ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ಕಮಲಿ ಸೀರಿಯಲ್ ನ ಜನಪ್ರಿಯ ನಟಿ: ಹರಿದು ಬರುತ್ತಿದೆ ಶುಭಾಶಯಗಳು!!

Entertainment Featured-Articles Movies News

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಕಮಲಿ ಧಾರಾವಾಹಿ ಕೂಡಾ ಒಂದಾಗಿದೆ. ವರ್ಷಗಳಿಂದ ಜನರನ್ನು ರಂಜಿಸುತ್ತಾ ಬರುತ್ತಿರುವ ಈ ಧಾರಾವಾಹಿ ತನ್ನ ಜನಪ್ರಿಯತೆಯನ್ನು ಇಂದಿಗೂ ಹಾಗೇ ಉಳಿಸಿಕೊಂಡಿದೆ. ಮೆಗಾ ಸೀರಿಯಲ್ ಆಗುವ ಮೂಲಕ ಕಿರುತೆರೆಯಲ್ಲಿ ತನ್ನದೇ ಆದ ಯಶಸ್ಸಿನ ಓಟವನ್ನು ಮುಂದುವರಿಸಿದೆ.. ಕಮಲಿ ಧಾರಾವಾಹಿಯಲ್ಲಿ ನಾಯಕಿ ಕಮಲಿಗೆ ಆಪ್ತ ಗೆಳತಿಯಾಗಿ ಇರುವ ಪಾತ್ರ ನಿಂಗಿ. ಈ ಪಾತ್ರದ ಮೂಲಕ ಪಕ್ಕ ಹಳ್ಳಿ ಹುಡುಗಿಯಂತೆ ಮಾತನಾಡುತ್ತಾ, ಹಾಸ್ಯದ ಹೊನಲನ್ನು ಹೊರಳಿಸಿರುವ ನಟಿ ಅಂಕಿತ ಅವರು ತಮ್ಮ ನಿಂಗಿ ಪಾತ್ರದ ಮೂಲಕ ಜನರ ಮನಸ್ಸನ್ನು ಗೆದ್ದಿರುವುದು ಮಾತ್ರವಲ್ಲದೇ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಕೂಡಾ ಪಡೆದುಕೊಂಡಿದ್ದಾರೆ.

ಅಂಕಿತ ಅವರು ಕಮಲಿ ಧಾರಾವಾಹಿಗೂ ಮೊದಲು ಇನ್ನು ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ, ಅವರು ಸೌಂದರ್ಯ ಸ್ಪರ್ಧೆಯೊಂದರಲ್ಲಿ ಗೆದ್ದಿದ್ದಾರೆ. ಆದರೆ ಅವರಿಗೆ ಹೆಚ್ಚಿನ ಹೆಸರು ಮತ್ತು ಜನಪ್ರಿಯತೆಯನ್ನು ತಂದು ಕೊಟ್ಟಿದ್ದು ಮಾತ್ರ ಕಮಲಿ ಧಾರಾವಾಹಿಯಲ್ಲಿನ ನಿಂಗಿ ಪಾತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗೆ ನಿಂಗಿ ಪಾತ್ರದ ಮೂಲಕ ಜನರನ್ನು ರಂಜಿಸಿ, ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದ ಅಂಕಿತ ಅವರು ಇದೀಗ ತಮ್ಮ ಖಾಸಗಿ ಜೀವನದಲ್ಲಿ ಮಹತ್ವದ ಘಟ್ಟವೊಂದಕ್ಕೆ ಅಡಿಯಿಟ್ಟಿದ್ದಾರೆ. ಹೌದು ನಟಿ ಅಂಕಿತ ಅವರು ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಟಿ ಅಂಕಿತ ಅವರು ಸುಹಾಸ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯ ನಿಶ್ಚಿತಾರ್ಥವೂ ನಡೆದು ಒಂದು ವರ್ಷವಾಗಿತ್ತು. ವರ್ಷದ ನಂತರ ಇದೀಗ ಈ ಜೋಡಿಯು ತಮ್ಮ ಸಾಂಸಾರಿಕ ಜೀವನದ ಆರಂಭ ಮಾಡಿದ್ದಾರೆ. ಅಂಕಿತಾ ಅವರನ್ನು ಮದುವೆ ಆಗಿರುವ ಸುಹಾಸ್ ಕುಮಾರಸ್ವಾಮಿಯವರು ಕೆನಡಾದಲ್ಲಿ ನೆಲೆಸಿದ್ದು, ಅವರೊಬ್ಬ ವೃತ್ತಿಪರ ಫೋಟೋಗ್ರಾಫರ್ ಆಗಿ ಕೆಲಸವನ್ನು ಮಾಡುತ್ತಿದ್ದಾರೆ. ಸುಹಾಸ್ ಮೂಲತಃ ಬೆಂಗಳೂರಿನವರಾಗಿದ್ದಾರೆ. ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಸಾಕಷ್ಟು ವನ್ಯಜೀವಿ ಮತ್ತು ಪರಿಸರದ ಕುರಿತಾದ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನಟಿ ಅಂಕಿತ ಅವರಿಗೂ ವೈಲ್ಡ್ ಲೈಫ್ ಫೋಟೋಗ್ರಫಿ ಬಹಳ ಇಷ್ಟವಾದ ವಿಷಯವಾಗಿದೆ. ನಟಿ ಅಂಕಿತಾ ಅವರಿಗೆ ಪುನೀತ್ ರಾಜಕುಮಾರ್ ಅಚ್ಚುಮೆಚ್ಚಿನ ನಟನಾಗಿದ್ದು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ವೇಳೆ ಅಂಕಿತ ಅವರು ಪುನೀತ್ ರಾಜಕುಮಾರ್ ಅವರನ್ನು ಭೇಟಿ ಮಾಡಿದ್ದರು. ಪುನೀತ್ ರಾಜಕುಮಾರ್ ಅವರನ್ನು ಭೇಟಿ ಮಾಡಿದ ಆ ಸಂತೋಷದ ಕ್ಷಣಗಳ ಸುಂದರವಾದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಅಂಕಿತ ಬಹಳ ಸಂಭ್ರಮಿಸಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಅಂಕಿತ ಅವರು ಆಗಾಗ ಹೊಸ ಹೊಸ ಫೋಟೋಶೂಟ್ ಗಳನ್ನು ಮಾಡಿಸಿ, ತಮ್ಮ ಅಂದವಾದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಅವರ ಫೋಟೋಗಳಿಗೆ ಸಾಕಷ್ಟು ಮೆಚ್ಚುಗೆಗಳು ಹರಿದುಬರುತ್ತವೆ. ಇನ್ನು ಅಂಕಿತ ಅವರ ವಿವಾಹವು ಬೆಂಗಳೂರಿನಲ್ಲಿ ನಡೆದಿದ್ದು, ಮದುವೆ ಸಮಾರಂಭದಲ್ಲಿ ಕಮಲಿ ಧಾರಾವಾಹಿ ತಂಡದ ರಚನಾ, ಜಯಶ್ರೀ ಮತ್ತು ಮೈಕ್ ಮಂಜು ಸೇರಿದಂತೆ ಸಾಕಷ್ಟು ಜನರು ಹಾಜರಿದ್ದು, ಅಂಕಿತ ಮತ್ತು ಸುಹಾಸ್ ಜೋಡಿಗೆ ಶುಭ ಹಾರೈಸಿದ್ದಾರೆ.

Leave a Reply

Your email address will not be published.