ಕನ್ನಡ ಕಿರುತೆರೆಯ ವಿಚಾರ ಬಂದಾಗ ನಾವು ಸೀರಿಯಲ್ ಗಳ ಬಗ್ಗೆ ಮಾತನಾಡದೇ ಇರಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಕ್ಕೆ ಸೀರಿಯಲ್ ಗಳು ಜನಪ್ರಿಯತೆ ಪಡೆದುಕೊಂಡಿವೆ. ಕಿರುತೆರೆಯ ಸೀರಿಯಲ್ ಗಳನ್ನು ಇಷ್ಟಪಟ್ಟು ನೋಡುವ ಪ್ರೇಕ್ಷಕರಿಗೆ ಸೀರಿಯಲ್ ಗಳು ಅವರ ಜೀವನದ ಒಂದು ಭಾಗವೇ ಆಗಿ ಹೋಗಿದೆ. ಹೀಗೆ ಪ್ರೇಕ್ಷಕರ ಮನಸ್ಸನ್ನು ಗೆದ್ದು ಮುನ್ನಗ್ಗುತ್ತಿರುವ ಸೀರಿಯಲ್ ಗಳಲ್ಲಿ ಸತ್ಯ ಸೀರಿಯಲ್ ಕೂಡಾ ಸೇರಿದೆ. ಸತ್ಯ ಸೀರಿಯಲ್ ಎಂದರೆ ಬಹಳ ಇಷ್ಟಪಟ್ಟು ನೋಡುವ ಪ್ರೇಕ್ಷಕರ ಒಂದು ದೊಡ್ಡ ಬಳಗವೇ ಇದೆ.
ಇತ್ತೀಚಿಗೆ ಸತ್ಯ ಸೀರಿಯಲ್ ನಲ್ಲಿನ ಹೊಸ ತಿರುವುಗಳು ಹಾಗೂ ರೋಚಕ ಕಥಾನಕವು ಪ್ರೇಕ್ಷಕರನ್ನು ಮುಂದಿನ ಸಂಚಿಕೆಗಾಗಿ ಕಾಯುವಂತೆ ಮಾಡುತ್ತಿವೆ. ಬಿಂದಾಸ್ ಹುಡುಗಿಯಾಗಿದ್ದ ಸತ್ಯ ತನ್ನ ಅಕ್ಕ ದಿವ್ಯ ಮಾಡಿದ ಕೆಲಸದಿಂದ ಕೋಟೆ ಮನೆ ಸೊಸೆಯಾಗಿ, ಗಂಡ ಕಾರ್ತಿಕ್ ಮತ್ತು ಅತ್ತೆ ಸೀತಮ್ಮನ ಬೈಗುಳಗಳನ್ನು ಕೇಳುತ್ತಾ ಕಣ್ಣೀರು ಹಾಕುವ ಪರಿಸ್ಥಿತಿ ಎದುರಾಗಿದೆ. ಇನ್ನೊಂದು ಕಡೆ ಬಾಲ ಕೋಟ್ಯಾಧಿಪತಿ ಎಂದು ನಂಬಿ ಮದುವೆಯಿಂದ ಓಡಿ ಹೋದ ದಿವ್ಯ ಬಾಲನ ಹಿಂದೆ ಬೀದಿ ಬೀದಿ ಸುತ್ತುವಂತೆ ಆಗಿದೆ.
ಹೌದು, ಬಾಲ ಆಗರ್ಭ ಶ್ರೀಮಂತನೆಂದು ನಂಬಿ ಕಾರ್ತಿಕ್ ಜೊತೆ ಆಗ ಬೇಕಿದ್ದ ಮದುವೆಯಿಂದ ಓಡಿ ಹೋದ ದಿವ್ಯಳನ್ನು ರೆಸಾರ್ಟ್ ನ ದುಡ್ಡು ಕಟ್ಟಲಾಗದೇ ಬಾಲ ಆಟೋದಲ್ಲಿ ಕರೆದುಕೊಂಡು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾನೆ. ದಿವ್ಯಳನ್ನು ಎಲ್ಲಿಗೆ ಕರೆದುಕೊಂಡು ಹೋಗಬೇಕೆಂದು ತಿಳಿಯದ ಬಾಲ ಅವಳನ್ನು ಒಂದು ಹೊಟೇಲ್ ಗೆ ಕರೆದುಕೊಂಡು ಬಂದು ಇರಿಸಿದ್ದಾನೆ. ಘಳಿಗೆಗೊಂದು ಸುಳ್ಳು ಹೇಳುತ್ತಾ ದಿವ್ಯಳನ್ನು ಮ್ಯಾನೇಜ್ ಮಾಡ್ತಾ ಇರೋ ಬಾಲ ಕಾರ್ತಿಕ್ ಅಕ್ಕ ಕೀರ್ತನಾ ಳನ್ನು ಬ್ಲಾಕ್ ಮೇಲ್ ಮಾಡಿ ಹಣ ಪಡೆಯುವ ಸಂಚು ಹೂಡಿ ಸಕ್ಸಸ್ ಆಗಿದ್ದಾಗಿದೆ.
