ದಶಕದ ಕನಸು ನನಸಾಯಿತೆಂದು ಸಂತೋಷ ಹಂಚಿಕೊಂಡ ಗೂಳಿ ಸಿನಿಮಾ ನಟಿ ಮಮತಾ ಮೋಹನ್ ದಾಸ್

0 4

ಸಿನಿಮಾ ಸೆಲೆಬ್ರಿಟಿಗಳ ಹವ್ಯಾಸಗಳು ಕೂಡಾ ಬಹಳ ದುಬಾರಿ ಅಥವಾ ಐಶಾರಾಮೀ ಆಗಿರುತ್ತದೆ. ಅವರ ಈ ಹವ್ಯಾಸಕ್ಕೆ ಉದಾಹರಣೆ ಎನ್ನುವಂತೆ ದುಬಾರಿ ಬೆಲೆಯ ಕಾರುಗಳನ್ನು ಹಾಗೂ ಬೈಕುಗಳನ್ನು ಕೊಂಡುಕೊಂಡು ತಮ್ಮ ಸಂಗ್ರಹದಲ್ಲಿ ಇಟ್ಟುಕೊಳ್ಳುವುದು ಅನೇಕ ನಟ ನಟಿಯರು ಸಾಮಾನ್ಯವಾದ ಆಸಕ್ತಿ ಎನಿಸಿದೆ. ಇಂತಹ ತಮ್ಮ ಹವ್ಯಾಸದಿಂದಾಗಿ ಸ್ಟಾರ್ ನಟರು ತಮ್ಮ ಬಳಿಯಲ್ಲಿ ಅನೇಕ ದುಬಾರಿ ಕಾರುಗಳ ಸಂಗ್ರಹವನ್ನೇ ಹೊಂದಿದ್ದಾರೆ. ಇನ್ನು ಇತ್ತೀಚಿನ ಕೆಲವು ದಿನಗಳಲ್ಲಿ ಬಹಳಷ್ಟು ಜನ ಸ್ಟಾರ್ ನಟ, ನಟಿಯರು ಹಾಗೂ ನಿರ್ದೇಶಕರು ದುಬಾರಿ ಬೆಲೆಯ ಐಶಾರಾಮೀ ಕಾರುಗಳನ್ನು ಖರೀದಿ ಮಾಡುವ ಮೂಲಕ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ.

ಇದೀಗ ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ಮತ್ತೋರ್ವ ನಟಿ ಈ ಸಾಲಿಗೆ ಹೊಸ‌ ಸೇರ್ಪಡೆಯಾಗಿದ್ದಾರೆ.‌ ಹೌದು ಕನ್ನಡದ ಗೂಳಿ ಸಿನಿಮಾದಲ್ಲಿ ನಟಿಸಿದ್ದ ದಕ್ಷಿಣ ಭಾರತದ ಪ್ರಸಿದ್ಧ ನಟಿ, ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ಹೆಸರನ್ನು ಪಡೆದುಕೊಂಡಿರುವ ಮಮತಾ ಮೋಹನ್ ದಾಸ್ ಹೊಸ ಐಶಾರಾಮಿ ಕಾರೊಂದನ್ನು ಖರೀದಿ ಮಾಡಿದ್ದು, ಈ ಸಂತೋಷದ ಸುದ್ದಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮಮತಾ ಮೋಹನ್ ದಾಸ್ ಅವರು ಖರೀದಿ ಮಾಡಿರುವ ಹೊಸ ಫೋಟೋ ಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಾ ಸಾಗಿದೆ. ನಟಿ ಮಮತಾ ಮೋಹನ್ ದಾಸ್ ಅವರು ಪೋರ್ಷೆ 911 ಕ್ಯಾರೆರಾ ಎಸ್ ಟು ಸ್ಪೋರ್ಟ್ಸ್ ಕಾರನ್ನು ಖರೀದಿ ಮಾಡಿದ್ದು, ಇದರಲ್ಲಿ ಒಂದು ವಿಶೇಷ ಕೂಡಾ ಇದೆ. ಏನು ಆ ವಿಶೇಷ ಎನ್ನುವುದಾದರೆ,ಭಾರತದಲ್ಲಿ ಈ ಕಾರನ್ನು ಖರೀದಿಸಿದ ಮೊಟ್ಟ ಮೊದಲ‌ ಸೆಲೆಬ್ರಿಟಿ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.

ಮಮತಾ ಮೋಹನ್ ದಾಸ್ ಅವರು ಹೊಸ ಕಾರು ಖರೀದಿ ಮಾಡಿದ ನಂತರ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ಕಾರಿನ ಫೋಟೋಗಳನ್ನು ಶೇರ್ ಮಾಡಿಕೊಂಡು ತಮ್ಮ ಅಭಿಮಾನಿಗಳ ಜೊತೆಗೆ ಈ ಖುಷಿಯನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ. ನಟಿ ಕಾರಿನ ಫೋಟೋ ಶೇರ್ ಮಾಡಿಕೊಂಡು “ದಶಕದ ಕನಸು ಕೊನೆಗೂ ನನಸಾಗಿದೆ. ಈ ಕಾರಿಗಾಗಿ ನಾನು ವರ್ಷಗಳ ಕಾಲ ನಿರೀಕ್ಷಿಸಿದ್ದು, ಈಗ ಅದು ನನ್ನ ಸ್ವಂತವಾಗಿದೆ. ನನ್ನ ಕುಟುಂಬಕ್ಕೆ ನಿನ್ನನ್ನು ಸ್ವಾಗತಿಸಲು ನನಗೆ ಹೆಮ್ಮೆ ಎನಿಸುತ್ತಿದೆ” ಎಂದು ಬರೆದುಕೊಂಡಿದ್ದಾರೆ.

ಮಮತಾ ಮೋಹನ್ ದಾಸ್ ಅವರು ಹೊಸ ಕಾರು ಕೊಂಡ ಈ ಸಂತೋಷದ ಬಗ್ಗೆ ಹೇಳಿದ ಮಾತುಗಳನ್ನು ಕೇಳಿದ ಅವರ ಅಭಿಮಾನಿಗಳು ಅವರಿಗೆ ಶುಭ ಕೋರಿದ್ದಾರೆ. ಮಮತಾ ಮೋಹನ್ ದಾಸ್ ಅವರು ಖರೀದಿ ಮಾಡಿರುವ ಈ ಕಾರಿನ ಬೆಲೆ 1.84 ಕೋಟಿ ಆಗಿದ್ದು, ಇದರಲ್ಲಿ ನಾಲ್ಕು ಜನರು ಪಯಣಿಸಬಹುದಾಗಿದೆ. ಸ್ಪೋರ್ಟ್ಸ್ ಕಾರು ನೋಡಿ ಮಮತಾ ಅವರ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ.

Leave A Reply

Your email address will not be published.