ದಿವ್ಯ ಮನೆಯಲ್ಲೇ ಮಂಜುಗೆ ಗಣೇಶ ಹಬ್ಬದ ಸಂಭ್ರಮ: ಅವರಿಗೆ ಮದುವೆ ಆಗಿ ಅಂದ ವಿಶೇಷ ವ್ಯಕ್ತಿಗಳಾರು??
ನಟಿ ದಿವ್ಯ ಸುರೇಶ್ ಮತ್ತು ಮಂಜು ಪಾವಗಡ ನಡುವೆ ಇರುವ ಸ್ನೇಹ ಹಾಗೂ ಆತ್ಮೀಯತೆ ಹೇಗಿದೆ ಎನ್ನುವುದು ಬಿಗ್ ಬಾಸ್ ಮೂಲಕ ಎಲ್ಲರಿಗೂ ತಿಳಿದಿದೆ. ಈ ಇಬ್ಬರ ನಡುವಿನ ಸ್ನೇಹ ಹಾಗೂ ಆತ್ಮೀಯತೆಯ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಮಾದ್ಯಮಗಳಲ್ಲಿ ಸುದ್ದಿಯಾಗಿದೆ. ಆದರೆ ಇದೆಲ್ಲಾ ಬಿಗ್ ಬಾಸ್ ವರೆಗೂ ಮಾತ್ರವೇ, ಆಮೇಲೆ ಇದೆಲ್ಲಾ ಇರಲ್ಲ ಎಂದು ಅನೇಕರು ಕಾಮೆಂಟ್ ಗಳನ್ನು ಪಾಸ್ ಮಾಡಿದರು. ಆದರೆ ಅಂದುಕೊಂಡಿದ್ದೆಲ್ಲಾ ನಿಜವಾಗದು ಎನ್ನುವಂತೆ ಇಬ್ಬರ ಸ್ನೇಹ ಬಿಗ್ ಬಾಸ್ ನಂತರವೂ ಸಹಾ ಮುಂದುವರೆದಿದೆ. ಮತ್ತೆ ಮತ್ತೆ ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮಂಜು ಹಾಗೂ ದಿವ್ಯ ಸುರೇಶ್ ಅವರು ಪರಸ್ಪರರ ಕುಟುಂಬಗಳಿಗೂ ಹತ್ತಿರವಾಗಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ಇಬ್ಬರೂ ಜೊತೆಯಾಗಿ ಸಂಭ್ರಮಿಸುತ್ತಾರೆ. ಹೌದು ಅದಕ್ಕೆ ಲೇಟೆಸ್ಟ್ ಉದಾಹರಣೆ ಹೇಳೋದಾದ್ರೆ ಗಣೇಶ ಹಬ್ಬದ ಸೆಲೆಬ್ರೇಷನ್. ಹೌದು ಈ ಬಾರಿ ಮಂಜು ಪಾವಗಡ ದಿವ್ಯ ಅವರ ಮನೆಯಲ್ಲೇ ಗಣೇಶ ಹಬ್ಬವನ್ನು ಸಂಭ್ರಮಿಸಿದ್ದಾರೆ.
ಗಣೇಶನನ್ನು ಕೂರಿಸಿ, ಗಣೇಶನಿಗೆ ಬಗೆ ಬಗೆಯ ಸಿಹಿ ತಿಂಡಿಗಳನ್ನು ಮಾಡಿಟ್ಟು ಅಲಂಕರಿಸಿದ್ದು, ಪೂಜೆ ಆರಾಧನೆಯ ನಂತರ ಇಬ್ಬರೂ ಜೊತೆಯಾಗಿ ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಅಲ್ಲದೇ ಮಂಜು ಅವರು ಈ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದಿವ್ಯ ಅವರ ತಾಯಿ ಹಾಗೂ ಸಹೋದರ ಸಹಾ ಫೋಟೋಗೆ ಅವರ ಜೊತೆಯಾಗಿದ್ದಾರೆ.
ಗಣೇಶನ ಹಬ್ಬಕ್ಕೆ ದಿವ್ಯ ಅವರ ಮನೆಗೆ ಬಿಗ್ ಬಾಸ್ ಸ್ಪರ್ಧಿಗಳಾದ ಶುಭಾ ಪೂಂಜಾ ಹಾಗೂ ರಘು ಗೌಡ ಅವರು ಸಹಾ ಕುಟುಂಬ ಸಮೇತ ಹಾಜರಾಗಿ ಗಣೇಶನ ಆರಾಧನೆಯಲ್ಲಿ ಭಾಗಿಯಾಗಿದ್ದು, ಹಬ್ಬವನ್ನು ಎಲ್ಲರೊಟ್ಟಿಗೆ ಸಂಭ್ರಮಿಸಿದ್ದಾರೆ. ಇನ್ನು ಮಂಜು ಮತ್ತು ದಿವ್ಯ ಅವರು ಒಟ್ಟಾಗಿರುವ ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ಸಖತ್ ಖುಷಿ ಪಟ್ಟಿದ್ದಾರೆ.
ಅಭಿಮಾನಿಗಳು ಅವರ ಫೋಟೋಗಳನ್ನು ನೋಡಿ ಕಾಮೆಂಟ್ ಮಾಡಿ ಮೆಚ್ಚುಗೆಯನ್ನು ಸೂಚಿಸುವುದು ಮಾತ್ರವೇ ಅಲ್ಲದೇ ಆದಷ್ಟು ಬೇಗ ಮದುವೆಯಾಗಿ ಎಂದು ಕೂಡಾ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಇತ್ತೀಚಿಗೆ ದಿವ್ಯ ಸುರೇಶ್ ಮತ್ತು ಮಂಜು ಪಾವಗಡ ಜೊತೆಯಾಗಿ ಕಂಡಾಗಲೆಲ್ಲಾ ಈ ಜೋಡಿಯನ್ನು ನೋಡಿ ಮೆಚ್ಚುವ ಅಭಿಮಾನಿಗಳಂತೂ ಪದೇ ಪದೇ ಇದೇ ಮಾತನ್ನು ಹೇಳುತ್ತಿದ್ದಾರೆ.
ಇತ್ತೀಚಿಗೆ ಕಲರ್ಸ್ ವಾಹಿನಿಯ ಗಣೇಶ ಹಬ್ಬದ ಸ್ಪೆಷಲ್ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಭಾಗವಹಿಸಿದ್ದ ಮಂಜು ಮತ್ತು ದಿವ್ಯ ಸುರೇಶ್ ಫೋಟೋಗಳು ಸಹಾ ಸೋಶಿಯಲ್ ಮೀಡಿಯಾಗಳಲ್ಲಿ ಬಹಳ ವೈರಲ್ ಆಗಿತ್ತು. ಅಲ್ಲದೇ ದಿವ್ಯ ಅವರು ಸಹಾ ಒಂದು ಸುಂದರ ಫೋಟೋದಲ್ಲಿ ಮಂಜು, ತಾಯಿ ಹಾಗೂ ಸಹೋದರನನ್ನು ತಮ್ಮ ಬದುಕಿನ ನಿಜವಾದ ಶಿಕ್ಷಕರು, ಸ್ಪೂರ್ತಿ ಎಂದು ಬರೆದುಕೊಂಡಿದ್ದರು.