈ ವೇಳೆ ಅವರು ತಮ್ಮ ಜೀವನದ ಹಾಗೂ ತಂದೆಯವರ ವಿಚಾರವಾಗಿ ಹತ್ತು ಹಲವು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡರು. ಶಂಕರ್ ಅಶ್ವಥ್ ಅವರ ಬಗ್ಗೆ ಜನರಿಗೆ ಇನ್ನು ಹೆಚ್ಚಿನ ವಿಷಯಗಳು ತಿಳಿದು ಬಂದವು. ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಸಕ್ರಿಯವಾಗಿರುವ ಶಂಕರ್ ಅಶ್ವಥ್ ಅವರು ತಮ್ಮ ನಿತ್ಯ ಜೀವನದ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಆಗು ಹೋಗುಗಳ ವಿಚಾರವಾಗಿ ಮಾತನಾಡುತ್ತಾರೆ. ಕೆಲವೊಂದು ಪ್ರಶ್ನೆಗಳು ಸಹಾ ಜನರ ಮುಂದೆ ಇಡುತ್ತಾರೆ. ಹೀಗೆ ಹತ್ತು ಹಲವು ವಿಚಾರಗಳನ್ನು ಹಂಚಿಕೊಳ್ಳುವ ಅವರು ಇದೀಗ ಮತ್ತೊಂದು ದೇವರ ಕೃಪೆಯ ವಿಚಾರವನ್ನು ಅವರು ಹಂಚಿ ಕೊಂಡಿದ್ದಾರೆ.

ಶಂಕರ್ ಅಶ್ವಥ್ ಅವರು ತಮ್ಮ ಮನೆಗೆ ಬಂದ ದೇಗುಲದ ಅರ್ಚಕರೊಬ್ಬರ ಫೋಟೋ ಶೇರ್ ಮಾಡಿಕೊಂಡು, “ನಮ್ಮ ದುಡಿಮೆಯ ಜೀವನ ಮೆಚ್ಚಿ ಬೆಂಗಳೂರಿನ ಶೇಷಾದ್ರಿಪುರಂ ಆಂಜನೇಯನ ದೇವಸ್ಥಾನದ ಅರ್ಚಕರಾದ ಹರೀಶ್ ಭಟ್ಟರು ಪ್ರಸಾದ ಕೊಟ್ಟು ಶಾಲು ಹೊದಿಸಿ ದೇಹಕ್ಕೆ ಆರೋಗ್ಯ ದುಡಿಮೆಗೆ ಶಕ್ತಿ ನಿಷ್ಠೆಗೆ ದೇವರ ವರ ಯಶಸ್ಸು ಸಿಗಲೆಂದು ಆಶೀರ್ವದಿಸಿದರು. ಜೈ ಶ್ರೀ ರಾಮ್, ಜೈ ಆಂಜನೇಯ” ಎಂದು ಅವರು ಬರೆದುಕೊಂಡಿದ್ದಾರೆ. ದೇವರ ಕೃಪೆ ತಮಗೆ ದೊರೆತ ಸಂತೋಷದ ಘಳಿಗೆಗಳ ಬಗ್ಗೆ ಎಲ್ಲರೊಡನೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Leave A Reply

Your email address will not be published.