ದಿ ಕಶ್ಮೀರ್ ಫೈಲ್ಸ್ ಪ್ರಮೋಷನ್ ಗೆ NO ಅಂದ ಕಪಿಲ್ ಶರ್ಮಾ: ವ್ಯಂಗ್ಯ ಮಾಡಿ ಕಾರಣ ನೀಡಿದ ಹಾಸ್ಯ ಕಲಾವಿದ

Entertainment Featured-Articles News

ಹಿಂದಿ ಕಿರುತೆರೆಯ ಬಹು ಚರ್ಚಿತ ಕಾಮಿಡಿ ಶೋ ಎಂದರೆ ಅದು ದಿ ಕಪಿಲ್ ಶರ್ಮಾ ಶೋ. ಬಾಲಿವುಡ್ ನ ಬಹುತೇಕ ಎಲ್ಲಾ ಹೊಸ ಸಿನಿಮಾಗಳ ಪ್ರಮೋಷನ್ ಗಾಗಿ ಸ್ಟಾರ್ ಗಳು ಈ ಶೋ ಗೆ ಬರುವುದು ವಾಡಿಕೆ. ಆದರೆ ಈ ಬಾರಿ ಕಪಿಲ್ ತಮ್ಮ ಶೋ ನಲ್ಲಿ ಒಂದು ಸಿನಿಮಾ ಪ್ರಮೋಷನ್ ಗೆ ಅವಕಾಶ ನೀಡಿಲ್ಲ. ಅವರು ಈ ಸಿನಿಮಾದ ಪ್ರಮೋಷನ್ ಸಾಧ್ಯವಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಹೌದು, ಕಾಶ್ಮೀರದಲ್ಲಿ ಬ್ರಾಹ್ಮಣದ ಮೇಲೆ ನಡೆದ ದೌ ರ್ಜ ನ್ಯ ದ ಕುರಿತಾದ ಕಥೆಯನ್ನು ಹೊಂದಿರುವ ದಿ ಕಶ್ಮೀರ್ ಫೈಲ್ಸ್ ಸಿನಿಮಾ ಪ್ರಮೋಷನ್ ಗೆ ಕಪಿಲ್ ನೋ ಎಂದಿದ್ದಾರೆ.

ಅನುಪಮ್ ಖೇರ್, ಪಲ್ಲವಿ ಜೋಶಿ ಯಂತಹ ದಿಗ್ಗಜ ನಟರ ಈ ಸಿನಿಮಾಕ್ಕೆ ಕಪಿಲ್ ಶೋ ನಲ್ಲಿ ಅವಕಾಶ ನೀಡದ ವಿಷಯ ದೊಡ್ಡ ಸುದ್ದಿಯಾಗಿದೆ. ನೆಟ್ಟಿಗರು ಕಪಿಲ್ ಶರ್ಮಾ ಶೋ ವನ್ನು ಟೀಕಿಸಿದ್ದಾರೆ. ಕಪಿಲ್ ಈ ಸಿನಿಮಾ ಪ್ರಮೋಷನ್ ಗೆ ಏಕೆ ಒಪ್ಪಲಿಲ್ಲ ಎನ್ನುವ ಕಾರಣಗಳು ಚರ್ಚೆಯಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಕಪಿಲ್ ಶೋ ಬಾಯ್ ಕಾಟ್ ಮಾಡಬೇಕು ಎನ್ನುವ ಕೂಗು ಜೋರಾಗಿದೆ. ಬಾಲಿವುಡ್ ನ ಮೂವಿ ಮಾಫಿಯಾ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿ ಎನ್ನುತ್ತಿದ್ದಾರೆ‌ ಜನ.

ಒಟ್ಟಾರೆ ಕಪಿಲ್ ಶೋ ನಲ್ಲಿ ಒಂದು ನೈಜ ಕಥಾನಕವನ್ನು ಒಳಗೊಂಡ ಸಿನಿಮಾಕ್ಕೆ ಪ್ರಮೋಷನ್ ಗೆ ಅವಕಾಶ ನೀಡಿಲ್ಲ ಎನ್ನುವುದು, ಅದರ ಹಿಂದಿನ ಕಾರಣಗಳು ಸಹಾ ಸ್ಪಷ್ಟವಾಗಿ ಎಲ್ಲರಿಗೂ ಕಾಣುತ್ತಿದೆ. ಇವೆಲ್ಲವುಗಳ ಬೆನ್ನಲ್ಲೇ, ಹಾಸ್ಯ ಕಲಾಗಿದ ಸುನೀಲ್ ಪಾಲ್ ಕಪಿಲ್ ಶರ್ಮಾ ಶೋ ನಲ್ಲಿ ದಿ ಕಶ್ಮೀರ್ ಫೈಲ್ಸ್ ಸಿನಿಮಾ ಪ್ರಮೋಷನ್ ಗೆ ಏಕೆ ಅವಕಾಶ ಸಿಗಲಿಲ್ಲ ಎನ್ನುವು ವಿಚಾರದಲ್ಲಿ ಒಂದು ವ್ಯಂಗ್ಯ ಭರಿತವಾದ ಹೇಳಿಕೆಯನ್ನು ನೀಡಿ, ಕಪಿಲ್ ಶರ್ಮಾ ಕಾಲೆಳೆದಿದ್ದಾರೆ. ಸುನೀಲ್ ಪಾಲ್ ಅವರ ಮಾತಿಗೆ ಜನ ನಗುತ್ತಿದ್ದಾರೆ.

