ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಸುಳ್ಳು ಸಿನಿಮಾ: ಅದಕ್ಕೆ ತೆರಿಗೆ ವಿನಾಯ್ತಿ ಕೊಡಲ್ಲ!! ಅರವಿಂದ್ ಕೇಜ್ರಿವಾಲ್

Entertainment Featured-Articles News Viral Video

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಿಡುಗಡೆ ಆದಾಗಿನಿಂದಲೂ ಸಹಾ ಒಂದಲ್ಲಾ ಒಂದು ವಿಷಯದಿಂದಾಗಿ ಪ್ರತಿ ದಿನ ಮಾದ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇದೆ. ಬಿಡುಗಡೆಯಾದ ದಿನ 600 ಸ್ಕ್ರೀನ್ ಗಳಲ್ಲಿ ತೆರೆ ಕಂಡ ಈ ಸಿನಿಮಾ, ನಂತರ ಅಪಾರವಾದ ಜನ ಮನ್ನಣೆಯನ್ನು ಪಡೆಯುವ ಮೂಲಕ 4000 ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇವೆಲ್ಲವುಗಳ ನಡುವೆಯೇ ದೇಶದ ಕೆಲವು ರಾಜ್ಯಗಳಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾಕ್ಕೆ ಅಲ್ಲಿನ ಸರ್ಕಾರಗಳು ತೆರಿಗೆ ವಿನಾಯಿತಿಯನ್ನು ಘೋಷಣೆ ಮಾಡಿವೆ. ಒಳ್ಳೆ ಪ್ರದರ್ಶನವನ್ನು ಕಾಣುತ್ತಿರುವ ಸಿನಿಮಾ ಬಗ್ಗೆ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ವಿಚಾರವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತೀಕ್ಷ್ಣ ಪ್ರತಿಯೊಂದು ನೀಡುವುದರ ಜೊತೆಗೆ ವ್ಯಂಗ್ಯ ಮಾಡಿದ್ದಾರೆ. ಗುರುವಾರ ದೆಹಲಿಯ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಅವರು ಸಿನಿಮಾ ಕುರಿತಾಗಿ ಬಿಜೆಪಿ ಮಾಡಿದ್ದ ಮನವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರದಲ್ಲಿ ತೀವ್ರ ವಾಗ್ದಾಳಿಯನ್ನು ನಡೆಸಿರುವ ಅರವಿಂದ್ ಕೇಜ್ರಿವಾಲ್ ಅವರು ಸಾಕಷ್ಟು ತೀವ್ರವಾಗಿ ವಾಗ್ದಾಳಿಯನ್ನು ನಡೆಸಿದ್ದು, ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರು ಮಾತನಾಡುತ್ತಾ, ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿ ಎಂದು ನಮ್ಮನ್ನೇಕೆ ಕೇಳುತ್ತಿದ್ದೀರಿ. ನಿಮಗೆ ವಿನಾಯಿತಿ ನೀಡುವ ಬಗ್ಗೆ ನಿಮಗೆ ಅಷ್ಟೊಂದು ಆಸಕ್ತಿಯಿದ್ದರೆ, ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಸಿನಿಮಾವನ್ನು ಯೂಟ್ಯೂಬ್ ನಲ್ಲಿ ಹಾಕೋಕೆ ಹೇಳಿ. ಆಗ ಒಂದೇ ದಿನದಲ್ಲಿ ಎಲ್ಲರೂ ಈ ಸಿನಿಮಾವನ್ನು ನೋಡುತ್ತಾರೆ, ಆಗ ವಿನಾಯಿತಿ ನೀಡುವ ಅಗತ್ಯ ಆದರೂ ಎಲ್ಲಿ ಇರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಕೇಜ್ರಿವಾಲ್ ಅವರ ಈ ಮಾತಿಗೆ ಅವರ ಪಾರ್ಟಿ ಸದಸ್ಯರು ನಗುತ್ತಾ ಮೇಜು ಕುಟ್ಟಿ ತಮಾಷೆ ಮಾಡಿದ್ದಾರೆ‌.

ಅಷ್ಟೇ ಅಲ್ಲದೇ ಅವರು ಈ ವೇಳೆ ಬಿಜೆಪಿ ಶಾಸಕರನ್ನು ಉದ್ದೇಶಿಸಿ, ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಒಂದು ಸುಳ್ಳಿನ ಕಥೆ, ಆ ಸಿನಿಮಾದ ಪೋಸ್ಟರ್ ಗಳನ್ನು ಅಂಟಿಸುತ್ತಾ, ಇರುವುದು ನಿಮಗೆ ಶೋಭೆ ತರುವುದಿಲ್ಲ ಎನ್ನುವ ಉಚಿತ ಸಲಹೆಯನ್ನು ಸಹಾ ನೀಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ಕಾಶ್ಮೀರ್ ಫೈಲ್ಸ್ ಬಗ್ಗೆ ಈ ರೀತಿ ಟೀಕೆ ಮಾಡಿ, ನೀಡಿರುವ ಹೇಳಿಕೆಗಳಿಗೆ ಸಾಮಾಜಿಕ ಜಾಲಾತಾಣಗಳಲ್ಲಿ ಅನೇಕರು ಸಿಟ್ಟು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.