ದೀಪಿಕಾ ಪಡುಕೋಣೆ ಈಗ ಮಾಡಿದ್ದನ್ನು ನಾನು 15 ವರ್ಷಗಳ ಹಿಂದೇನೇ ಮಾಡಿದ್ದೆ: ಮಲ್ಲಿಕಾ ಶೆರಾವತ್ ಬೋಲ್ಡ್ ಮಾತು

Entertainment Featured-Articles Movies News

ಬಾಲಿವುಡ್ ನಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಗಳ ನಿದ್ದೆಗೆಡಿಸಿದ್ದವರು ನಟಿ ಮಲ್ಲಿಕಾ ಶೆರಾವತ್. ನಟಿ ಮಲ್ಲಿಕಾ ಶೆರಾವತ್ ಎಂದರೆ ಅಲ್ಲಿ ಬೋಲ್ಡ್ ನೆಸ್ ಪಕ್ಕಾ ಎನ್ನುವಷ್ಟರ ಮಟ್ಟಿಗೆ ಮಲ್ಲಿಕಾ ಮೋಡಿ ಮಾಡಿದ ದಿನಗಳೊಂದಿತ್ತು. ಇದೀಗ ಮಲ್ಲಿಕಾ ಶೆರಾವತ್ ಬಾಲಿವುಡ್ ಗೆ ಕಮ್ ಬ್ಯಾಕ್ ಮಾಡಿದ್ದಾರೆ. RK/RKAY ಸಿನಿಮಾದ ಮೂಲಕ ಮಲ್ಲಿಕಾ ಬಾಲಿವುಡ್ ಗೆ ರೀ ಎಂಟ್ರಿ ನೀಡಿದ್ದಾರೆ. ತನ್ನ ಹೊಸ ಸಿನಿಮಾದ ಮೂಲಕ ಸದ್ದು ಮಾಡುತ್ತಿರುವ ಮಲ್ಲಿಕಾ ಇದೀಗ ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಬಗ್ಗೆ ಮಾತನಾಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.

ನಟಿ ದೀಪಿಕಾ ಪಡುಕೋಣೆ ನಟಿಸಿ, ನಿರ್ಮಾಣ ಮಾಡಿದ್ದ ಗೆಹರಾಯಿಯಾ ಸಿನಿಮಾ ಕೆಲವು ದಿನಗಳ ಹಿಂದೆ ಸಾಕಷ್ಟು ದೊಡ್ಡ ಸದ್ದು ಮಾಡಿ, ಚರ್ಚೆಯನ್ನು ಹುಟ್ಟು ಹಾಕಿತ್ತು. ಗೆಹರಾಯಿಯಾ ಸಿನಿಮಾ ಸದ್ದು ಮಾಡಿದ್ದು ಸಿನಿಮಾದಲ್ಲಿನ ಬೋಲ್ಡ್ ಸಿನಿಮಾಗಳ ಮೂಲಕ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಈಗ ಇದರ ಬಗ್ಗೆ ಮಲ್ಲಿಕಾ ಶೆರಾವತ್ ಮಾತನಾಡಿದ್ದಾರೆ. ನಟಿ ಮಲ್ಲಿಕಾ ಶೆರಾವತ್ ಬಾಲಿವುಡ್ ನಲ್ಲಿ ತನ್ನ ಬೋಲ್ಡ್ ಪಾತ್ರಗಳಿಂದಲೇ ಹೆಚ್ಚು ಸದ್ದನ್ನು ಮಾಡಿದಂತಹ ನಟಿ. ಆದರೆ ಕೆಲ ಸಮಯದಿಂದ ಮಲ್ಲಿಕಾ ಸಿನಿಮಾಗಳಿಂದ ದೂರ ಉಳಿದಿದ್ದರು.

