HomeEntertainmentದಕ್ಷಿಣ ಸಿನಿ ರಂಗಕ್ಕೆ ಜಾನ್ವಿ ಕಪೂರ್ ಎಂಟ್ರಿ? ಈ ಸ್ಟಾರ್ ನಟನ ಸಿನಿಮಾಕ್ಕೆ ನಾಯಕಿಯಾಗಲಿದ್ದಾರೆ ಜಾನ್ವಿ

ದಕ್ಷಿಣ ಸಿನಿ ರಂಗಕ್ಕೆ ಜಾನ್ವಿ ಕಪೂರ್ ಎಂಟ್ರಿ? ಈ ಸ್ಟಾರ್ ನಟನ ಸಿನಿಮಾಕ್ಕೆ ನಾಯಕಿಯಾಗಲಿದ್ದಾರೆ ಜಾನ್ವಿ

ಬಾಲಿವುಡ್ ನ ಯುವ ನಟಿ ಜಾನ್ವಿ ಕಪೂರ್ ಬಾಲಿವುಡ್ ನಲ್ಲಿ ಒಂದರ ನಂತರ ಮತ್ತೊಂದು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಜಾನ್ವಿ ಯಾವುದೇ ಸೂಪರ್ ಹಿಟ್ ಸಿನಿಮಾ ನೀಡಿಲ್ಲ. ಆದರೂ ಸ್ಟಾರ್ ಕಿಡ್ ಗಳಿಗೆ ಬೇಡಿಕೆ ಕುಗ್ಗದ ಕಾರಣ ಜಾನ್ವಿ ಸಹಾ ಸಿನಿಮಾ, ಜಾಹೀರಾತು ಹೀಗೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ನಟಿ ಜಾನ್ವಿ ಅವರ ತಾಯಿ ಹಿರಿಯ ನಟಿ ದಿವಂಗತ ಶ್ರೀದೇವಿ ಅವರು ಭಾರತೀಯ ಸಿನಿಮಾ ರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ನಟಿ ಶ್ರೀದೇವಿ ತಮ್ಮ ಸಿನಿಮಾ ಜರ್ನಿಯನ್ನು ದಕ್ಷಿಣ ಸಿನಿಮಾ ರಂಗದ ಮೂಲಕ ಆರಂಭಿಸಿ, ದೊಡ್ಡ ಸ್ಟಾರ್ ನಟಿಯಾದವರು. ಇಲ್ಲಿನ ಎರಡು ಜನರೇಶನ್ ಗಳ ಎಲ್ಲಾ ದೊಡ್ಡ ಸ್ಟಾರ್ ಗಳ ಜೊತೆಗೆ ತೆರೆಯನ್ನು ಹಂಚಿಕೊಂಡವರು ಶ್ರೀದೇವಿ.

ಆದರೆ ನಟಿ ಶ್ರೀದೇವಿ ಅವರ ಮಗಳು ಜಾನ್ವಿ ಮಾತ್ರ ಇದುವರೆಗೂ ದಕ್ಷಿಣದ ಸಿನಿಮಾಗಳಲ್ಲಿ ನಟಿಸಿಲ್ಲ. ಜಾನ್ವಿ ಯನ್ನು ದಕ್ಷಿಣ ಸಿನಿಮಾಗಳಿಗೆ ಕರೆ ತರುವ ಪ್ರಯತ್ನಗಳು ನಡೆಯುತ್ತಿವೆ ಎನ್ನುವ ಸುದ್ದಿಗಳು ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ಈಗ ಮತ್ತೊಮ್ಮೆ ಅಂತಹುದೇ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ತೆಲುಗು ಸಿನಿಮಾ ರಂಗದ ಯುವ ಸ್ಟಾರ್ ನಟ ರಾಮ್ ಚರಣ್ ತೇಜಾ ತ್ರಿಬಲ್ ಆರ್ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಸಾಲು ಸಾಲು ಹೊಸ ಸಿನಿಮಾಗಳಲ್ಲಿ ನಟ ತೊಡಗಿಕೊಂಡಿದ್ದಾರೆ. ಈಗ ನಟನ ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಒಂದು ಹೊರ ಬಂದಿದೆ.

ತೆಲುಗಿನಲ್ಲಿ ದೊಡ್ಡ ಯಶಸ್ಸನ್ನು ಪಡೆದಂತರ ಉಪ್ಪೆನ ಸಿನಿಮಾದ ನಿರ್ದೇಶಕ ರಾಮ್ ಚರಣ್ ಜೊತೆಗೆ ಹೊಸ ಸಿನಿಮಾವೊಂದನ್ನು ಮಾಡುವುದಾಗಿ ಇತ್ತೀಚಿಗೊಂದು ಘೋಷಣೆಯನ್ನು ಮಾಡಿದ್ದರು. ಪ್ರಸ್ತುತ ದಕ್ಷಿಣದ ಸ್ಟಾರ್ ನಿರ್ದೇಶಕ ಶಂಕರ್ ಅವರ ಸಿನಿಮಾದಲ್ಲಿ ರಾಮ್ ಚರಣ್ ನಟಿಸುತ್ತಿದ್ದು, ಈ ಸಿನಿಮಾ ಮುಗಿದ ನಂತರ ಬುಚ್ಚಿ ಬಾಬು ಜೊತೆ ಹೊಸ ಸಿನಿಮಾ ಪ್ರಾರಂಭ ಮಾಡಲಿದ್ದಾರೆ ಎನ್ನಲಾಗಿದೆ. ರಾಮ್ ಚರಣ್ ನಾಯಕನಾಗಿ ನಟಿಸಲಿರುವ ಈ ಹೊಸ ಸಿನಿಮಾದಲ್ಲಿಯೇ ಇದೀಗ ಜಾನ್ವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಇದೊಂದು ಲವ್ ಸ್ಟೋರಿ ಕಥೆಯನ್ನು ಒಳಗೊಂಡಿದ್ದು, ಹೊಸ ಶೈಲಿಯಲ್ಲಿ ಸಿನಿಮಾವನ್ನು ತೆರೆಗೆ ತರಲು ಪ್ರಯತ್ನವನ್ನು ಮಾಡಲಾಗುವುದು ಎನ್ನಲಾಗುತ್ತಿದೆ. ಈ ಹಿಂದೆ ಜಾನ್ವಿ ಕಪೂರ್ ಲೈಗರ್ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಅನಂತರ ಅದು ನಟಿ ಅನನ್ಯಾ ಪಾಂಡೆ ಪಾಲಾಗಿತ್ತು. ಆದರೆ ಈಗ ರಾಮ್ ಚರಣ್ ಅವರ ಹೊಸ ಸಿನಿಮಾ ಮೂಲಕ ಜಾನ್ವಿ ಕಪೂರ್ ದಕ್ಷಿಣ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದೇ ವೇಳೆ ಈಗ ಬಾಲಿವುಡ್ ಸಿನಿಮಾಗಳು ಪಡೆಯುತ್ತಿರುವ ನೀರಸ ಪ್ರತಿಕ್ರಿಯೆಯಿಂದ ಸಹಜವಾಗಿಯೇ ಬಾಲಿವುಡ್ ಮಂದಿ ದಕ್ಷಿಣ ಸಿನಿಮಾ ಮಾಡಲು ಸಿದ್ಧರಿದ್ದಾರೆ ಎನ್ನುವುದು ಟಾಕ್.

- Advertisment -