ದೀಪಿಕಾ ದಾಸ್ ನ ಬಿಗ್ ಬಾಸ್ ಮನೆಗೆ ಮತ್ತೆ ಕಳಿಸಿದ್ದೇಕೆ? ಅಚ್ಚರಿ ಮೂಡಿಸುತ್ತೆ ಅಸಲಿ ಕಾರಣ
ಬಿಗ್ ಬಾಸ್ ಕನ್ನಡ ಸೀಸನ್ ಒಂಬತ್ತು ಹತ್ತನೇ ವಾರಕ್ಕೆ ಎಂಟ್ರಿ ನೀಡಿಯಾಗಿದೆ. ಈ ಬಾರಿ ಬಿಗ್ ಬಾಸ್ ಹೊಸ ಸೀಸನ್ ನಲ್ಲಿ ಸಾಕಷ್ಟು ವಿಶೇಷತೆಗಳಿವೆ. ಹೊಸ ಸ್ಪರ್ಧಿಗಳ ಜೊತೆಗೆ ಅನುಭವಿ ಸ್ಪರ್ಧಿಗಳು ಸಹಾ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಹೌದು, ನವೀನರು ಮತ್ತು ಪ್ರವೀಣರು ಎನ್ನುವ ಕಾನ್ಸೆಪ್ಟ್ ನೊಂದಿಗೆ ಬಂದಿರುವ ಬಿಗ್ ಬಾಸ್ ನಲ್ಲಿ ನಟಿ ದೀಪಿಕಾ ದಾಸ್ ಅವರು ಪ್ರವೀಣರ ಸಾಲಿನ ಸ್ಪರ್ಧಿಯಾಗಿದ್ದಾರೆ. ದೀಪಿಕಾ ದಾಸ್ ಅವರು ಈ ಹಿಂದೆ ಬಿಗ್ ಬಾಸ್ ಸೀಸನ್ ಏಳರಲ್ಲಿ ತಮ್ಮ ಆಟದ ಮೂಲಕ ಸಖತ್ ಸದ್ದು ಮಾಡಿದ್ದರು. ಆಗ ನಟಿ ಫಿನಾಲೆ ವಾರಕ್ಕೆ ದೀಪಿಕಾ ದಾಸ್ ಅವರು ಎಂಟ್ರಿ ನೀಡಿದ್ದರು. ಆದರೆ ಕೊನೆಯ ಹಂತದಲ್ಲಿ ದೀಪಿಕಾ ಮನೆಯಿಂದ ಎಲಿಮಿನೇಷನ್ ಎದುರಿಸಿ ಹೊರ ಬಂದಿದ್ದರು.
ಹೀಗೆ ಏಳನೇ ಸೀಸನ್ ನಲ್ಲಿ ಸಖತ್ ಹೆಸರು ಮಾಡಿದ್ದ ದೀಪಿಕಾ ದಾಸ್ ಅವರು ಈ ಬಾರಿ ಸೀಸನ್ ಒಂಬತ್ತಕ್ಕೆ ಎಂಟ್ರಿ ನೀಡಿದಾಗ ಸಹಜವಾಗಿಯೇ ಅವರ ಅಭಿಮಾನಿಗಳಿಗೆ ಖುಷಿಯನ್ನು ನೀಡಿತ್ತು. ಅಲ್ಲದೇ ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ಅವರ ಆಟ, ಅವರ ದಿಟ್ಟತನ ಮತ್ತು ಟಾಸ್ಕ್ ನಲ್ಲಿ ತನ್ನ ಸಾಮರ್ಥ್ಯವನ್ನು ಮೆರೆಯುತ್ತಾ, ಯಾವ ಗುಂಪಿಗೂ ಸೇರದೇ ತನ್ನ ಸ್ವಂತ ನಿರ್ಣಯ ಮಾಡುತ್ತಿದ್ದ ದೀಪಿಕಾ ದಾಸ್ ಅವರು ಎಂಟನೇ ವಾರಾಂತ್ಯದಲ್ಲಿ ಎಲಿಮಿನೇಟ್ ಆದಾಗ ಅವರ ಅಭಿಮಾನಿಗಳಿಗೆ ಇದು ಶಾ ಕಿಂ ಗ್ ಎನಿಸಿತ್ತು. ಆದರೆ ಆಟವನ್ನು ಆಸಕ್ತಿಕರವನ್ನಾಗಿ ಮಾಡಲು ಬಿಗ್ ಬಾಸ್ ಆಗಲೇ ಕೊಟ್ಟರು ಹೊಸ ಟ್ವಿಸ್ಟ್.
