ದೀಪಿಕಾ ಪಡುಕೋಣೆಯನ್ನು ನರ್ವಸ್ ಗೊಳಿಸಿದ ಪ್ರಭಾಸ್: ಈ ಬಗ್ಗೆ ದೀಪಿಕಾ ಹೇಳಿದ್ದು ಹೀಗೆ

Written by Soma Shekar

Published on:

---Join Our Channel---

ಟಾಲಿವುಡ್ ಸ್ಟಾರ್ ನಟ, ಪ್ಯಾನ್ ಇಂಡಿಯಾ ಸ್ಟಾರ್ ಕೂಡಾ ಆಗಿರುವ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಧೇ ಶ್ಯಾಮ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ, ಸಲಾರ್ ಕೊನೆಯ ಹಂತಕ್ಕೆ ಬಂದಿದ್ದು, ಆದಿಪುರುಷ್ ಸಿನಿಮಾ ಕೂಡಾ ಬೆಳವಣಿಗೆಯ ಹಂತದಲ್ಲಿದೆ. ಇದಲ್ಲದೇ ಇಂದು ಡಿಸೆಂಬರ್ ಏಳರಂದು ನಟ ಪ್ರಭಾಸ್ ಅವರ ಹೊಸ ಸಿನಿಮಾದ ಕೆಲಸಗಳು ಪ್ರಾರಂಭವಾಗಿದೆ. ಇದು ಕೂಡಾ ಭಾರೀ ಬಜೆಟ್ ಹಾಗೂ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯೊಂದರ ಪ್ರತಿಷ್ಠಿತ ಸಿನಿಮಾ ಪ್ರಾಜೆಕ್ಟ್ ಆಗಿದೆ.

ಮಹಾನಟಿ ಸಿನಿಮಾ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾಕ್ಕೆ ಪ್ರಸ್ತುತ ಪ್ರಾಜೆಕ್ಟ್ ಕೆ ಎನ್ನಲಾಗಿದ್ದು, ಈ ಹೊಸ ಸಿನಿಮಾದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಬಾಲಿವುಡ್ ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ತೆಲುಗು ಸಿನಿ ರಂಗಕ್ಕೆ ಅಡಿಯಿಡುತ್ತಿದ್ದಾರೆ. ಸಿನಿಮಾಕ್ಕಾಗಿ ಈಗಾಗಲೇ ದೀಪಿಕಾ ಹೈದ್ರಾಬಾದ್ ಬಂದಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಹೈದ್ರಾಬಾದ್ ವಿಮಾನ ನಿಲ್ದಾಣ ದಲ್ಲಿ ಕ್ಯಾಮರಾ ಕಣ್ಣುಗಳಿಗೆ ದೀಪಿಕಾ ಸೆರೆಯಾಗಿದ್ದರು.

ಭಾರೀ ಬಜೆಟ್ ಹಾಗೂ ಅದ್ದೂರಿಯಾಗಿ ಈ ಸಿನಿಮಾ ಮೂಡಿ ಬರಲಿದೆ ಎನ್ನಲಾಗಿದ್ದು, ಸಿನಿಮಾದ ಬಜೆಟ್ ಸುಮಾರು 400 ರಿಂದ 500 ಕೋಟಿಗಳು ಎನ್ನಲಾಗಿದೆ. ವೈಜಯಂತಿ ಮೂವೀಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಸಿನಿಮಾ ಘೋಷಣೆ ಕಳೆದ ವರ್ಷವೇ ಆಗಿತ್ತು. ಸಿನಿಮಾ ಘೋಷಣೆಯ ನಂತರವೇ ನೂರು ನಿರೀಕ್ಷೆಗಳು ಹುಟ್ಟು ಕೊಂಡಿದೆ. ಇಂದು ಸಿನಿಮಾ ಪ್ರಾರಂಭವಾಗಿದೆ.

ಇನ್ನು ಈ ಸಿನಿಮಾದ ಬಗ್ಗೆ ಮಾದ್ಯಮಗಳ ಮುಂದೆ ಮಾತನಾಡಿರುವ ದೀಪಿಕಾ ಪಡುಕೋಣೆ, “ನಾನು ತುಂಬಾ ನರ್ವಸ್ ಆಗಿದ್ದೇನೆ, ಈ ಮೊದಲು ಪ್ರಭಾಸ್ ಅಥವಾ ನಾಗ್ ಅಶ್ವಿನ್ ಜೊತೆ ಕೆಲಸವನ್ನು ಮಾಡಿಲ್ಲ. ಕ್ಯಾಮೆರಾ ರೋಲ್ ಆದ್ಮೇಲೆ ಇದು ಕೂಡಾ ಪರಿಚಿತ ವಲಯವೇ ಆಗಿ ಬಿಡುತ್ತದೆ. ಹಿಂದಿ ಹೊರತಾಗಿ ಇದು ಹೊಸ ಭಾಷೆ, ಅಲ್ಲದೇ ಭಾರೀ ವಿಎಫ್ಎಕ್ಸ್ ಇರುವುದರಿಂದ ಹೊಸ ಜಗತ್ತು ಇದಾಗಲಿದ್ದು, ನಾನು ಕುತೂಹಲ ಮತ್ತು ಉತ್ಸುಕಳಾಗಿದ್ದೇನೆ” ಎಂದಿದ್ದಾರೆ.

Leave a Comment