ಸುನೀಲ್ ಪಾಲ್ ಅವರು, ದಿ ಕಪಿಲ್ ಶರ್ಮಾ ಶೋ ನಲ್ಲಿ ದಿ ಕಶ್ಮೀರ್ ಫೈಲ್ಸ್ ಸಿನಿಮಾ ಪ್ರಮೋಷನ್ ಆಗ್ತಿಲ್ಲ, ಅದ್ಯಾಕೇ ಹೀಗೆ ಅನ್ನೋ ವಿಚಾರದ ಬಗ್ಗೆ ಕೊನೆಗೂ ಉತ್ತರ ಸಿಕ್ಕಿದೆ. ಇದರ ಹಿಂದೆ ಒಂದು ಸಣ್ಣ ಕಾರಣ ಇದೆ. ಈ ಸಿನಿಮಾದ ನಿರ್ದೇಶಕರ ಹೆಸರು ವಿವೇಕ್, ನಿರ್ಮಾಪಕರ ಹೆಸರು ಅಭಿಷೇಕ್. ಕಪಿಲ್ ಶರ್ಮಾ ಶೋ ನ ನಿರ್ಮಾಪಕ ಸಲ್ಮಾನ್ ಖಾನ್ ಇದೇ ಕಾರಣದಿಂದ ದಿ ಕಶ್ಮೀರ್ ಫೈಲ್ಸ್ ಸಿನಿಮಾ ಪ್ರಮೋಷನ್ ಗೆ ಈ ಶೋ ನಲ್ಲಿ ಅವಕಾಶ ಕೊಡ್ತಾ ಇಲ್ಲ ಎಂದಿದ್ದಾರೆ.

ಪರೋಕ್ಷವಾಗಿ ಸುನೀಲ್ ಪಾಲ್ ಸಲ್ಮಾನ್ ಖಾನ್ ಅವರ ಮಾಜಿ ಗೆಳತಿ ಐಶ್ವರ್ಯ ಅವರ ಪತಿ, ಮಾಜಿ ಗೆಳೆಯ ವಿವೇಕ್ ಒಬೆರಾಯ್ ಹೆಸರನ್ನು ಪ್ರಸ್ತಾಪಿಸಿ, ಸಲ್ಮಾನ್ ಖಾನ್ ಮೇಲೆ ಹಾಸ್ಯ ಚಟಾಕಿಯನ್ನು ಹಾರಿಸಿದ್ದಾರೆ. ಸುನೀಲ್ ಪಾಲ್ ಅವರ ಈ ಹಾಸ್ಯ ಕೆಲವರಿಗೆ ಇಷ್ಟವಾಗಿದೆ. ಅದೇ ವೇಳೆ ಸಲ್ಮಾನ್ ಅಭಿಮಾನಿಗಳು ಮಾತ್ರ ಸಿಟ್ಟಾಗಿ ಸುನೀಲ್ ಪಾಲ್ ಅವರನ್ನು ಟೀಕಿಸುತ್ತಿದ್ದಾರೆ. ಸಲ್ಮಾನ್ ಖಾನ್ ಬಗ್ಗೆ ಹಾಸ್ಯ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಕಳೆದ ಕೆಲವು ದಿನಗಳಿಂದಲೂ ದಿ ಕಪಿಲ್ ಶರ್ಮಾ ಶೋ ಮತ್ತೆ ಕಾಂಟ್ರವರ್ಸಿಯಾಗಿದೆ. ದಿ ಕಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ತಮ್ಮ ಸಿನಿಮಾದಲ್ಲಿ ದೊಡ್ಡ ದೊಡ್ಡ ಕಮರ್ಷಿಯಲ್ ಸ್ಟಾರ್ ಗಳು ಇಲ್ಲ ಎನ್ನುವ ಕಾರಣಕ್ಕೆ ಕಪಿಲ್ ಶರ್ಮ ಶೋ ನಲ್ಲಿ ಪ್ರಮೋಷನ್ ಮಾಡಲು ನಿರಾಕರಣೆ ಮಾಡಲಾಗಿದೆ ಎನ್ನುವ ಆ ರೋ ಪವನ್ನು ಮಾಡಿದ್ದಾರೆ. ಇದಾದ ನಂತರ ಜನ ಕೂಡಾ ಕಪಿಲ್ ಶರ್ಮಾ ಬಗ್ಗೆ ಅಸಮಾಧಾನವನ್ನು ಹೊರ ಹಾಕಿದ್ದಾರೆ.

Leave a Reply

Your email address will not be published.