ಬಿಗ್ ಬಾಸ್ ನ ಪ್ರತಿ ಸೀಸನ್ ನಲ್ಲೂ ಸಹಾ ವೈಲ್ಡ್ ಕಾರ್ಡ್ ಎಂಟ್ರಿ ಪ್ರೇಕ್ಷಕರ ಆಸಕ್ತಿಯನ್ನು ಮತ್ತು ಮನೆ ಮಂದಿಗೆ ಕೂಡಾ ಸರ್ಪ್ರೈಸ್ ನೀಡುವ ವಿಚಾರವಾಗಿರುತ್ತದೆ. ಈ ಬಾರಿ ಸೀಸನ್ ಒಂಬತ್ತರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಎಂದಾಗ ಮೂರು ಹೆಸರುಗಳು ಕೇಳಿ ಬಂದಿದ್ದವು. ಓಟಿಟಿಯಲ್ಲಿ ಸದ್ದು ಮಾಡಿದ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ, ಬಿಗ್ ಬಾಸ್ ಎಂಟರ ವೈಲ್ಡ್ ಕಾರ್ಡ್ ಎಂಟ್ರಿ ನೀಡಿದ್ದ ಚಕ್ರವರ್ತಿ ಚಂದ್ರ ಚೂಡ್ ಮತ್ತು ಆರನೇ ವಾರದಲ್ಲಿ ಎಲಿಮಿನೇಟ್ ಆಗಿದ್ದ ಸ್ಪರ್ಧಿ ಸಾನ್ಯಾ ಅಯ್ಯರ್ ಈ ಮೂವರಲ್ಲಿ ಒಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ನೀಡಲಿದ್ದಾರೆ ಎಂದು ಎಲ್ಲೆಡೆ ಸುದ್ದಿಯಾಗಿತ್ತು.
ಅದರಲ್ಲೂ ಸೋನು ಶ್ರೀನಿವಾಸ ಗೌಡ ಬರುವುದು ಬಹುತೇಕ ಖಚಿತ ಎಂದರೆ, ಸಾನ್ಯಾ ಅಯ್ಯರ್ ಬರುವುದು ಪಕ್ಕಾ ಎಂದು ಕೆಲವು ಕಡೆ ಸುದ್ದಿಯಾಯಿತು. ಹೀಗೆ ಎಲ್ಲೆಡೆ ಸುದ್ದಿಗಳು ಹರಿದಾಡಿದ ನಂತರ ಬಿಗ್ ಬಾಸ್ ಕೊಟ್ಟ ಟ್ವಿಸ್ಟ್ ಮಾತ್ರ ಊಹೆಗೆ ಮೀರಿದ್ದಾಗಿತ್ತು. ಹೌದು, ಈ ಬಾರಿ ವೈಲ್ಡ್ ಕಾರ್ಡ್ ನಲ್ಲಿ ಎಂಟನೇ ವಾರದಲ್ಲಿ ಎಲಿಮಿನೇಟ್ ಆಗಿದ್ದ ದೀಪಿಕಾ ದಾಸ್ ಮರಳಿ ಬಂದರು. ಸೀಸನ್ ಒಂಬತ್ತರಲ್ಲಿ ಸ್ವಲ್ಪ ಡಲ್ ಆಗಿದ್ದ ದೀಪಿಕಾ ಅವರಿಗೆ ಬಿಗ್ ಬಾಸ್ ವೈಲ್ಡ್ ಕಾರ್ಡ್ ಮೂಲಕ ಮತ್ತೊಂದು ಅವಕಾಶವನ್ನು ನೀಡಿದ್ದಾರೆ.
ದೀಪಿಕಾ ದಾಸ್ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ಈ ವಿಚಾರ ದೊಡ್ಡ ಸದ್ದನ್ನು ಮಾಡಿತ್ತು. ಅನೇಕರು ದೀಪಿಕಾ ಅವರ ಬದಲಾಗಿ ಬೇರೆ ಕೆಲವು ಸ್ಪರ್ಧಿಗಳ ಹೆಸರನ್ನು ಹೇಳಿ ಅವರು ಮನೆಯಿಂದ ಹೊರಗೆ ಬರಬೇಕಿತ್ತು ಎಂದು ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದರು. ಇವೆಲ್ಲವುಗಳ ಬೆನ್ನಲ್ಲೇ ಬಿಗ್ ಬಾಸ್ ದೀಪಿಕಾ ಅವರಿಗೆ ವೈಲ್ಡ್ ಕಾರ್ಡ್ ಮೂಲಕ ಮತ್ತೊಂದು ಅವಕಾಶ ನೀಡಿದ್ದಾರೆ. ದೀಪಿಕಾ ಈ ಅವಕಾಶವನ್ನು ಹೇಗೆ ಉಪಯೋಗಿಸಿಕೊಳ್ಳಲಿದ್ದಾರೆ ಎಂದು ನೋಡಬೇಕಾಗಿದೆ.