ಇದೀಗ ಮಲ್ಲಿಕಾ ಶೆರಾವತ್ ಅವರು ಬಾಲಿವುಡ್ ಗೆ ರೀ ಎಂಟ್ರಿ ನೀಡಿದ್ದು, ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ಮಲ್ಲಿಕಾ ಶೆರಾವತ್ ಅವರು ಇದೀಗ ತಮ್ಮ ಅಂದಿನ ಸೂಪರ್ ಹಿಟ್ ಸಿನಿಮಾ ಮರ್ಡರ್ ಅನ್ನು ದೀಪಿಕಾ ಪಡುಕೋಣೆ ಅಭಿನಯದ ಇತ್ತೀಚಿನ ಸಿನಿಮಾ ಗೆಹರಾಯಿಯಾ ಗೆ ಹೋಲಿಕೆ ಮಾಡಿದ್ದಾರೆ. ನಟಿ ಮಲ್ಲಿಕಾ ಶೆರಾವತ್ ಅಂದು ನಟಿಸಿದ್ದ ಮರ್ಡರ್ ಸಿನಿಮಾ ಬಿಡುಗಡೆ ನಂತರ ಅದರಲ್ಲಿದ್ದ ಬೋಲ್ಡ್ ದೃಶ್ಯಗಳಿಂದ ದೊಡ್ಡ ಸಂಚಲನವನ್ನು ಹುಟ್ಟು ಹಾಕಿತ್ತು.

ಆ ಸಿನಿಮಾವನ್ನು ಅನೇಕರು ಇಂದಿಗೂ ಸಹಾ ಮರೆತಿಲ್ಲ. ಈಗ ಮಲ್ಲಿಕಾ ಅದನ್ನೇ ಸ್ಮರಿಸುತ್ತಾ, ಗೆಹರಾಯಿಯಾ ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ ಇಂದು ಏನು ಮಾಡಿದ್ದಾರೋ ಅದನ್ನು ನಾನು 15 ವರ್ಷಗಳ ಹಿಂದೆಯೇ ಮಾಡಿದ್ದೇನೆ ಎಂದು ಬಹಳ ಬೋಲ್ಡ್ ಆಗಿ ಉತ್ತರವನ್ನು ನೀಡಿದ್ದಾರೆ ನಟಿ ಮಲ್ಲಿಕಾ ಶೆರಾವತ್. ಆಗೆಲ್ಲಾ ಬೋಲ್ಡ್ ಮತ್ತು ಹಾಟ್ ಸೀನ್ ಗಳಲ್ಲಿ ಕಾಣಿಸಿಕೊಂಡರೆ, ನಮ್ಮ‌ ನಟನೆಗೆ ಬೆಲೆ ಕೊಡ್ತಾ ಇರ್ಲಿಲ್ಲ. ನಾನು ಕಿಸ್ ಮತ್ತು ಬಿಕಿನಿ ದೃಶ್ಯದಲ್ಲಿ ಕಾಣಿಸಿಕೊಂಡಾಗ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು.

ಆದರೆ ಇಂದು ಎಲ್ಲಾ ಬದಲಾಗಿದೆ. ಆದರೆ ಈಗ ಜನರು ಬೋಲ್ಡ್ ಸಿನಿಮಾಗಳ ಕಡೆಗೆ ವಾಲಿದ್ದಾರೆ. ಗೆಹರಾಯಿಯಾ ಸಿನಿಮಾದಲ್ಲಿ ದೀಪಿಕಾ ಮಾಡಿದ್ದನ್ನು ನಾನು ಅಂದು ಮಾಡಿದೆ, ಆದರೆ ಆಗ ಯಾರೂ ಸಹಾ ನನ್ನ ನಟನೆಯ ಬಗ್ಗೆ ಮಾತನಾಡಲಿಲ್ಲ ಎಂದು ಮಲ್ಲಿಕಾ ಶೆರಾವತ್ ಹೇಳಿಕೊಂಡಿದ್ದಾರೆ. ಮಲ್ಲಿಕಾ ಶೆರಾವತ್ ಅವರು ಆಡಿರುವ ಮಾತುಗಳು ಇದೀಗ ಸಖತ್ ಸುದ್ದಿಯಾಗಿ ಎಲ್ಲರ ಗಮನವನ್ನು ಸೆಳೆದಿದೆ. ಕೆಲವರು ಮಲ್ಲಿಕಾ ಹೇಳಿದ ಮಾತುಗಳು ಸರಿಯಾಗಿಯೇ ಇದೆ ಎಂದಿದ್ದಾರೆ.

Leave a Reply

Your email address will not be published.