ದಿಲ್ ಪಸಂದ್ ಸಿನಿಮಾದಲ್ಲಿ ತನ್ನ ಪಾತ್ರದ ಬಗ್ಗೆ ಮನ ಬಿಚ್ಚಿ ಮಾತನಾಡಿದ ಅನು ಸಿರಿಮನೆ ಖ್ಯಾತಿಯ ಮೇಘಾ ಶೆಟ್ಟಿ

Written by Soma Shekar

Published on:

---Join Our Channel---

ಜೊತೆ ಜೊತೆಯಲಿ ಸೀರಿಯಲ್ ನ ಅನು ಸಿರಿಮನೆ ಪಾತ್ರದ ಮೂಲಕ ನಟನಾ ಲೋಕಕ್ಕೆ ಅಡಿಯಿಟ್ಟವರು ಮೇಘಾ ಶೆಟ್ಟಿ. ಅನು ಪಾತ್ರದ ಮೂಲಕ ಅವರು ಪಡೆದ ಜನಪ್ರಿಯತೆ ಯಾವ ಮಟ್ಟದವರೆಗೂ ಹೋಗಿದೆ ಎಂದರೆ ನಟಿ ಮೇಘಾ ಶೆಟ್ಟಿ ಅವರ ಈ ಜನಪ್ರಿಯತೆ ಅವರನ್ನು ಸ್ಯಾಂಡಲ್ವುಡ್ ಕಡೆಗೂ ನಡೆಸಿದೆ. ಹೌದು ನಟಿ ಮೇಘಾ ಶೆಟ್ಟಿ ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಾಯಕಿ ಪಾತ್ರದ ಮೂಲಕ ಸಿನಿಮಾ ರಂಗಕ್ಕೆ ಅಡಿಯಿಟ್ಟಾಗಿದೆ. ಈ ಸಿನಿಮಾ ಚಿತ್ರೀಕರಣ ಈಗಾಗಲೇ ಮುಗಿದಿದೆ. ಇನ್ನು ಸಿನಿಮಾ ಬಿಡುಗಡೆ ಆಗಬೇಕಿದೆ.

ಮೊದಲ ಸಿನಿಮಾ ಮುಗಿದ ಕೂಡಲೇ ಇದೀಗ ಮೇಘಾ ಶೆಟ್ಟಿಯವರು ಎರಡನೇ ಸಿನಿಮಾ ಕೂಡಾ ಘೋಷಣೆಯಾಗಿದ್ದು, ಡಾರ್ಲಿಂಗ್ ಕೃಷ್ಣ ಅವರು ನಾಯಕನಾಗಿರುವ ದಿಲ್ ಪಸಂದ್ ಸಿನಿಮಾದಲ್ಲಿ ಮೇಘಾ ಅವರು ನಾಯಕಿಯಾಗಿದ್ದಾರೆ. ಸಿನಿಮಾ ಘೋಷಣೆಯ ನಂತರ ಮೇಘಾ ಅವರು ಮಾದ್ಯಮವೊಂದರ ಸಂದರ್ಶನದಲ್ಲಿ ತಮ್ಮ ಹೊಸ ಸಿನಿಮಾ ಹಾಗೂ ಸಿನಿಮಾದ ಪಾತ್ರದ ಬಗ್ಗೆ ಒಂದಷ್ಟು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಮೇಘಾ ಶೆಟ್ಟಿಯವರು ಮಾತನಾಡುತ್ತಾ ದಿಲ್ ಪಸಂದ್ ನನಗೆ ಬಹಳ ಇಷ್ಟವಾದ ಸ್ವೀಟ್ ಆಗಿದೆ, ಸಿನಿಮಾದ ಹೆಸರು ಕೂಡಾ ಅದೇ ಆಗಿರುವುದು ಬಹಳ ಚೆನ್ನಾಗಿದೆ ಎಂದಿದ್ದಾರೆ. ಸಿನಿಮಾ ನಿರ್ಮಾಪಕರಾದ ಸುಮಂತ್ ಕ್ರಾಂತಿ, ನಿರ್ದೇಶಕ ಶಿವ ತೇಜಸ್ ಹಾಗೂ ಹರೀಶ್ ಅವರು ಮನೆಗೆ ಬಂದು ಸಿನಿಮಾ ಕಥೆ ಹೇಳಿ ಹೋದ ಮೇಲೆ ಸಹಾ ನಾನು ನಗ್ತಾ ಇದ್ದೆ, ಕಾರಣ ಆ ಕಥೆಯಲ್ಲಿ ನನ್ನ ಪಾತ್ರ ಅಷ್ಟು ಚೆನ್ನಾಗಿದೆ ಎಂದಿದ್ದಾರೆ ಮೇಘಾ ಶೆಟ್ಟಿ.

ಸಿನಿಮಾದ ಕಥೆಯಂತೂ ತುಂಬಾ ಸುಂದರ ಹಾಗೂ ಮನರಂಜನಾತ್ಮಕವಾಗಿದ್ದು, ನನ್ನ ಪಾತ್ರ ತುಂಬಾ ಕ್ಯೂಟಾಗಿದೆ ಎಂದಿರುವ ಮೇಘಾ ಶೆಟ್ಟಿ ಅವರು ಈ ಸಿನಿಮಾ ಖಂಡಿತ ದೊಡ್ಡ ಮಟ್ಟದ ಯಶಸ್ಸನ್ನು ಪಡೆಯುತ್ತೆ, ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ತಂದುಕೊಡುತ್ತೆ ಎಂದು ಬಹಳ ಸಂತೋಷದಿಂದ ಹೇಳಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ನನಗೆ ದಿಲ್ ಪಸಂದ್ ಎಂದರೆ ಬಹಳ ಇಷ್ಟ ಎಂದು ಮೇಘಾ ಶೆಟ್ಟಿ ಅವರು ಈ ವೇಳೆ ಹೇಳಿದ್ದಾರೆ.

ಪಾತ್ರಕ್ಕೆ ನಾನು ಸೂಟ್ ಆಗ್ತೀನಿ ಅಂತ ನನ್ನ ಆಯ್ಕೆ ಮಾಡಿದ ಚಿತ್ರತಂಡಕ್ಕೆ ಧನ್ಯವಾದಗಳು ಎಂದಿರುವ ಮೇಘಾ ಶೆಟ್ಟಿ ಅವರು ಚಿತ್ರದಲ್ಲಿ ರಂಗಾಯಣ ರಘು ಅವರು ಇದ್ದಾರೆ. ಅವರ ಜೊತೆ ಈಗಾಗಲೇ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಮಾಡಿರೋದ್ರಿಂದ ಅವರ ಪರಿಚಯ ಇದೆ. ಅವರು ತುಂಬಾ ಒಳ್ಳೆ ವ್ಯಕ್ತಿ, ಮೃದು ಹೃದಯಿ, ಸ್ನೇಹಮಯಿ ಅವರು ಎಂದು ರಂಗಾಯಣ ರಘು ಅವರ ಬಗ್ಗೆ ಮೇಘಾ ಶೆಟ್ಟಿ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

Leave a Comment