ದಳಪತಿ ವಿಜಯ್ ಜೊತೆಗೆ ನಟಿಸುವ ವಿಚಾರದಲ್ಲಿ ನಟಿ ಸಾಯಿ ಪಲ್ಲವಿ ಸಂಚಲನ ಹೇಳಿಕೆ!!
ದಕ್ಷಿಣ ಸಿನಿಮಾಗಳ ಸ್ಟಾರ್ ನಟಿ, ಸರಳ ಸುಂದರಿ, ತನ್ನ ನಟನೆ ಹಾಗೂ ಅದ್ಭುತ ಡ್ಯಾನ್ಸ್ ಗಳಿಂದ ದೊಡ್ಡ ಅಭಿಮಾನ ಬಳಗವನ್ನು ಪಡೆದಿರುವ ನಟಿ ಸಾಯಿ ಪಲ್ಲವಿ. ಇತ್ತೀಚಿಗೆ ನಟ ದಗ್ಗುಬಾಟಿ ರಾಣಾ ಜೊತೆಗೆ ನಟಿಸಿದ ವಿರಾಟ ಪರ್ವಂ ಸಿನಿಮಾದ ವೆನ್ನೆಲ ಪಾತ್ರದ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು. ಪ್ರಸ್ತುತ ಸಾಯಿ ಪಲ್ಲವಿ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಬರುತ್ತಿರುವ ತಮ್ಮ ಹೊಸ ಸಿನಿಮಾ ಗಾರ್ಗಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನು ತಮಿಳಿನಲ್ಲಿ ಸ್ಟಾರ್ ನಟ ಸೂರ್ಯ ಮತ್ತು ನಟಿ ಜ್ಯೋತಿಕಾ ದಂಪತಿ ತಮ್ಮ ಹೋಮ್ ಪ್ರೊಡಕ್ಷನ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
ಈಗಾಗಲೇ ಬಿಡುಗಡೆ ಆಗಿರುವ ಗಾರ್ಗಿ ಸಿನಿಮಾದ ಪೋಸ್ಟರ್, ವೀಡಿಯೋ ಗಳು, ಟ್ರೈಲರ್ ಈಗಾಗಲೇ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿವೆ. ಈಗಾಗಲೇ ಚಿತ್ರೀಕರಣ ಸಹಾ ಮುಗಿದಿರುವ ಈ ಸಿನಿಮಾ ಜುಲೈ 15 ಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಪ್ರಸ್ತುತ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ನಟಿ ಸಾಯಿ ಪಲ್ಲವಿ ತಮಿಳಿನ ಸ್ಟಾರ್ ನಟ ವಿಜಯ್ ಅವರ ಬಗ್ಗೆ ಮಾತನಾಡಿದ್ದು, ನಟಿಯ ಮಾತುಗಳು ಅವರ ಅಭಿಮಾನಿಗಳು ಮತ್ತು ನಟ ವಿಜಯ್ ಅವರ ಅಭಿಮಾನಿಗಳಿಗೂ ಸಹಾ ಅಚ್ಚರಿಯನ್ನು ಮೂಡಿಸಿದೆ.
ನಟಿ ಸಾಯಿ ಪಲ್ಲವಿ ಮಾತನಾಡುತ್ತಾ, ತಾನು ತಮಿಳು ನಟ ವಿಜಯ್ ಅವರ ಜೊತೆ ನಟಿಸಲು ಬಹಳ ದಿನಗಳಿಂದಲೂ ನಿರೀಕ್ಷೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಒಂದು ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಖಂಡಿತ ನಾನು ಅವರೊಂದಿಗೆ ನಟಿಸಲು ಇಷ್ಟಪಡುವುದಾಗಿ ಸಾಯಿ ಪಲ್ಲವಿ ತಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ. ನಟಿ ಸಾಯಿ ಪಲ್ಲವಿ ಮೊಟ್ಟ ಮೊದಲ ಬಾರಿಗೆ ನಟ ವಿಜಯ್ ಅವರನ್ನು 2017 ರಲ್ಲಿ ಬಿಹೈಂಡ್ ವುಡ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು. ಆಗ ವಿಜಯ್ ಅವರು ಸಾಯಿ ಪಲ್ಲವಿಯನ್ನು ಮಾತನಾಡಿಸಿದಾಗ ನಟಿ ಎಮೊಷನಲ್ ಆಗಿದ್ದ ವಿಷಯ ಸುದ್ದಿಯಾಗಿತ್ತು.