ದೀಪಾವಳಿ ಜಾಹೀರಾತಿನಲ್ಲಿ ಉರ್ದು ಏಕೆ?? ನೆಟ್ಟಿಗರ ಆಕ್ರೋಶ: ಈ ಬಗ್ಗೆ ಕಂಪನಿ ಹೇಳಿದ್ದಿಷ್ಟು

Entertainment Featured-Articles News
50 Views

ದೆಹಲಿಯ ಜನಪ್ರಿಯ ವಸ್ತ್ರ ಬ್ರಾಂಡ್ ಆಗಿರುವಂತಹ ಫ್ಯಾಬ್ ಇಂಡಿಯಾ ನಿನ್ನೆಯಿಂದ ಕೇವಲ ಒಂದೇ ಒಂದು ಜಾಹೀರಾತಿನ ಕಾರಣದಿಂದಾಗಿಯೇ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ತನ್ನ ಇದೊಂದು ಜಾಹೀರಾತಿನಿಂದ ಫ್ಯಾಬ್ ಇಂಡಿಯಾ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಟ್ರೋಲ್ ಗೆ ಒಳಗಾಗಿದೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಫ್ಯಾಬ್ ಇಂಡಿಯಾ ತನ್ನ ಜಾಹೀರಾತನ್ನು ಹಿಂಪಡೆದಿದೆ. ಹಿಂದೂಗಳ ಬಹು ದೊಡ್ಡ ಹಬ್ಬ ಎನಿಸಿಕೊಂಡಿರುವ ದೀಪಾವಳಿಯ ಜೊತೆಗೆ ಉರ್ದು ಭಾಷೆಯನ್ನು ಲಿಂಕ್ ಮಾಡುವ ಮೂಲಕ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು ಫ್ಯಾಬ್ ಇಂಡಿಯಾ. ಅದು ವಿವಾದದ ದಿಕ್ಕನ್ನು ಹಿಡಿದ ಕೂಡಲೇ ಕಂಪನಿ ತನ್ನ ಜಾಹಿರಾತನ್ನು ಹಿಂಪಡೆದುಕೊಂಡಿದೆ.

ಫ್ಯಾಬ್ ಇಂಡಿಯಾ ತನ್ನ ದೀಪಾವಳಿ ಡ್ರೆಸ್ ಕಲೆಕ್ಷನ್ ಜಾಹೀರಾತಿನಲ್ಲಿ ಜಷ್ನ್ ಎ ರಿವಾಜ್ ಎನ್ನುವ ಸಾಲನ್ನು ಬರೆದು, ದೀಪಾವಳಿ ಕಲೆಕ್ಷನ್ ಗೆ ಆ ಹೆಸರನ್ನು ಇಟ್ಟಿತ್ತು.ಬ ಆದರೆ ಜಾಹೀರಾತು ಕೆಲವೇ ಕ್ಷಣಗಳಲ್ಲಿ ದೊಡ್ಡಮಟ್ಟದ ಅಸಮಾಧಾನಕ್ಕೆ ಕಾರಣವಾಯಿತು. ಜಾಹೀರಾತಿನ ಕುರಿತಾಗಿ ಸಿಕ್ಕಾಪಟ್ಟೆ ಆಕ್ರೋಶ ಹೊರ ಬಂದ ಹಿನ್ನೆಲೆಯಲ್ಲಿ ಕಂಪನಿ ತನ್ನ ಟ್ವೀಟ್ ಡಿಲೀಟ್ ಮಾಡಿದೆ. ಕಂಪನಿಯು ತನ್ನ ಜಾಹೀರಾತನ್ನು ಕೂಡಾ ಹಿಂಪಡೆದಿದೆ. ಇದೇ ವೇಳೆ ಜಾಹೀರಾತಿಗೆ ಸಂಬಂಧಪಟ್ಟಂತೆ ಕಂಪನಿಯು ಒಂದು ಸ್ಪಷ್ಟೀಕರಣವನ್ನು ಸಹ ಬಿಡುಗಡೆ ಮಾಡಿದೆ.

ಜಷ್ನೆ ಎ ರಿವಾಜ್ ಎನ್ನುವುದು ಕಂಪನಿಯ ದೀಪಾವಳಿ ಡ್ರೆಸ್ ಕಲೆಕ್ಷನ್ ಇಟ್ಟಂತಹ ಹೆಸರು ಆಗಿರಲಿಲ್ಲ. ಅಲ್ಲದೇ ದೀಪಾವಳಿಯ ಬಟ್ಟೆ ಕಲೆಕ್ಷನ್ ಆಗಿರುವ ಝಿಲ್ ಮಿಲ್ ಸೇ ದಿವಾಲಿ ಇನ್ನು ಬಿಡುಗಡೆ ಕೂಡಾ ಆಗಿಲ್ಲ ಎನ್ನುವ ಮಾತನ್ನು ಹೇಳಿದೆ. ಕಂಪನಿಯು ಪ್ರತಿ 15 ದಿನಕ್ಕೊಮ್ಮೆ ಹೊಸ ಕಲೆಕ್ಷನ್ ಬಿಡುಗಡೆ ಮಾಡುವುದಾಗಿ ಹೇಳಿದ್ದು, ನಿನ್ನೆ ಬಿಡುಗಡೆ ಮಾಡಿದ್ದು ದೀಪಾವಳಿ ಕಲೆಕ್ಷನ್ ಆಗಿರಲಿಲ್ಲ ಎನ್ನುವಂತಹ ಒಂದು ಸ್ಪಷ್ಟನೆಯನ್ನು ಕಂಪನಿಯು ನೀಡಿದೆ.

ದೆಹಲಿಯ ಸುಪ್ರಸಿದ್ಧ ಬ್ರಾಂಡ್ ಆಗಿರುವ ಫ್ಯಾಬ್ ಇಂಡಿಯಾ ತನ್ನ ಜಾಹೀರಾತು ಬಿಡುಗಡೆ ಮಾಡಿದ ಕೂಡಲೇ ನೆಟ್ಟಿಗರು ಇದರ ವಿರುದ್ಧ ಅ ಸಮಾಧಾನ, ಸಿಟ್ಟು ಮತ್ತು ಆ ಕ್ರೋ ಶವನ್ನು ಹೊರಹಾಕಿದ್ದರು. ದೀಪಾವಳಿ ಗಾಗಿ ಬಿಡುಗಡೆ ಮಾಡಿದ ಬಟ್ಟೆಯ ಕಲೆಕ್ಷನ್ ಜಷ್ನ ಎ ರಿವಾಜ್ ಎನ್ನುವ ಹೆಸರನ್ನು ಏಕೆ ಇಡಬೇಕಾಗಿತ್ತು ಎಂದು ಪ್ರಶ್ನೆ ಮಾಡಿದ್ದರು. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿ ತಮ್ಮ ಅಸಮಾಧಾನ ಹೊರಹಾಕಿದ್ದರು. ಇನ್ನು ಟ್ವಿಟರ್ ನಲ್ಲಿ boycott fabindia ಹ್ಯಾಷ್ ಟ್ಯಾಗ್ ಒಂದು ಟ್ರೆಂಡ್ ಆಗಿತ್ತು.

Leave a Reply

Your email address will not be published. Required fields are marked *