ಆಗ ಶೋಭಿತಾ, ಈಗ ದಿವ್ಯಾಂಶ? ಟಾಲಿವುಡ್ ಹಾಟ್ ಟಾಪಿಕ್ ಆದ ನಾಗಚೈತನ್ಯ ಡೇಟಿಂಗ್ ಸುದ್ದಿ!

0
234

ಸಮಂತಾ(Samantha) ಜೊತೆಗೆ ವಿಚ್ಚೇದನದ ನಂತರ ಟಾಲಿವುಡ್ ನ ಯುವ ಸ್ಟಾರ್ ನಟ ನಾಗಚೈತನ್ಯ(Naga Chaitanya) ಅವರ ಹೆಸರು ನಟಿ ಶೋಭಿತಾ ಧೂಲಿಪಾಲ(Shobhita Dhulipala) ಜೊತೆಗೆ ತಳಕು ಹಾಕಿಕೊಂಡು ಸಾಕಷ್ಟು ಸುದ್ದಿಗಳು ಹರಿದಾಡಿದವು. ಶೋಭಿತಾ ನಾಗಚೈತನ್ಯ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಸಾಕಷ್ಟು ಬಾರಿ ಮುನ್ನೆಲೆಗ ಬಂದಿದ್ದು, ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಟಿ ಶೋಭಿತಾ ಸಹಾ ಇದನ್ನು ಸುಳ್ಳೆಂದು ಸ್ಪಷ್ಟನೆ ನೀಡುತ್ತಲೇ ಬಂದಿದ್ದಾರೆ. ಇತ್ತೀಚಿಗೆ ನಟಿ ಮತ್ತೊಮ್ಮೆ ಖಡಕ್ ಪ್ರತಿಕ್ರಿಯೆ ನೀಡಿ ನಾನು ಅವರೊಂದಿಗೆ ಡೇಟಿಂಗ್ ಮಾಡುತ್ತಿಲ್ಲ ಎನ್ನುವ ವಿಚಾರವನ್ನು ಹಂಚಿಕೊಂಡಿದ್ದರು.

ಆದರೆ ಈಗ ನಟನ ಹೆಸರು ಬೇರೊಬ್ಬ ನಟಿಯ ಜೊತೆಗೆ ತಳಕು ಹಾಕಿಕೊಂಡು ಹೊಸ ಸುದ್ದಿಗಳು ಟಾಲಿವುಡ್ ಅಂಗಳದಲ್ಲಿ ಹರಿದಾಡಿದೆ. ಹೌದು, ನಟನ ಹೆಸರು ಈಗ ಮಜಿಲಿ(Majili) ಸಿನಿಮಾ ಖ್ಯಾತಿಯ ನಟಿ ದಿವ್ಯಾಂಶ ಕೌಶಿಕ್(Divyansha Kaushik) ಜೊತೆಗೆ ಬೆಸೆದುಕೊಂಡಿದೆ. ನಾಗಚೈತನ್ಯ ಮತ್ತು ದಿವ್ಯಾಂಶ ಡೇಟಿಂಗ್ ಮಾಡುತ್ತಿದ್ದಾರೆಂದು, ಅವರಿಬ್ಬರೂ ಈಗ ಡೀಪ್ ಲವ್ ನಲ್ಲಿ ಇದ್ದಾರೆನ್ನುವ ವಿಚಾರಗಳು ಟಾಲಿವುಡ್ ನಲ್ಲಿ ಹಾಟ್ ಟಾಪಿಕ್ ಆಗಿ ಹರಿದಾಡಿದೆ. ಈಗ ಈ ಸುದ್ದಿಗೆ ನಟಿ ದಿವ್ಯಾಂಶ ಸ್ಪಷ್ಟನೆ ನೀಡಿ ಹರಿಡಿರುವ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: ನುಡಿದಂತೆ ನಡೆದ ರಿಷಬ್ ಶೆಟ್ಟಿ: ದೊಡ್ಡ ಆಫರ್ ರಿಜೆಕ್ಟ್ ಮಾಡಿದ ಶೆಟ್ರಿಗೆ ಹ್ಯಾಟ್ಯಾಫ್ ಅಂದ ಫ್ಯಾನ್ಸ್

ನಟಿ ದಿವ್ಯಾಂಶ(Divyansha Kaushik) ಹರಡಿರುವ ಸುದ್ದಿಗಳಿಗೆ ಸ್ಪಷ್ಟನೆಯನ್ನು ನೀಡುತ್ತಾ, ಮಜಿಲಿ ಸಿನಿಮಾದ ನಂತರ ನಾನು ಅವರ ಜೊತೆ ಟಚ್ ನಲ್ಲಿ ಇಲ್ಲ. ಈ ಡೇಟಿಂಗ್ ಸುದ್ದಿಗಳನ್ನು ನಾನು ಇದೇ ಮೊದಲು ಕೇಳುತ್ತಿದ್ದೇನೆ. ನಾಗಚೈತನ್ಯ(Naga Chaitanya) ನಟನೆಯಲ್ಲಿ ನನಗಿಂತ ಸೀನಿಯರ್, ನಾನು ಅವರನ್ನು ಗೌರವಿಸುತ್ತೇನೆ. ಅದಕ್ಕಿಂತ ಹೆಚ್ಚಿಗೆ ಇನ್ನೇನು ಇಲ್ಲ ಎನ್ನುವ ಮಾತನ್ನು ಹೇಳುವ ಮೂಲಕ ದಿವ್ಯಾಂಶ ಡೇಟಿಂಗ್ ವಿಷಯವಾಗಿ ಹರಡಿರುವ ಸುದ್ದಿಗಳಿಗೆ ಫುಲ್ ಸ್ಟಾಪ್ ಹಾಕಿದ್ದಾರೆ. ‌

ನಟ ನಾಗಚೈತನ್ಯ ಸಮಂತಾ ಜೊತೆಗೆ ವಿಚ್ಚೇದನದ ನಂತರ ಅವರ ಹೆಸರು ಹೀಗೆ ಒಬ್ಬರಾದ ಮೇಲೆ ಮತ್ತೊಬ್ಬ ನಟಿಯರ ಜೊತೆಗೆ ತಳಕು ಹಾಕಿಕೊಂಡು ಟಾಲಿವುಡ್ ನಲ್ಲಿ ಆಗಾಗ ಸುದ್ದಿಗಳಾಗುತ್ತಲೇ ಇದೆ. ಇನ್ನು ಈ ಗಾಸಿಪ್ ಗಳ ವಿಚಾರದಲ್ಲೂ ಕೂಡಾ ಮೊದಲು ಶೋಭಿತಾ(Shobhita) ಈಗ ದಿವ್ಯಾಂಶ(Divyansha) ಹರಡಿರುವ ಸುದ್ದಿಗಳು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ನಾಗಚೈತನ್ಯ ಮಾತ್ರ ಈ ವಿಚಾರದಲ್ಲಿ ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡಿಲ್ಲ ಎನ್ನುವುದು ಸಹಾ ಗಮನಾರ್ಹವಾಗಿದೆ.

LEAVE A REPLY

Please enter your comment!
Please enter your name here