ಸೆಲೆಬ್ರಿಟಿಗಳ ಜೀವನ ಒಂದು ರೀತಿ ಕನಸಿನ ಲೋಕ ಇದ್ದಂತೆ. ಅದರಲ್ಲೂ ಒಂದು ಸಲ ದೊಡ್ಡ ಯಶಸ್ಸು ಸಿಕ್ಕಿ ಬಿಟ್ಟರೆ, ಅಂತಹ ಸಿನಿ ಸೆಲೆಬ್ರಿಟಿಗಳನ್ನು ಅರಸಿ ಹೊಸ ಹೊಸ ಅವಕಾಶಗಳು ಹರಿದು ಬರಲು ಪ್ರಾರಂಭಿಸಿ ಬಿಡುತ್ತದೆ. ಸಾಲು ಸಾಲು ಸಿನಿಮಾಗಳ ಆಫರ್, ಜಾಹೀರಾತುಗಳಲ್ಲಿ ಆಫರ್ ಹೀಗೆ ತುಂಬಾ ಬ್ಯುಸಿಯಾಗುವ ಅವರ ಗಳಿಕೆ ಕೂಡಾ ಖಂಡಿತ ಕಡಿಮೆ ಏನಿಲ್ಲ. ಈಗ ಡಿಜಿಟಲ್ ಯುಗ, ಇಲ್ಲಿ ಈ ಸಿನಿಮಾ ಸೆಲೆಬ್ರಿಟಿಗಳು ಸಿನಿಮಾ ಅಥವಾ ಜಾಹೀರಾತು ಅಲ್ಲ, ಕೇವಲ ತಮ್ಮ ಒಂದು ಫೋಟೋ ಹಾಕಿ ಕೋಟಿ ಕೋಟಿ ಗಳಿಸ್ತಾರೆ ಅಂದ್ರೆ ಖಂಡಿತ ಆಶ್ಚರ್ಯ ಉಂಟಾಗುತ್ತೆ.
ಸೋಶಿಯಲ್ ಮೀಡಿಯಾ ವಿಚಾರಕ್ಕೆ ಬಂದರೆ ಬಾಲಿವುಡ್ ನಟ, ನಟಿಯರಿಗೆ ಇಲ್ಲಿ ಹೆಚ್ಚಿನ ಫಾಲೋಯಿಂಗ್ ಇದೆ. ಬಾಲಿವುಡ್ ನಟ ನಟಿಯರ ಪ್ರತಿ ಚಿಕ್ಕ ವಿಚಾರವೂ ಕೂಡಾ ದೊಡ್ಡ ಸುದ್ದಿಯಾಗುತ್ತದೆ. ಅಲ್ಲದೇ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಫಾಲೋಯಿಂಗ್ ಹೊಂದುವ ವಿಚಾರದಲ್ಲಿ ಸಹಾ ಬಾಲಿವುಡ್ ನಟ ನಟಿಯರ ನಡುವೆ ಒಂದು ದೊಡ್ಡ ಸ್ಪರ್ಧೆಯೇ ಇದೆ. ಇಂತಹುದೊಂದು ಸ್ಪರ್ಧೆಯಲ್ಲಿ ಇದೀಗ ಬಾಲಿವುಡ್ ಬೆಡಗಿ ಟಾಪ್ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ.
ಹೌದು, ಬಾಲಿವುಡ್ ನಿಂದ ಹಾಲಿವುಡ್ ವರೆಗೂ ತನ್ನ ಜನಪ್ರಿಯತೆ ಹಾಗೂ ವರ್ಚಸ್ಸನ್ನು ಪಡೆದಿರುವ ನಟಿ, ಮಾಜಿ ಮಿಸ್ ವರ್ಲ್ಡ್ ಪ್ರಿಯಾಂಕ ಚೋಪ್ರಾ ಈಗ ಅಂತಹುದೊಂದು ಸಾಧನೆ ಮಾಡಿದ್ದಾರೆ. ಭಾರತದ ಸಿನಿಮಾ ಸೆಲೆಬ್ರಿಟಿಗಳಲ್ಲಿ ಇನ್ಸ್ಟಾಗ್ರಾಂ ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಸಿನಿ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ ಪ್ರಿಯಾಂಕ. ಪ್ರಸ್ತುತ ಅವರನ್ನು ಇನ್ಸ್ಟಾಗ್ರಾಂ ನಲ್ಲಿ 72.4 ಮಿಲಿಯನ್ ಜನರು ಫಾಲೋ ಮಾಡುತ್ತಿದ್ದಾರೆ. ಇನ್ನುಳಿದ ಹಾಗೆ ಎರಡನೆ ಸ್ಥಾನದಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಇದ್ದರೆ, ಮೂರನೇ ಸ್ಥಾನದಲ್ಲಿ ದೀಪಿಕಾ ಪಡುಕೋಣೆ ಇದ್ದಾರೆ.
ಇನ್ನು ಪ್ರಿಯಾಂಕ ಇನ್ಸ್ಟಾಗ್ರಾಂ ನಲ್ಲಿ ಹಾಕುವ ಒಂದು ಫೋಟೋಗೆ ಸಿಗುವ ಹಣ ಕೂಡಾ ಕಡಿಮೆಯೇನಿಲ್ಲ. ಒಂದು ಫೋಟೋಗೆ ಪ್ರಿಯಾಂಕ ಪಡೆಯುವ ಹಣ ಸುಮಾರು 3 ಕೋಟಿ ರೂ. ಎನ್ನಲಾಗಿದೆ. ಅಂದರೆ ವರ್ಷಕ್ಕೆ 12 ಫೋಟೋ ಹಾಕಿದರೂ ಪ್ರಿಯಾಂಕ 36 ಕೋಟಿ ರೂಪಾಯಿಗಳನ್ನು ಪಡೆಯಬಹುದು. ಹಾಗೆಂದು ಮನಸ್ಸಿಗೆ ಬಂದ ಹಾಗೆ ಫೋಟೋಗಳನ್ನು ಹಾಕುವ ಹಾಗಿಲ್ಲ ಎನ್ನಲಾಗಿದ್ದು, ಅದಕ್ಕೂ ಕೆಲವು ನಿಯಮಗಳನ್ನು ಪಾಲಿಸಲಾಗುತ್ತದೆ ಎನ್ನಲಾಗಿದೆ. ಒಟ್ಟಾರೆ ಬಾಲಿವುಡ್ ನಟಿಯಾಗಿ ಅತಿ ಹೆಚ್ಚು ಹಿಂಬಾಲಕರನ್ನು ಪಡೆದ ಸೋಶಿಯಲ್ ಮೀಡಿಯಾ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ ಪ್ರಿಯಾಂಕ ಚೋಪ್ರಾ.