ಕೇವಲ 20 ರೂ ಫೀಸ್ ಪಡೆದು ಚಿಕಿತ್ಸೆ ನೀಡುವ ಡಾಕ್ಟರ್ ಗೆ ಪದ್ಮಶ್ರೀ ಪ್ರಶಸ್ತಿ: ಹರಿದು ಬಂತು ಅಪಾರ ಮೆಚ್ಚುಗೆ

0
1951

Padmashree Award : ಬುಧವಾರ ಭಾರತ ಸರ್ಕಾರವು(Indian Govt) ಈ ಬಾರಿಯ ಪದ್ಮಶ್ರೀ(Padmashree) ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಈ ಬಾರಿ ಪದ್ಮಶ್ರೀ ಪುರಸ್ಕಾರವನ್ನು ಘೋಷಣೆ ಮಾಡಲಾಗಿದ್ದು, ಇದರಲ್ಲಿ ವೈದ್ಯರೊಬ್ಬರಿಗೆ ಸಹಾ ಪದ್ಮಶ್ರೀ ಪ್ರಶಸ್ತಿ (Padmashree Award) ಬಂದಿದ್ದು, ಅವರು ಸಮಾಜಕ್ಕೆ ಮಾಡುತ್ತಿರುವ ಸೇವೆಯನ್ನು ಗಮನಿಸಿ ಈಗ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಹಾಗಾದರೆ ಆ ವೈದ್ಯ ಯಾರು? ಅವರು ಮಾಡುತ್ತಿರುವ ಸೇವೆ ಏನು? ಎನ್ನುವ ತಿಳಿಯುವ ಕುತೂಹಲ ನಿಮ್ಮಲ್ಲೂ ಮೂಡಿದ್ದರೆ ಅದಕ್ಕೆ ಇಲ್ಲಿದೆ ಉತ್ತರ ಮತ್ತು ವಿವರ.

ಮಧ್ಯಪ್ರದೇಶದ(Madhya Pradesh) ಜಬಲ್ಪುರ ಜಿಲ್ಲೆಯ 77 ವರ್ಷದ ವೈದ್ಯ ಡಾ.ಎಂ.ಸಿ.ದಾವರ್ (Dr. M.C.Davar) ಅವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬರಾಗಿದ್ದಾರೆ. 1946 ಜನವರಿ 16 ರಂದು ಪಾಕಿಸ್ತಾನದ ಪಂಜಾಬ್ ನಲ್ಲಿ ಜನಿಸಿದ ದಾವರ್ ಅವರು ಸ್ವಾತಂತ್ರ್ಯ ನಂತರ ದೇಶ ವಿಭಜನೆ ಆದಾಗ ಕುಟುಂದೊಡನೆ ಭಾರತಕ್ಕೆ ಬಂದರು. ಎಂಬಿಬಿಎಸ್ ಪದವಿ(MBBS Degree) ಪಡೆದ ಮೇಲೆ ಇವರು ಒಂದು ವರ್ಷ ಕಾಲ ಇಂಡೋ ಪಾಕ್ ಯು ದ್ಧ ದ ವೇಳೆ ಸೇನೆಯಲ್ಲಿ(Indian Army) ಸಹಾ ಸೇವೆಯನ್ನು ಸಲ್ಲಿಸಿದ್ದರು. 1972 ರಲ್ಲಿ ಜಬಲ್ಪುರದಲ್ಲಿ ಇವರು ಜನ ಸೇವೆಗಾಗಿಯೇ ಆಸ್ಪತ್ರೆಯೊಂದನ್ನು ತೆರೆದರು.

ಇದನ್ನೂ ಓದಿ: ಶಾರೂಖ್ ಭೇಟಿಗಾಗಿ ಅವರ ಮನೆ ಮುಂದೆ ಸಾಮಾನ್ಯನಂತೆ ಫ್ಯಾನ್ಸ್ ಜೊತೆ ಕಾದು ಕುಳಿತ ಬಿಗ್ ಬಾಸ್ ಸ್ಪರ್ಧಿ ಅಬ್ದು

ಆಸ್ಪತ್ರೆ ತೆರೆದಾಗ ಅವರು ಜನರಿಗೆ ಎರಡು ರೂಪಾಯಿಗೆ ಚಿಕಿತ್ಸೆಯನ್ನು ನೀಡುತ್ತಿದ್ದರು. ಆದರೆ ದಿನ ಕಳೆದ ಹಾಗೆ ಎಲ್ಲಾ ಸೌಲಭ್ಯಗಳು ದುಬಾರಿಯಾಗುತ್ತಿದ್ದುದ್ದರಿಂದ ಅವರು ತಮ್ಮ ಶುಲ್ಕವನ್ನು 20 ರೂ. ಗೆ ಏರಿಸಿದರು. ಆದರೆ ಮತ್ತೆ ದರವನ್ನು ಅವರು ಏರಿಸಲಿಲ್ಲ. ದಾವರ್ ಅವರ ಈ ಸೇವೆಯಿಂದಾಗಿ ಅದೆಷ್ಟೋ ಜನ ಬಡವರಿಗೆ ದೊಡ್ಡ ಸಹಾಯವೇ ದೊರೆಯುತ್ತಿದೆ. ದಾವರ್ ಅವರು ಮಾತನಾಡುತ್ತಾ, ಕಡಿಮೆ ಶುಲ್ಕದ ಬಗ್ಗೆ ಮನೆಯಲ್ಲಿ ಚರ್ಚೆ ನಡೆದಿತ್ತಾದರೂ, ಅದರ ಬಗ್ಗೆ ಯಾವುದೇ ತಕರಾರು ಇರಲಿಲ್ಲ ಎಂದು ಹೇಳಿದ್ದಾರೆ.

ದಾವರ್ ಅವರು ನಮ್ಮ ಏಕೈಕ ಗುರಿ ಜನ ಸೇವೆಯಾಗಿದೆ. ಆದ್ದರಿಂದಲೇ ಶುಲ್ಕವನ್ನು ಹೆಚ್ಚಿಸಲಿಲ್ಲ. ತಾಳ್ಮೆಯಿಂದ ಕೆಲಸವನ್ನು ಮಾಡಿದರೆ ಯಶಸ್ಸು ಖಂಡಿತ ದೊರೆಯುತ್ತದೆ ಎಂದಿದ್ದು, ಸಾಧನೆಯನ್ನು ಖಂಡಿತ ಗೌರವಿಸಲಾಗುತ್ತದೆ ಎನ್ನುವ ಮಾತನ್ನು ಸಹಾ ಅವರು ಹೇಳಿದ್ದಾರೆ. ದಾವರ್ ಅವರಿಗೆ ಪದ್ಮಶ್ರೀ ಬಂದಿರುವ ವಿಚಾರ ಸುದ್ದಿಯಾದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಸಹಾ ಅನೇಕರು ಮೆಚ್ಚುಗೆಗಳನ್ನು ನೀಡುತ್ತಾ, ಅಭಿನಂದಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here