ದಪ್ಪ ಆಗಿ, ಮೇಕಪ್ ಇಲ್ಲದೇ ಟ್ರೋಲ್ ಆಗಿದ್ದ ನಟ ಪ್ರಭಾಸ್ ವಿಚಾರವಾಗಿ ಆದಿಪುರುಷ್ ನಿರ್ದೇಶಕ ತಗೊಂಡ ನಿರ್ಧಾರ ನೋಡಿ ಹೇಗಿದೆ.
ಪ್ಯಾನ್ ಇಂಡಿಯಾ ಹೀರೋ, ಟಾಲಿವುಡ್ ನಟ ಪ್ರಭಾಸ್ ಅವರು ಪ್ರಸ್ತುತ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಧೇ ಶ್ಯಾಮ್ ಬಿಡುಗಡೆಗೆ ಕಾದಿದ್ದರೆ, ಸಲಾರ್ ಮತ್ತು ಆದಿ ಪುರುಷ್ ಸಿನಿಮಾಗಳ ಚಿತ್ರೀಕರಣವು ಭರದಿಂದ ಸಾಗಿದೆ. ಪ್ರಭಾಸ್ ಅವರ ಚಿತ್ರ ಜೀವನದಲ್ಲಿ ಮೈಲಿಗಲ್ಲು ಎನಿಸಿರುವ ಬಾಹುಬಲಿ ಸಿನಿಮಾದ ನಂತರ ಅವರ ಅಭಿಮಾನಿಗಳ ಸಂಖ್ಯೆ ಕೂಡಾ ಹಿಂದೆಂದಿಗಿಂತಲೂ ಅಧಿಕವಾಗಿದೆ. ಒಂದು ಕಡೆ ಜನಪ್ರಿಯತೆ ಹೆಚ್ಚಿದರೆ ಮತ್ತೊಂದು ಕಡೆ ಅವರಿಗೆ ಟ್ರೋಲಿಗರ ಕಾಟ ಕೂಡಾ ಅದೇ ಮಟ್ಟದಲ್ಲಿ ಹೆಚ್ಚಾಗಿದ್ದು, ಕಳೆದ ಕೆಲವು ದಿನಗಳಲ್ಲಿ ಪ್ರಭಾಸ್ ಸಿಕ್ಕಾಪಟ್ಟೆ ಟ್ರೋಲ್ ಗೆ ಆಹಾರವಾಗಿದ್ದಾರೆ.
ಇತ್ತೀಚಿಗೆ ಮುಂಬೈನಲ್ಲಿ ನಟ ಪ್ರಭಾಸ್ ಅವರು ಮೇಕಪ್ ಇಲ್ಲದೇ ಕ್ಯಾಮರಾ ಕಣ್ಣುಗಳಿಗೆ ಸೆರೆ ಸಿಕ್ಕಿದ್ದರು. ಆ ಫೋಟೋಗಳನ್ನು ನೋಡಿದ ಮೇಲೆ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ಪ್ರಭಾಸ್ ಅವರನ್ನು ವಡಾ ಪಾವ್, ಚಾಚಾ, ಅಂಕಲ್, ಹಾಲು ಮಾರೋನು ಎಂದೆಲ್ಲಾ ವ್ಯಂಗ್ಯ ಮಾಡಿದ್ದ ಪೋಸ್ಟ್ ಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದವು. ಇದು ದೊಡ್ಡ ಸುದ್ದಿಯಾಗಿತ್ತು. ಈಗ ಇವೆಲ್ಲವುಗಳ ಬೆನ್ನಲ್ಲೇ ಪ್ರಭಾಸ್ ಅವರ ತೂಕದ ವಿಚಾರ ಇದೀಗ ಸುದ್ದಿಯಾಗಿದೆ.
ಹೌದು ಪ್ರಭಾಸ್ ಅವರು ಪ್ರಸ್ತುತ ನಿರ್ದೇಶಕ ಓಂ ರಾವತ್ ಅವರ ಆದಿಪುರುಷ್ ಸಿನಿಮಾದಲ್ಲಿ, ಕೃತಿ ಸೆನನ್ ಜೊತೆ ನಟಿಸುತ್ತಿದ್ದಾರೆ. ಈ ಸಿನಿಮಾ ರಾಮನ ಕಥೆಯನ್ನು ಆಧರಿಸಿದ ಸಿನಿಮಾ ಆಗಿದೆ. ಆದರೆ ಪ್ರಭಾಸ್ ಅವರ ದೇಹದ ತೂಕ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು, ನಿರ್ದೇಶಕ ಓಂ ರಾವತ್ ಅವರಿಗೆ ಅದೇ ಒಂದು ಚಿಂತೆಯಾಗಿದೆ. ದಪ್ಪಗಿರುವ ರಾಮನನ್ನು ಜನ ಇಷ್ಟ ಪಡುವುದಿಲ್ಲವೇನೋ ಎನ್ನುವುದು ನಿರ್ದೇಶಕರ ಅನುಮಾನವಾಗಿದೆ.
ಇದೇ ಹಿನ್ನೆಲೆಯಲ್ಲಿ ನಿರ್ದೇಶಕ ಓಂ ರಾವತ್ ಅವರು ಒಂದು ಹೊಸ ನಿರ್ಧಾರವನ್ನು ಮಾಡಿದ್ದಾರೆ ಎನ್ನಲಾಗಿದೆ. ನಿರ್ದೇಶಕ ಓಂ ರಾವತ್ ಅವರು ಪ್ರಭಾಸ್ ಅವರ ತೂಕವನ್ನು ಕಡಿಮೆ ಮಾಡಿಸಲು ಅವರಿಗೆ ವಿದೇಶದಲ್ಲಿ ಚಿಕಿತ್ಸೆಯನ್ನು ಕೊಡಿಸಲು ಆಲೋಚನೆಯನ್ನು ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಈ ಚಿಕಿತ್ಸೆಯ ನಂತರವೇ ಸಿನಿಮಾ ಶೂಟಿಂಗ್ ಪ್ರಾರಂಭ ಮಾಡಲಾಗುವುದು ಎಂದು ಸಹಾ ತಿಳಿದು ಬಂದಿದೆ.
ನಟ ಪ್ರಭಾಸ್ ಅವರು ಬಾಹುಬಲಿ ಮತ್ತು ಸಾಹೋ ಸಿನಿಮಾಗಳ ವೇಳೆ ತನ್ಮ ಫಿಟ್ನೆಸ್ ನಿಂದಾಗಿಯೇ ಅಭಿಮಾನಿಗಳ ಮನಸ್ಸಿಗೆ ಲಗ್ಗೆ ಇಟ್ಟಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ಅವರ ಹೆಚ್ಚಾದ ತೂಕವು ನಿರ್ದೇಶಕರ ಪಾಲಿಗೆ ಸಮಸ್ಯೆ ಎನಿಸಿ ಹೋಗಿದೆ. ಆದ್ದರಿಂದಲೇ ಓಂ ರಾವತ್ ಅವರು ಇದೀಗ ಪ್ರಭಾಸ್ ಅವರನ್ನು ತೂಕ ಇಳಿಸಲು ವಿದೇಶಕ್ಕೆ ಕಳುಹಿಸಲು ಸಜ್ಜಾಗಿದ್ದಾರೆ. ಶೀಘ್ರದಲ್ಲೇ ಪ್ರಭಾಸ್ ವಿದೇಶಕ್ಕೆ ಹಾರುವುದು ಗ್ಯಾರಂಟಿ ಎನ್ನಲಾಗುತ್ತಿದೆ.