ಆದರೆ ಬಾಲನ ಈ ಮೋಸದಾಟ ಇನ್ನು ಎಷ್ಟು ದಿನ ನಡೆಯುತ್ತದೆ ಎನ್ನುವುದು ಕುತೂಹಲ. ತಾಯಿಗೆ, ಅಜ್ಜಿಗೆ ಮತ್ತು ತಂಗಿಗೆ ಮೋಸ ಮಾಡಿ ಸ್ವಾರ್ಥಕ್ಕಾಗಿ ಓಡಿ ಬಂದ ದಿವ್ಯ ಈಗ ಬಾಲನ ಸತ್ಯ ಗೊತ್ತಾದ್ರೆ ಏನ್ಮಾಡ್ತಾಳೆ ಅನ್ನೋ ಕುತೂಹಲ ಒಂದು ಕಡೆ ಇದ್ರೂ,ಮತ್ತೊಂದು ಕಡೆ ಬಾಲನ ಜೊತೆ ಹೀಗೆ ಒಂದು ಕಡೆಯಿಂದ ಮತ್ತೊಂದು ಕಡೆ ಅಲೆಯುವುದನ್ನು ನೋಡಿ ಪ್ರೇಕ್ಷಕರು ಅವಳಿಗೆ ಸರಿಯಾಗಿಯೇ ಆಗಿದೆ ಎಂದು ಖುಷಿ ಪಡ್ತಾ ಇದ್ದಾರೆ. ಅಲ್ಲದೇ ದಿವ್ಯಳ ದುರಾಸೆಗೆ ಬೆಂಕಿಯಿಟ್ಟ ಬಾಲ ಎಂದ ಕಾಮೆಂಟ್ ಗಳನ್ನು ಸಹಾ ಮಾಡ್ತಾ ಇದ್ದಾರೆ.
ಒಟ್ನಲ್ಲಿ ಸತ್ಯ ಸೀರಿಯಲ್ ಮಾತ್ರ ಭರ್ಜರಿ ರೋಚಕತೆಯೊಂದಿಗೆ ಮುಂದೆ ಸಾಗಿದೆ. ಸತ್ಯ ಅಳೋದನ್ನು ನಿಲ್ಸಿ ಯಾವಾಗ ಮತ್ತೆ ಫಾರ್ಮ್ ಗೆ ಬರ್ತಾಳೆ ಅಂತ ಪ್ರೇಕ್ಷಕರು ಕಾಯ್ತಾ ಇದ್ದಾರೆ. ಏಕೆಂದರೆ ಸತ್ಯ ಲೇಡಿ ರಾಮಾಚಾರಿ ಆಗಿರೋದನ್ನು ನೋಡೋಕೆ ಪ್ರೇಕ್ಷಕರು ಇಷ್ಟ ಪಡ್ತಾರೆ ಹೊರತು ಎಲ್ಲಾ ಸೊಸೆಯರಂತೆ ಸತ್ಯ ಕೂಡಾ ಕಣ್ಣೀರು ಹಾಕ್ತಾ ಕೂತ್ಕೊಂಡ್ರೆ ಅದು ಖಂಡಿತ ನೋಡೋರಿಗೆ ಬೇಸರ ಉಂಟು ಮಾಡೋದ್ರಲ್ಲಿ ಯಾವುದೇ ಅನುಮಾನ ಇಲ್ಲ ಅಂತಿದ್ದಾರೆ ಪ್ರೇಕ್ಷಕರು.