ನಟ ದರ್ಶನ್ ಕೈ ಸೇರಿದ ಹೊಸ ಕಾರು: ಈ ದುಬಾರಿ ಐಶಾರಾಮೀ ಕಾರಿನ ಬೆಲೆ ಎಷ್ಟು ಗೊತ್ತಾ?

Entertainment Featured-Articles Movies News

ಸಿನಿಮಾ ಸೆಲೆಬ್ರಿಟಿಗಳ ಜೀವನ ಎಂದರೆ ಅನೇಕರಿಗೆ ಅದು ಬಹಳ ಆಸಕ್ತಿಕರ ವಿಷಯವಾಗಿದೆ. ಅದರಲ್ಲೂ ಸಿನಿಮಾ ತಾರೆಯರು ತೊಡುವ ಬಟ್ಟೆಯಿಂದ ಹಿಡಿದು ಅವರು ಸಂಚರಿಸುವ ಕಾರುಗಳವರೆಗೂ ಎಲ್ಲದ್ದನ್ನೂ ಸಹಾ ಜನರು ಬಹಳ ಕುತೂಹಲದಿಂದ ನೋಡುವುಸು ನಿಜ. ಅಭಿಮಾನಿಗಳಿಗಂತೂ ತಮ್ಮ ನೆಚ್ಚಿನ ಸಿನಿನಾ ನಟ, ನಟಿಯರ ಕುರಿತಾದ ಪ್ರತಿಯೊಂದು ಅಪ್ಡೇಟ್ ಸಹಾ ತಿಳಿಯುವ ಕುತೂಹಲ ಮತ್ತು ಆಸಕ್ತಿ ಸಾಮಾನ್ಯಕ್ಕಿಂತ ಹೆಚ್ಚಾಗಿಯೇ ಇರುತ್ತದೆ. ಇನ್ನು ಸಿನಿಮಾ ತಾರೆಯರ ಐಶಾರಾಮೀ ಕಾರುಗಳನ್ನು ಖರೀದಿ ಮಾಡುವ ವಿಚಾರವಾಗಿ ಆಗಾಗ ಸುದ್ದಿಗಳು ಆಗುತ್ತಲೇ ಇರುತ್ತವೆ.

ಕನ್ನಡ ಚಿತ್ರರಂಗದ ವಿಚಾರಕ್ಕೆ ಬಂದರೆ ಇಲ್ಲಿನ‌ ನಟರಲ್ಲಿ ಕಾರಿನ ಕ್ರೇಜ್ ಹೆಚ್ಚಾಗಿರುವ ನಟ ಎಂದರೆ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು. ನಟ ದರ್ಶನ್ ಅವರು ಅನೇಕ ಸಂದರ್ಭಗಳಲ್ಲಿ ಅವರು ಖರೀದಿ ಮಾಡುವ ಹೊಸ ಐಶಾರಾಮೀ ಕಾರುಗಳು ವಿಚಾರವಾಗಿಯೇ ಸಾಕಷ್ಟು ಸುದ್ದಿಯಾಗುತ್ತಾರೆ. ಈಗ ನಟ ದರ್ಶನ್ ಅವರು ಒಂದು ಹೊಸ ಕಾರನ್ನು ಖರೀದಿ ಮಾಡಿದ್ದು, ಈಗ ಅವರು ಮತ್ತೊಂದು ದುಬಾರಿ ಐಶಾರಾಮೀ ಕಾರಿನ ಮಾಲೀಕರಾಗಿದ್ದಾರೆ. ಹಾಗಾದರೆ ನಟ ದರ್ಶನ್ ಅವರು ಖರೀದಿ ಮಾಡಿದ ಈ ಹೊಸ ಕಾರು ಯಾವುದು? ಅದರ ಬೆಲೆ ಎಷ್ಟು? ತಿಳಿಯೋಣ ಬನ್ನಿ.

ದರ್ಶನ್ ಅವರು ಖರೀದಿ ಮಾಡಿರುವ ಹೊಸ ಕಾರಿನ ಹೆಸರು ಲ್ಯಾಂಡ್ ರೋವರ್ ಡಿಫೆಂಡರ್ ಎನ್ನಲಾಗಿದೆ. ಇದು 2022 ಮಾಡೆಲ್ ಆಗಿದ್ದು, ಈ ದುಬಾರಿ ಕಾರಿನ ಬೆಲೆ 1.20 ಕೋಟಿ ರೂಪಾಯಿಗಳಾಗಿದೆ.‌ ದರ್ಶನ್ ಅವರ ಬಳಿ ಈಗಾಗಲೇ ಇರುವ ಹೊಸ ಕಾರುಗಳ ಪಟ್ಟಿಗೆ ಇದೀಗ ಈ ಹೊಸ ಕಾರು ಸೇರ್ಪಡೆಯಾಗಿದೆ. ದರ್ಶನ್ ಅವರು ಈ ಕಾರಿನಲ್ಲಿ ಜಾಲಿ ರೈಡ್ ಹೋಗಿದ್ದರು, ಅದರ ಫೋಟೋಗಳು ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ದರ್ಶನ್ ಅವರ ಅಭಿಮಾನಿಗಳು ಹೊಸ ಕಾರು ನೋಡಿ ಖುಷಿ ಪಡುತ್ತಿದ್ದಾರೆ.

Leave a Reply

Your email address will not be published.