ದರ್ಶನ್ ಜೊತೆ RRR, KGF-2 ಸಿನಿಮಾ ಕಲೆಕ್ಷನ್ ಮೀರಿಸುವ ಸಿನಿಮಾ ಮಾಡಲು ಎಸ್ ವಿ ರಾಜೇಂದ್ರ ಸಿಂಗ್ ಬಾಬು ಸಜ್ಜು!!

Entertainment Featured-Articles Movies News

ದಕ್ಷಿಣ ಭಾರತದ ಸಿನಿಮಾಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸದ್ದು, ಸುದ್ದಿಯನ್ನು ಮಾಡುತ್ತಿವೆ. ಕನ್ನಡ ಸಿನಿಮಾಗಳು ಕೂಡಾ ಭಾರತೀಯ ಚಲನ ಚಿತ್ರರಂಗ ಮಾತ್ರವಲ್ಲದೇ ವಿಶ್ವದ ಗಮನವನ್ನು ಸೆಳೆಯುತ್ತಿವೆ. ದಕ್ಷಿಣದ ಸಿನಿಮಾಗಳು ಸಾವಿರ ಕೋಟಿ ರೂಪಾಯಿಗಳ ಕಲೆಕ್ಷನ್ ಮಾಡುತ್ತಿವೆ. ಇತ್ತೀಚೆಗೆ ಬಿಡುಗಡೆಯಾದ ತ್ರಿಬಲ್ ಆರ್ ಮತ್ತು ಕೆಜಿಎಫ್-2 ಸಿನಿಮಾಗಳು ಸಾವಿರ ಕೋಟಿಯ ದಾಖಲೆಯನ್ನು ಮುರಿದು ಇನ್ನೂ ಹೆಚ್ಚಿನ ಗಳಿಕೆಯನ್ನು ಕಾಣುವ ಮೂಲಕ ದಕ್ಷಿಣ ಸಿನಿಮಾಗಳ ಸಾಮರ್ಥ್ಯ ಏನು ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.
ಬಾಲಿವುಡ್ ಕೂಡಾ ದಕ್ಷಿಣದ ಕಡೆಗೆ ಮುಖ ಮಾಡುವಂತಾಗಿದೆ.

ದಕ್ಷಿಣ ಸಿನಿಮಾಗಳ ಯಶಸ್ಸು ಸಿನಿಮಾ ರಂಗದಲ್ಲಿ ಒಂದು ಹೊಸ ಚೈತನ್ಯ ವನ್ನು, ಹುರುಪನ್ನು ನೀಡಿದೆ. ಈಗ ಇವೆಲ್ಲವುಗಳ ನಡುವೆಯೇ ಸ್ಯಾಂಡಲ್ ವುಡ್ ನ ಜನಪ್ರಿಯ ನಿರ್ದೇಶಕ ಎಸ್ ವಿ ರಾಜೇಂದ್ರಸಿಂಗ್ ಬಾಬು ಅವರು ನೀಡಿರುವ ಒಂದು ಹೇಳಿಕೆ ಎಲ್ಲರ ಗಮನ ಸೆಳೆದಿದೆ. ದಕ್ಷಿಣ ಸಿನಿಮಾಗಳು ಮಾಡುತ್ತಿರುವ ಕಲೆಕ್ಷನ್ ಬಗ್ಗೆ ಮೆಚ್ಚುಗೆ ಸೂಚಿಸಿದ ಅವರು ಇದೇ ವೇಳೆ ಅವರು ಹೊಸದೊಂದು ವಿಚಾರವನ್ನು ಸಹಾ ಹಂಚಿಕೊಂಡಿದ್ದಾರೆ. ವೀರ ಕಂಬಳ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ವೇಳೆ ಅವರು ಕೆಜಿಎಫ್-2 ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಎಸ್ ವಿ ರಾಜೇಂದ್ರಸಿಂಗ್ ಬಾಬು ಅವರು ಮಾತನಾಡುತ್ತಾ, ನಾವು ಕೂಡ ನಟ ದರ್ಶನ್ ಅವರೊಂದಿಗೆ ಒಂದು ಹೊಸ ಸಿನಿಮಾವನ್ನು ಮಾಡಲು ಹೊರಟಿದ್ದೇವೆ. ಈ ಸಿನಿಮಾ 1500 ಕೋಟಿ ರೂ ಕಲೆಕ್ಷನ್ ಮಾಡಲಿದೆ. ದರ್ಶನ್ ಅವರು ಸಹಾ ಈ ಸಿನಿಮಾಕ್ಕೆ ಒಪ್ಪಿಗೆಯನ್ನು ನೀಡಿದ್ದಾರೆ. ವಿದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಸಲಾಗುವುದು. ವೀರ ಕಂಬಳ ಮತ್ತು ದರ್ಶನ್ ಅವರು ಈಗಾಗಲೇ ಎಂಗೇಜ್ ಆಗಿರುವಂತಹ ಸಿನಿಮಾಗಳ ಚಿತ್ರೀಕರಣ ಮುಗಿದ ಮೇಲೆ ಈ ಹೊಸ ಸಿನಿಮಾ ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ.

ಈ ಹಿಂದೆ ಎಸ್ ವಿ ರಾಜೇಂದ್ರಸಿಂಗ್ ಬಾಬು ಹಾಗೂ ದರ್ಶನ್ ಅವರ ಕಾಂಬಿನೇಷನ್ ನಲ್ಲಿ ವೀರ ಮದಕರಿ ಹೆಸರಿನ ಸಿನಿಮಾವೊಂದು ಸೆಟ್ಟೇರಿತ್ತು. ಆಗ ಆ ಸಿನಿಮಾದ ಕುರಿತಾಗಿ ಸಾಕಷ್ಟು ಸುದ್ದಿಗಳಾಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಆ ಸಿನಿಮಾದ ಬಗ್ಗೆ ಯಾವುದೇ ಸುದ್ದಿ ಇಲ್ಲ. ಇದರ ನಡುವೆಯೇ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರು ನಟ ದರ್ಶನ್ ಅವರ ಜೊತೆಗೆ 1500 ಕೋಟಿ ಕಲೆಕ್ಷನ್ ಮಾಡುವ ಸಿನಿಮಾ ನಿರ್ದೇಶನ ಮಾಡುತ್ತೇನೆ ಎಂದು ಹೇಳಿರುವ ಮಾತು ಸಹಜವಾಗಿಯೇ ಅಚ್ಚರಿಯನ್ನು ಮೂಡಿಸಿದೆ.

Leave a Reply

Your email address will not be published. Required fields are marked *